ಕರ್ನಾಟಕ

ಆಟೋಗೆ ಟ್ರ್ಯಾಕ್ಟರ್ ಟ್ರ್ಯಾಲಿ ಡಿಕ್ಕಿ- ತಾಯಿ ಮಗು ಸಾವು

Pinterest LinkedIn Tumblr

kolle-1

ಕೊಳ್ಳೇಗಾಲ: ಆಟೋಗೂ, ಟ್ರಾಕ್ಟರ್ ಟ್ರಾಲಿಗೂ ಡಿಕ್ಕಿಯಾದ ಪರಿಣಾಮ ಆಟೋದಲ್ಲಿದ್ದ ತಾಯಿ ಮತ್ತು ಮಗು ಸ್ಥಳದಲ್ಲೇ ಮೃತಪಟ್ಟು ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ.

ಬೆಂಗಳೂರಿನ ಗುರುಪ್ಪನ ಪಾಳ್ಯ ಬಡಾವಣೆಯ ನಿವಾಸಿಗಳಾದ ಐಯಿಸಾ (20) ಆಕೆಯ ಮಗು ಅಲಿಯಾ (ಏಳು ತಿಂಗಳು) ಮೃತಪಟ್ಟ ದುದೈರ್ವಿಗಳು. ಇವರುಗಳು ಮಂಗಳವಾರದಂದು ಬೆಂಗಳೂರಿನಿಂದ ತಾಲ್ಲೂಕಿನ ಮುಳ್ಳೂರು ಗ್ರಾಮಕ್ಕೆ ಆಟೋವೊಂದರಲ್ಲಿ ಅಜೀರಾ ಭಾನು, ಮುಸ್ತಾರಿ, ಐಯಿಸಾ, ಅಲಿಯಾ, ಇರ್ಷಾರ್ ಅಹಮ್ಮದ್, ಶಬ ತೌಸರ್ ಇವರುಗಳು ಮೃತ ಐಯಿಸಾ ರವರ ತಮ್ಮ ಸೈಯದ್ ಸುಲ್ತಾನ್ ರವರಿಗೆ ಏಪ್ರಿಲ್ 3 ರಂದು ಬೆಂಗಳೂರಿನಲ್ಲಿ ಮದುವೆಯ ಆಮಂತ್ರಣ ನೀಡಲು ಮುಳ್ಳೂರಿನ ಅಜ್ಜಿಯ ಮನೆಗೆ ಬಂದು ಹೋಗವಾಗ ಗ್ರಾಮದ ಬಳಿ ಎದುರಿನಿಂದ ಬಂದ ಟ್ರಾಕ್ಟರ್ ಟ್ರಾಲಿಗೆ ಡಿಕ್ಕಿ ಹೊಡೆದ ಪರಿಣಾಮ ತಾಯಿ ಮತ್ತು ಮಗು ಸ್ಥಳದಲ್ಲೇ ಮೃತಪಟ್ಟು ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿ, ಮೂವರು ಯಾವುದೇ ಗಾಯಗಳಿಲ್ಲದೆ ಪ್ರಾಣಾಪಯದಿಂದ ಪಾರಾದ ಘಟನೆ ನಡೆದಿದ್ದು, ಆಟೋ ಸಂಪೂರ್ಣ ಜಖಂಗೊಂಡಿದೆ.

ವಿಷಯ ತಿಳಿದ ತಕ್ಷಣವೇ ವೃತ್ತ ಇನ್ಸ್‍ಪೆಕ್ಟರ್ ಅಮರನಾರಯಣ್, ಸಬ್‍ಇನ್‍ಪೆಕ್ಟರ್ ಪಿಸಿ ರಾಜು, ಎಎಸ್‍ಐ ಪುಟ್ಟಸ್ವಾಮಿ, ಪೊಲೀಸ್ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿ, ಮೃತ ದೇಹಗಳನ್ನು ಗ್ರಾಮಸ್ಥರ ಸಹಾಯದೊಡನೆ ಪಟ್ಟಣದ ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ಸಾಗಿಸಲಾಯಿತು. ಟ್ರಾಕ್ಟರ್‍ನ್ನು ವಶಪಡಿಸಿಕೊಂಡು ಚಾಲಕ ಕಲಿಯೂರು ಗ್ರಾಮದ ಚಂದ್ರಶೇಖರ್‍ನನ್ನು ಬಂಧಿಸಿದರು.

ಪ್ರಭಾರ ಡಿವೈಎಸ್ಪಿ ಮಹಂತೇಶ್ ಮುಪ್ಪಿನಮಠ ಭೇಟಿ ನೀಡಿ, ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

Write A Comment