ಕರ್ನಾಟಕ

ರಸಂ ,ಸಾಂಬಾರ್‌ ಸರಿಯಿಲ್ಲ ಎಂದು ಮದುವೆಯೇ ಮುರಿದು ಬಿತ್ತು!

Pinterest LinkedIn Tumblr

marriageತುಮಕೂರು : ಮದುವೆ ಮುರಿದು ಬಿಳುವುದಕ್ಕೆ ಹಲವು ಕಾರಣಗಳಿರಬಹುದು ಆದರೆ ರಸಂ ,ಸಾಂಬಾರ್‌ ಸರಿಯಿಲ್ಲ ಎಂಬ ಕ್ಷುಲ್ಲಕಕಾರಣಕ್ಕೆ ಪದುವೆಯ ದಿನವೇ ವರ ತಾಳಿ ಕಟ್ಟಲು ನಿರಾಕರಿಸಿ ಮಂಟಪದಿಂದ ಪರಾರಿಯಾಗಿರುವ ವಿಲಕ್ಷಣ ಘಟನೆ ಭಾನುವಾರ ನಡೆದಿದೆ.

ಕುಣಿಗಲ್‌ನ ಕೊಲ್ಲಾಪುರಮ್ಮ ಕಲ್ಯಾಣ ಮಂಟಪದಲ್ಲಿ ಬೆಂಗಳೂರಿನ ಶ್ರೀರಾಂ ಪುರ ನಿವಾಸಿ ರಾಜು ಮತ್ತು ಕುಣಿಗಲ್‌ ನ ಸೌಮ್ಯ ಅವರ ವಿವಾಹ ಭಾನುವಾರ ನಿಗದಿಯಾಗಿತ್ತು.

ಶನಿವಾರ ಸಂಜೆ ಅದ್ದೂರಿಯಾಗಿ ವರಪೂಜೆಯೂ ನಡೆದಿತ್ತು , ಆದರೆ ವರ ರಾಜು ವಿನ ಮಲತಾಯಿ ಗೌರಮ್ಮ ನಿನ್ನೆಯ ಅಡುಗೆಯಲ್ಲಿ ರಸಂ ಚೆನ್ನಾಗಿರಲಿಲ್ಲ..ಸಾಂಬಾರ್‌ ಚೆನ್ನಾಗಿರಲ್ಲಿಲ್ಲ ಎಂದು ಖ್ಯಾತೆ ತೆಗೆದು ರಂಪಾಟ ಮಾಡಿದ್ದಾರೆ. ಗೌರಮ್ಮಳ ಬೆಂಬಲಕ್ಕೆ ನಿಂತ ವರ ರಾಜು ಮದುವೆಯಾಗಲು ನಿರಾಕರಿಸಿ ಮದುವೆ ಮಂಟಪದಿಂದ ಪರಾರಿಯಾಗಿದ್ದಾರೆ.

ಇಷ್ಟೆಲ್ಲಾ ರದ್ದಾಂತವಾದರೂ ವಧುವಿಗೆ ಬೇರೊಬ್ಬ ಯುವಕನೊಂದಿಗೆ ನಿಗದಿಯಾದ ಮುಹೂರ್ತಕ್ಕೆ ಮದುವೆ ಮಾಡಲಾಗಿದೆ.
-ಉದಯವಾಣಿ

Write A Comment