ಕರ್ನಾಟಕ

ಬೋರ್‍ವೆಲ್ ನೀರು ಬಳಸಿದ ಮೇಲೆ ತಲೆ ಬೋಳಾಯ್ತು!

Pinterest LinkedIn Tumblr

bald

ಮಧುಬನಿ: ಧೂಳು, ಪ್ರದೂಷಣೆ, ಹೊಗೆ, ತಲೆಯಲ್ಲಿರುವ ಹೊಟ್ಟು ಇದರಿಂದ ತಲೆಕೂದಲು ಉದುರಿ ಕ್ರಮೇಣವಾಗಿ ಬೋಳಾಗುತ್ತದೆ. ಆದರೆ ಬೋರ್‍ವೆಲ್ ನೀರು ಬಳಸಿದ್ದಕ್ಕೆ ಈ ಕುಟುಂಬದವರೆಗೆಲ್ಲಾ ಬೋಳುತಲೆ ಆಗಿಬಿಟ್ಟಿದೆಯಂತೆ.

ಎಲ್ಲದ್ರೂ ಉಂಟೆ. ನೀರು ಸರಿಯಿಲ್ಲವೆಂದ್ರೆ ಒಂದಿಷ್ಟು ಕೂದಲು ಉದುರುವುದು ಸಾಮಾನ್ಯ. ಆದರೆ ಬಿಹಾರದ ಮಧುಬನಿಯಲ್ಲಿ ಬೋರ್‍ವೆಲ್ ನೀರು ಬಳಸುತ್ತಿದ್ದ ಕುಟುಂಬದ ಎಲ್ಲರೂ ಸಂಪೂರ್ಣವಾಗಿ ಕೂದಲು ಕಳೆದುಕೊಂಡು ಬೋಳು ತಲೆಯಾಗಿದ್ದಾರೆ.

ಈ ಕುಟುಂಬದ ಯಜಮಾನ ಮಹಮ್ಮದ್ ಹಸೀಮ್ ಪ್ರಕಾರ, ಕುಟುಂಬಸ್ಥರು ಈ ಬೋರ್‍ವೆಲ್ ನೀರನ್ನು ಹಲವು ದಿನಗಳಿಂದ ಬಳಸುತ್ತಿದ್ದು, ಸ್ನಾನ ಮಾಡಿದ ನಂತರ ತಲೆಯಲ್ಲಿ ತುರಿಕೆಯ ಅನುಭವ ಆಗುತ್ತಿತ್ತಂತೆ. ಆದರೆ ಯಾರು ಆ ಬಗ್ಗೆ ಚಿಂತಿಸಿದ ಕಾರಣ ಇದೀಗ ಸಂಪೂರ್ಣ ಕೂದಲನ್ನು ಕಳೆದುಕೊಂಡಿರುವುದಾಗಿ ಹೇಳಿದ್ದಾರೆ.

ಇತ್ತ ವಿಷಯ ತಿಳಿಯುತ್ತಿದ್ದಂತೆ ಗ್ರಾಮದ ಪಂಚಾಯತ್ ಸಮಿತಿಯ ಬಿಡಿಓ ಅಧಿಕಾರಿಗಳು ಬೋರ್‍ವೆಲ್ ಪರಿಶೀಲನೆ ನಡೆಸಿದ್ದು, ನೀರನ್ನು ಪರೀಕ್ಷೆಗೆ ಕಳುಹಿಸಿದ್ದಾರೆ. ಅಲ್ಲದೇ ವೈದ್ಯರು ಕೂಡ ಕೂದಲು ಉದುರುವಿಕೆಗೆ ಕಾರಣವೇನು ಎಂಬುದನ್ನು ತಿಳಿಯುವ ಪ್ರಯತ್ನ ಮಾಡುತ್ತಿದ್ದಾರೆ. ಇತ್ತ ಗ್ರಾಮಸ್ಥರನ್ನು ಕೇಳಿದರೆ, ಈ ಕುಟುಂಬ ಹಲವು ವರ್ಷಗಳಿಂದ ಈ ನೀರನ್ನೇ ಬಳಸುತ್ತಿದ್ದು, ಇದೀಗ ಹಿಗಾಗಿದೆ ಎನ್ನುತ್ತಿದ್ದಾರೆ.

Write A Comment