
ಬೆಂಗಳೂರು: ಐದು ವರ್ಷದ ಮುದ್ದಾಗ ಮಗಳು ತನ್ನದ್ದಲ್ಲ ಎಂದು ಶಂಕಿಸಿ ಪಾಪಿ ತಂದೆ ಮಗಳ ಕುತ್ತಿಗೆಯನ್ನು ಹಿಸುಕಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಕೆಂಗೇರಿಯ ಉತ್ತರಹಳ್ಳಿಯ ಬಿಜೆಎಸ್ ಗ್ಲೋಬಲ್ ಆಸ್ಪತ್ರೆಯ ಸಮೀಪವಿರುವ ತೋಪಿನಲ್ಲಿ ಮಗಳ ಕತ್ತು ಹಿಸುಕಿ ಹತ್ಯೆ ಮಾಡಿದ್ದಾನೆ.
ತಮ್ಮ ಮಗಳು ಲಕ್ಷ್ಮಿಯನ್ನು ಅವರ ತಂದೆ ಲೋಕೇಶ್ ಹತ್ಯೆ ಮಾಡಿದ್ದಾನೆ ಎಂದು ಪತ್ನಿ ಬನಶಂಕರಿಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನನ್ವಯ ಲೋಕೇಶ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಮಗು ತನ್ನದ್ದಲ್ಲ ಎಂದು ಪತ್ನಿ ಜತೆ ಪದೇ ಪದೇ ಜಗಳವಾಡುತ್ತಿದ್ದ ಲೋಕೇಶ್ ಇದೀಗ ಮಗಳನ್ನೇ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.