ಕರ್ನಾಟಕ

ಒಳ್ಳೆಯ ಕಥೆಯನ್ನು ರಿಮೇಕ್ ಮಾಡುತ್ತಿದ್ದೇನೆ, ಸಿನಿಮಾವನ್ನಲ್ಲ: ರಮೇಶ್ ಅರವಿಂದ್

Pinterest LinkedIn Tumblr

Ramesh Aravind

ಬಹುಮುಖ ಪ್ರತಿಭೆಯಾಗಿರುವ ರಮೇಶ್ ಅರವಿಂದ್ ಅವರಿಗೆ ದಿನದ 24 ಗಂಟೆಗಳು ಕೂಡ ಸಾಕಾಗುವುದಿಲ್ಲವಂತೆ. ಎಲ್ಲರೂ ದಿನಕ್ಕೆ 8-10 ಗಂಟೆಗಳ ಕಾಲ ದುಡಿದರೆ ರಮೇಶ್ ಮಾತ್ರ 16-17 ಗಂಟೆಗಳ ಕೆಲಸ ಮಾಡುತ್ತಾರಂತೆ.

ಇಷ್ಟೊಂದು ಬಿಝಿ ಆಗಿರುವ ರಮೇಶ್ ಅರವಿಂದ್ ಅವರು ತಮ್ಮ ಬಿಡುವಿನ ಸಮಯದಲ್ಲೂ ಕಾರ್ಯಕ್ರಮಗಳನ್ನು ಮಾಡುತ್ತಿದ್ದು, ಇದರಲ್ಲಿ ವೀಕೆಂಡ್ ವಿತ್ ರಮೇಶ್ ಕೂಡ ಒಂದಾಗಿದೆ. ಇದರಂತೆ ಈಗಷ್ಟೇ ಸ್ಯಾಂಡಲ್ ವುಡ್’ನ ನಿರೀಕ್ಷಿತ ಚಿತ್ರವೆಂದೇ ಹೇಳಲಾಗುತ್ತಿರುವ ಪುಷ್ಪಕ ವಿಮಾನ ಚಿತ್ರದ ಶೂಟಿಂಗ್”ನ್ನು ಮುಗಿಸಿದ್ದು, ಚಿತ್ರದ ಹಾಡುಗಳ ಶೂಟಿಂಗ್ ಮಾತ್ರಿ ಬಾಕಿಯಿದೆ.

ಇನ್ನು ರಮೇಶ್ ಅವರು ನಿರ್ದೇಶಕನದಲ್ಲೂ ಬಿಝಿಯಾಗಿದ್ದು ರಾಕ್ ಲೈನ್ ವೆಂಕಟೇಶ್ ಹಾಗೂ ಅಲ್ಲು ಅರವಿಂದ್ ನಿರ್ಮಾಣದ ಗಂಡು ಎಂದರೆ ಗಂಡು ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದಲ್ಲಿ ನಟ ಗಣೇಶ್ ನಾಯಕ ಹಾಗೂ ನಾಯಕಿಯಾಗಿ ಸಾನ್ವಿ ಶ್ರೀವಾತ್ಸವ್ ಕೆಲಸ ಮಾಡುತ್ತಿದ್ದಾರೆ. ಚಿತ್ರದ ಚಿತ್ರೀಕರಣ ಇಂದಿನಿಂದ ಆರಂಭವಾಗುತ್ತಿದ್ದು, ಚಿತ್ರದ ನಿರ್ದೇಶನಕ್ಕೆ ಈಗಾಗಲೇ ರಮೇಶ್ ಅವರಿಗೆ ಡೆಡ್ ಲೈನ್ ದೊರೆತಿದೆಯಂತೆ.

ಚಿತ್ರದ ಕುರಿತಂತೆ ಮಾತನಾಡಿರುವ ರಮೇಶ್ ಅವರು, ಪ್ರತಿಯೊಂದು ಸಿನಿಮಾದಲ್ಲೂ ಒಂದಲ್ಲಾ ಒಂದು ರೀತಿಯ ಉತ್ಸಾಹ ಎಂಬುದಿರುತ್ತದೆ. ಈ ಚಿತ್ರದಲ್ಲೂ ಕೂಡ ಇದೆ. ನಾನು ಯಾವುದೇ ಯೋಜನೆಯನ್ನು ಕೈಗೆತ್ತಿಕೊಂಡರೂ, ಆದರ ಕಥೆಯನ್ನು ನಾನು ತೆಗೆದುಕೊಳ್ಳುತ್ತೇನೆ ಮತ್ತು ನನ್ನ ದೃಷ್ಟಿಯಲ್ಲಿ, ನನ್ನ ಸೃಜನಶೀಲತೆಯ ಮೂಲಕ ಮಾಡುತ್ತೇನೆ. ರಾಮ ಶಾಮ ಭಾಮ ಚಿತ್ರ ಕೂಡ ಅದೇ ರೀತಿಯಲ್ಲಿ ಮಾಡಿದ್ದೆ. ಚಿತ್ರೀಕರಣವಾಗುವ ಸ್ಥಳಕ್ಕೆ ಎಲ್ಲರಿಗೂ ಮೊದಲು ನಾನು ಹೋಗಲು ಬಯಸುತ್ತೇನೆ. ಚಿತ್ರೀಕರಣದ ಸ್ಥಳವನ್ನು ಪರಿಶೀಲಿಸಿ, ಎಲ್ಲವೂ ಸರಿಯಿದೆಯೇ ಎಂಬುದನ್ನು ಪರಿಶೀಲಿಸುತ್ತೇನೆ ಎಂದು ಹೇಳಿದ್ದಾರೆ.

ನಟರು ನಿರ್ದೇಶಕರಾಗುವುದು ನಿಜಕ್ಕೂ ಉತ್ತಮವಾದದ್ದು, ನಾನು ಈ ವರೆಗೂ 150 ಕ್ಕೂ ಹೆಚ್ಚು ಸಿನಿಮಾಗಳನ್ನು ಮಾಡಿದ್ದೇನೆ. ನನ್ನ ಅನುಭವವನ್ನು ನಿಜಕ್ಕೂ ಯಾರೂ ಮೀರಿಸಲು ಸಾಧ್ಯವಿಲ್ಲ. ನಟರು ಹೇಗೆ ಕೆಲಸ ಮಾಡುತ್ತಾರೆಂಬುದು ನನಗೆ ಗೊತ್ತಿದೆ. ಅವರಿಗೆ ಯಾವುದು ಆಗುತ್ತದೆ, ಯಾವುದು ಆಗುವುದಿಲ್ಲ ಎಂಬುದು ನನಗೆ ಅರ್ಥವಾಗುತ್ತದೆ. ಸಾಮಾನ್ಯ ನಿರ್ದೇಶಕರಿಗಿಂತ ನಾನು ಚೆನ್ನಾಗಿ ಅರ್ಥ ಮಾಡಿಕೊಳ್ಳಬಲ್ಲೆ. ಇದು ನಟರಿಗೂ ಹಾಗೂ ಇನ್ನಿತರರಿಗೆ ಸಹಾಯಕವಾಗುತ್ತದೆ. ಕಿರುತೆರೆಯಲ್ಲಿ ಮೂಡಿಬರುತ್ತಿರುವ ವೀಕೆಂಡ್ ವಿತ್ ರಮೇಶ್ ಕೂಡ ಇಂದೂ ಯಶಸ್ಸು ಗಳಿಸುತ್ತಿದೆ. ಜನರು ನನ್ನನ್ನು ಇಷ್ಟ ಪಡುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

Write A Comment