ಕರ್ನಾಟಕ

ಉಪಚುನಾವಣೆಗೆ ಬಹಿರಂಗ ಪ್ರಚಾರ ಅಂತ್ಯ

Pinterest LinkedIn Tumblr

rehman-sharif-750x435-Amzsqಬೆಂಗಳೂರು(ಫೆ. 11): ಹೆಬ್ಬಾಳ, ಬೀದರ್​ ಹಾಗೂ ದೇವದುರ್ಗದಲ್ಲಿ ಮತದಾನಕ್ಕೆ ಇನ್ನು ಎರಡೇ ದಿನ ಬಾಕಿ. ಇವತ್ತು ಗುರುವಾರ ಈ ಕ್ಷೇತ್ರಗಳಲ್ಲಿ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ.

ಹೆಬ್ಬಾಳದಲ್ಲಿ ಗುರುವಾರ ಭರ್ಜರಿ ಪ್ರಚಾರ ನಡೆಯಿತು. ಬಿಜೆಪಿ ಪರವಾಗಿ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಹಾಗೂ ಮಾಜಿ ಸಿಎಂ ಡಿವಿ ಸದಾನಂದಗೌಡ ಹೆಬ್ಬಾಳದಲ್ಲಿ ಬೈಕ್​ ರ್ಯಾಲಿ ನಡೆಸಿದರು. ಈ ವೇಳೆ ಡಿವಿಎಸ್​ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು.
ಅತ್ತ ಸಿಎಂ ಸಿದ್ದರಾಮಯ್ಯ ತಮ್ಮ ಸಚಿವ ಸಂಪುಟದ ಸಹೋದ್ಯೋಗಿಗಳ ಜತೆ ರೋಡ್​ ಶೋ ನಡೆಸಿ, ಬಿಜೆಪಿ ವಿರುದ್ಧ ಕೆಂಡಕಾರಿದರು.

ಬಹಿರಂಗ ಪ್ರಚಾರದ ಕೊನೆ ದಿನದಂದು ಹೆಬ್ಬಾಳ, ಬೀದರ್​, ದೇವದುರ್ಗ ಈ ಮೂರೂ ಕಡೆಯೂ ಜೆಡಿಎಸ್’​ನ ಘಟಾನುಘಟಿ ನಾಯಕರು ಪ್ರಚಾರದ ಕಣಕ್ಕಿಳಿದಿರಲಿಲ್ಲ. ಇತರ ಪಕ್ಷಗಳ ಅಭ್ಯರ್ಥಿಗಳಂತೂ ಕೊನೆಯ ದಿನದಂದು ಮತದಾರರನ್ನು ಸೆಳೆಯಲು ಭಾರೀ ಕಸರತ್ತು ನಡೆಸಿದರು.

ನಾಳೆ ಶುಕ್ರವಾರ ಅಭ್ಯರ್ಥಿಗಳು ಮನೆಮನೆ ಪ್ರಚಾರ ಮಾಡುವ ಅವಕಾಶ ನಡೆಯಲಿದ್ದು, ಫೆ. 13ರಂದು (ಶನಿವಾರ) ಮತದಾರ ಅಭ್ಯರ್ಥಿಗಳ ಭವಿಷ್ಯ ಬರೆಯಲಿದ್ದಾನೆ.

Write A Comment