ಬೆಂಗಳೂರು : 25 ವಿಧಾನ ಪರಿಷತ್ ಸ್ಥಾನಗಳಿಗೆ ನಡೆದ ಚುನಾವಣೆಯ ಫಲಿತಾಂಶ ಬುಧವಾರ ಪ್ರಕಟವಾಗಿದ್ದು, ಕಾಂಗ್ರೆಸ್ ಪಕ್ಷ ಭರ್ಜರಿ ಗೆಲುವಿನ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತದಾರರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು ‘ಬುದ್ದಿವಂತ ಮತದಾರರು ಬಂಡಾಯ ಅಭ್ಯರ್ಥಿಗಳಿಗೆ ತಕ್ಕ ಪಾಠ ಕಲಿಸಿದ್ದಾರೆ.ಯಾವುದೇ ಮಾತುಗಳಿಗೆ ಮರುಳಾಗಿಲ್ಲ’ ಎಂದರು.
ಹೆಚ್ಚು ಸ್ಥಾನಗೆಲ್ಲಲು ಕಾರಣವಾಗಿರುವ ಮತದಾರರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದರು.
‘ ಹಾಸದಲ್ಲಿ ಗೆಲ್ಲುವ ನಿರೀಕ್ಷೆಯಿರಲಿಲ್ಲ ,ಗೆಲುವು ನನಗೆ ಅಚ್ಚರಿ ತಂದಿದೆ.ನಾನು ಕೊಡಗು ಮತ್ತು ಚಿಕ್ಕಮಗಳೂರಿನಲ್ಲಿ ಗೆಲ್ಲುವ ವಿಶ್ವಾಸ ಹೊಂದಿದ್ದೆ ಆದರೆ ಅಲ್ಪ ಮತಗಳಿಂದ ಸೋತಿದ್ದೇವೆ’ ಎಂದರು.
ಇದೇ ವೇಳೆ ಪತ್ರಕರ್ತರು ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ಅವರು ‘ಕಾಂಗ್ರೆಸ್ ಬಿಜೆಪಿಗಿಂತ 1 ಸ್ಥಾನ ಹೆಚ್ಚಿಗೆ ಗೆದ್ದರು ರಾಜೀನಾಮೆ ನೀಡುತ್ತೇನೆ’ ಎಂದು ಸಾರ್ವಜನಿಕ ಹೇಳಿಕೆ ನೀಡಿದ ಬಗ್ಗೆ ಪ್ರಶ್ನಿಸಿದಾಗ ಉತ್ತರಿಸಿದ ಸಿಎಂ ‘ಸಾರ್ವಜನಿಕವಾಗಿ ಏನು ಮಾತಾಡಿದ್ದಾರೆ ಅದಕ್ಕೆ ಬದ್ಧರಾಗಿರಬೇಕು ಎನು ಮಾಡಬೇಕು ಎಂದು ಅವರು ತೀರ್ಮಾನಿಸಲಿ..’ ಎಂದರು.
25 ಸ್ಥಾನಗಳ ಪೈಕಿ 13 ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿ ಮುನ್ನಡೆ ಪಡೆದುಕೊಂಡಿದೆ.
-ಉದಯವಾಣಿ