ಕರ್ನಾಟಕ

ತುಂಗಭದ್ರೆಗೆ ಪರ್ಯಾಯವಾಗಿ ಇನ್ನೊಂದು ಡ್ಯಾಮ್‌

Pinterest LinkedIn Tumblr

tunga-badraಬೆಂಗಳೂರು: ಹೂಳು ತುಂಬಿದ ಹಿನ್ನೆಲೆಯಲ್ಲಿ ತುಂಗಭದ್ರಾ ಜಲಾಶಯದಿಂದ ಹೊರ ಹೋಗುವ ನೀರನ್ನು ಸಂಗ್ರಹಿಸಲು ಪರ್ಯಾಯ ಜಲಾಶಯ ನಿರ್ಮಿಸಲು ಸರ್ಕಾರ ಉದ್ದೇಶಿಸಿದೆ. ತುಂಗಭದ್ರಾ ಜಲಾಶಯದಲ್ಲಿ ಪ್ರಸ್ತುತ ಸುಮಾರು 32 ಟಿಎಂಸಿಯಷ್ಟು ಹೂಳು ತುಂಬಿದೆ. ಇದರಿಂದ ಅಷ್ಟು ಪ್ರಮಾಣದ ನೀರಿನ ಸಂಗ್ರಹ ಕಡಿಮೆಯಾಗುತ್ತಿದೆ. ಹೂಳಿನಿಂದಾಗಿ ಹೊರ ಹೋಗುವ ನೀರನ್ನು ಪರ್ಯಾಯ ಜಾಗಗಳಲ್ಲಿ ಸಂಗ್ರಹಿಸುವ ಮೂಲಕ ‘ಜಲಾಶಯ ಸಮತೋಲನ’ ಮಾಡಲು ಸರ್ಕಾರ ಚಿಂತನೆ ನಡೆಸಿದೆ.

ಈ ಸಂಬಂಧ ನವಿಲೆಯಲ್ಲಿ ಜಾಗ ಗುರುತಿಸಲಾಗಿದೆ. ಮತ್ತೂಂದು ಕಡೆ ಜಾಗಕ್ಕಾಗಿ
ಹುಡುಕಾಟ ನಡೆದಿದೆ. ಈ ಮೂಲಕ ಹೂಳಿನಿಂದ ಹೊರಹೋಗುತ್ತಿರುವ ನೀರನ್ನು ಪರ್ಯಾಯ ಜಾಗಗಳಿಗೆ ತಿರುಗಿಸಿ, ಅಲ್ಲಿ ಸಂಗ್ರಹಿಸುವುದು ಇದರ ಉದ್ದೇಶವಾಗಿದೆ ಎಂದು ಸಚಿವ ಎಂ.ಬಿ.ಪಾಟೀಲ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಇದಲ್ಲದೆ, ನೆದರ್‌ಲ್ಯಾಂಡ್‌ ಮೂಲದ ಕಂಪನಿಯೊಂದು ಹೂಳು ತೆಗೆಯುವ ತಂತ್ರಜ್ಞಾನ
ತಮ್ಮ ಬಳಿ ಇದೆ ಎಂದು ಹೇಳಿದ್ದು, ಈ ಕುರಿತು ಪ್ರಸ್ತಾವನೆ ಸಲ್ಲಿಸಲು ಸೂಚಿಸಿದ್ದೇವೆ. ಇದಲ್ಲದೆ, ಹೂಳಿಗೆ ಸಂಬಂಧಿಸಿದ ಯಾವುದೇ ರೀತಿಯ ಸಲಹೆಗಳಿಗೆ ಸರ್ಕಾರ ಮುಕ್ತವಾಗಿದೆ ಎಂದು ಅವರು ಹೇಳಿದರು.

ವಿಶ್ವದಲ್ಲಿ ಎಲ್ಲಿಯೂ ಇದುವರೆಗೆ ಜಲಾಶಯಗಳಿಂದ ಹೂಳು ತೆಗೆದ ಉದಾಹರಣೆಗಳಿಲ್ಲ. ಹಾಗೊಂದು ವೇಳೆ 32 ಟಿಎಂಸಿಯಷ್ಟು ನೀರು ಸಂಗ್ರಹ ಸಾಮರ್ಥ್ಯದಷ್ಟು ತುಂಬಿರುವ ತುಂಗಭದ್ರಾ ಜಲಾಶಯದಲ್ಲಿನ ಹೂಳನ್ನು ತೆಗೆದರೂ ಅದನ್ನು ಸಾಗಿಸುವುದು ಎಲ್ಲಿಗೆ? ಅದಕ್ಕೆ ಸಾವಿರಾರು ಎಕರೆ ಜಾಗ ಬೇಕಾಗುತ್ತದೆ! ಅಷ್ಟೇ ಅಲ್ಲ, ಅದಕ್ಕೆ ತಗಲುವ ವೆಚ್ಚವೂ
ಸಾಕಷ್ಟಿರುತ್ತದೆ. ಆ ಖರ್ಚಿನಲ್ಲಿ ಜಲಾಶಯಗಳನ್ನೇ ನಿರ್ಮಿಸಬಹುದಾಗಿದೆ ಎಂದು ಜಲಸಂಪನ್ಮೂಲ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಮದ್ದೂರು ಸಮಗ್ರ ಏತ ನೀರಾವರಿ: ಮದ್ದೂರು ಏತ ನೀರಾವರಿ ಯೋಜನೆಗಾಗಿ ಮಾಜಿ
ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಪತ್ರ ಬರೆದಿದ್ದಾರೆ. ಮದ್ದೂರಿನಲ್ಲಿ ಸಮಗ್ರ ಏತ ನೀರಾವರಿ ಯೋಜನೆ ಕೈಗೆತ್ತಿಕೊಳ್ಳುವ ಮೂಲಕ ಕೃಷ್ಣ ಅವರ ಆಶಯವನ್ನು ಈಡೇರಿಸಲಾಗುವುದು. ಈ ಸಂಬಂಧದ ಸಮಗ್ರ ಯೋಜನಾ ವರದಿ ಕೂಡ ಸಿದಟಛಿವಾಗಿದೆ ಎಂದು ಪ್ರಶ್ನೆಯೊಂದಕ್ಕೆ ಸಚಿವ ಎಂ.ಬಿ.ಪಾಟೀಲ ಪ್ರತಿಕ್ರಿಯಿಸಿದರು. ಮೇಕೆದಾಟು ಅಣೆಕಟ್ಟೆ ಯೋಜನೆ ನಿರ್ಣಾಯಕ ಹಂತದಲ್ಲಿದ್ದು, ಸರ್ಕಾರ ಶೀಘ್ರ ಈ ಬಗ್ಗೆ ಪ್ರಮುಖ ನಿರ್ಧಾರ ಪ್ರಕಟಿಸಲಿದೆ ಎಂದರು.
-ಉದಯವಾಣಿ

Write A Comment