ಕರ್ನಾಟಕ

ಹೊಟ್ಟೆಯೊಳಗೆ ಒಂದು ಕೆ.ಜಿ ಕೊಕೇನ್ ಸಾಗಣೆ ಯತ್ನ: ನೈಜೀರಿಯಾ ಪ್ರಜೆ ಬಂಧನ

Pinterest LinkedIn Tumblr

ARRESTED-600

ಬೆಂಗಳೂರು: ಹೊಟ್ಟೆಯಲ್ಲಿ ₹ 5 ಕೋಟಿ ಮೌಲ್ಯದ ಸುಮಾರು 1 ಕೆ.ಜಿ.ಯಷ್ಟು ಕೊಕೇನ್ ಅನ್ನು ಅಕ್ರಮವಾಗಿ ಸಾಗಿಸುತ್ತಿದ್ದ ನೈಜೀರಿ ಯಾದ ಪ್ರಜೆಯೊಬ್ಬನನ್ನು ಮಾದಕ ವಸ್ತು ನಿಯಂತ್ರಣ ದಳದ ಅಧಿಕಾರಿಗಳು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ (ಕೆಐಎಎಲ್‌) ಬಂಧಿಸಿದ್ದಾರೆ.

ಇಮ್ಯಾನ್ಯುಯಲ್‌ (28) ಬಂಧಿತ. ಕೊಕೇನ್ ಗುಳಿಗೆಗಳು ತುಂಬಿದ್ದ 70 ನಿರೋಧ್‌ಗಳನ್ನು ನುಂಗಿದ್ದ ಈತ, ಫೆ. 8ರಂದು ಅಬುದಾಬಿಯಿಂದ ಕೆಐಎಎಲ್‌ಗೆ ಬೆಳಿಗ್ಗೆ 7.30ರ ಸುಮಾರಿಗೆ ಬಂದಿಳಿದ. ಈ ಕುರಿತು ದೊರೆತ ಖಚಿತ ಮಾಹಿತಿ ಮೇರೆಗೆ ಆತನನ್ನು ವಶಕ್ಕೆ ಪಡೆದು ತಪಾಸಣೆಗೆ ಒಳಪಡಿಸಿ ದಾಗ, ಹೊಟ್ಟೆಯೊಳಗೆ ಕೊಕೇನ್ ಗುಳಿಗೆಗಳು ಇರುವುದು ಗೊತ್ತಾಯಿತು. ಕೂಡಲೇ ಆತನನ್ನು ಬಂಧಿಸಿ, ವಿಕ್ಟೋರಿಯಾ ಆಸ್ಪತ್ರೆಗೆ ಕರೆ ತರಲಾಯಿತು ಎಂದು ಅಧಿಕಾರಿಗಳು ಹೇಳಿದರು.

ಮಲ ವಿಸರ್ಜನೆಯ ಮೂಲಕವೇ ಆತನ ಹೊಟ್ಟೆಯಲ್ಲಿದ್ದ ಕೊಕೇನ್ ತುಂಬಿದ್ದ ನಿರೋಧ್ ಪಾಕೆಟ್‌ಗಳನ್ನು ಹೊರತೆಗೆ ಯಲಾಗಿದೆ. ಆತನ ಆರೋಗ್ಯ ಸದ್ಯ ಸುಧಾರಿಸಿದ್ದು, ಸಾಮಾನ್ಯ ವಾರ್ಡ್‌ಗೆ ಸ್ಥಳಾಂತರಿಸಲಾಗಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದರು.

Write A Comment