ಕರ್ನಾಟಕ

ಮೇಲ್ಮನೆ; ಭಗವಂತ, ಗೋಮಾತೆ, ದೇವೇಗೌಡರ ಹೆಸರಲ್ಲಿ ಪ್ರಮಾಣವಚನ !

Pinterest LinkedIn Tumblr

Yathnal3

ಬೆಂಗಳೂರು: ಕಳೆದ ತಿಂಗಳು ಮೇಲ್ಮನೆಯ 25 ಸ್ಥಾನಗಳಿಗೆ ನಡೆದಿದ್ದ ಚುನಾವಣೆಯಲ್ಲಿ ಆಯ್ಕೆಯಾಗಿದ್ದ 25 ಸದಸ್ಯರಲ್ಲಿ 24 ವಿಧಾನಪರಿಷತ್ ಸದಸ್ಯರು ಬುಧವಾರ ಪ್ರಮಾಣವಚನ ಸ್ವೀಕರಿಸಿದರು. ಮೇಲ್ಮನೆ ಸಭಾಪತಿ ಡಿ.ಎಚ್.ಶಂಕರಮೂರ್ತಿ ನೂತನ ಸದಸ್ಯರಿಗೆ ಪ್ರಮಾಣವಚನ ಬೋಧಿಸಿದರು.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಸರಳ ಸಮಾರಂಭದಲ್ಲಿ ನೂತನ 24 ಪರಿಷತ್ ಸದಸ್ಯರು ಪ್ರಮಾಣವಚನ ಸ್ವೀಕರಿಸಿದರು. ಕಾಂಗ್ರೆಸ್ ನ ರಘು ಆಚಾರ್ ಪ್ರಮಾಣವಚನ ಕಾರ್ಯಕ್ರಮಕ್ಕೆ ಗೈರಾಗಿದ್ದರು.

ಧನುರ್ ಮಾಸದ ಹಿನ್ನೆಲೆ ರಘು ಆಚಾರ್ ಗೈರು!
ಇಂದು ನಡೆದ ಪ್ರಮಾನ ವಚನ ಸ್ವೀಕಾರ ಸಮಾರಂಭದಲ್ಲಿ ಕಾಂಗ್ರೆಸ್ ಪಕ್ಷ ರಘು ಆಚಾರ್ ಗೈರು ಹಾಜರಾಗಿದ್ದಕ್ಕೆ ಪ್ರಮುಖ ಕಾರಣ ಧನುರ್ ಮಾಸ!. ಮಕರಸಂಕ್ರಾಂತಿಯ ನಂತರ ಪ್ರಮಾಣವಚನ ಸ್ವೀಕರಿಸುವ ಇರಾದೆ ರಘು ಅವರದ್ದು!

ದೇವರು, ಗೋ ಮಾತೆ, ದೇವೇಗೌಡರ ಹೆಸರಲ್ಲಿ ಪ್ರಮಾಣವಚನ ಸ್ವೀಕಾರ:
ಜೆಡಿಎಸ್ ನ ಮಂಡ್ಯ ಪರಿಷತ್ ಸದಸ್ಯ ಅಪ್ಪಾಜಿ ಗೌಡ ಅವರು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವಗೌಡರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದರೆ, ಪಕ್ಷೇತರ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್ ಗೋ ಮಾತೆ ಹೆಸರಲ್ಲಿ, ಇನ್ನುಳಿದ ಪರಿಷತ್ ಸದಸ್ಯರು ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.
-ಉದಯವಾಣಿ

Write A Comment