ಬೆಂಗಳೂರು:ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ನೂತನ ವರ್ಷಾಚರಣೆಗೆ ಕುಟುಂಬ ಸಮೇತ ಸಿಂಗಾಪುರಕ್ಕೆ ತೆರಳಿದ್ದಾರೆ.
ಪತ್ನಿ ಅನಿತಾ ಕುಮಾರಸ್ವಾಮಿ, ಪುತ್ರ ಹಾಗೂ ನಟ ನಿಖೀಲ್ ಜತೆ ಮಂಗಳವಾರ ರಾತ್ರಿ 11 ಗಂಟೆಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸಿಂಗಾಪುರಕ್ಕೆ ತೆರಳಿದ ಕುಮಾರಸ್ವಾಮಿಯವರು ಜನವರಿ 3 ರಂದು ವಾಪಸ್ಸಾಗಲಿದ್ದಾರೆ.
ಇದೇ ಸಂದರ್ಭದಲ್ಲಿ ಕುಮಾರಸ್ವಾಮಿಯವರು “ಜಾಗ್ವಾರ್’ ಚಿತ್ರದಲ್ಲಿ ನಟಿಸಲಿರುವ ಪುತ್ರ ನಿಖೀಲ್‌ಗೆ ಸಿಂಗಾಪುರದಲ್ಲಿ ಬಟ್ಟೆ ಖರೀದಿಸಲಿದ್ದಾರೆ. ಅದಕ್ಕಾಗಿ ಇಬ್ಬರು ವಸ್ತ್ರ ವಿನ್ಯಾಸಕರನ್ನೂ ಜತೆಗೆ ಕರೆದೊಯ್ದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಳೆದ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆ ನಂತರ ಆರೋಗ್ಯ ತಪಾಸಣೆಗಾಗಿ ಒಮ್ಮೆ ಸಿಂಗಪುರದ ಮೌಂಟ್ ಎಲಿಜಬೆತ್ ಆಸ್ಪತ್ರೆಗೆ ಹೋಗಿದ್ದರು. ಕೆಲ ದಿನಗಳ ಕಾಲ ಸಿಂಗಾಪುರದಲ್ಲೇ ವಿಶ್ರಾಂತಿ ಪಡೆದು ಬಂದಿದ್ದರು.
-ಉದಯವಾಣಿ