ಕರ್ನಾಟಕ

ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಭದ್ರತಾ ಸೌಲಭ್ಯ

Pinterest LinkedIn Tumblr

karmika

ಬೆಂಗಳೂರು, ಡಿ.20-ಕಟ್ಟಡ ಕಾರ್ಮಿಕರಿಗೆ ಭದ್ರತಾ ಸೌಕರ್ಯ ನೀಡಲು  ರಾಜ್ಯ ಸರ್ಕಾರ ಬದ್ಧವಾಗಿದೆ. ಯಾವುದೇ ಆತಂಕ ಬೇಡ ಎಂದು ಕೆಪಿಸಿಸಿ ಕಾರ್ಮಿಕ ವಿಭಾಗದ ಮುಖ್ಯಸ್ಥ ಹಾಗೂ ದೇವರಾಜ್ ಟ್ರಕ್ ಟರ್ಮಿನಲ್‌ನ  ಅಧ್ಯಕ್ಷ ಎಸ್.ಎಸ್.ಪ್ರಕಾಶಂ  ತಿಳಿಸಿದ್ದಾರೆ. ಉತ್ತರ ಭಾರತ-ಈಶಾನ್ಯ ಹಾಗೂ ನೆರೆಯ ರಾಜ್ಯಗಳಿಂದ ಕರ್ನಾಟಕಕ್ಕೆ ಕಟ್ಟಡ ಕಾರ್ಮಿಕರು ಬರುತ್ತಿದ್ದು, ಅವರಿಗೆ ಭದ್ರತೆಯ ಆತಂಕವಿದೆ.

ಆದರೆ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ  ನೇತೃತ್ವದ ಸರ್ಕಾರ ಎಲ್ಲಾ ರೀತಿಯ ಸವಲತ್ತುಗಳನ್ನು ನೀಡಲು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಜೊತೆಗೆ ಸುರಕ್ಷತೆಯನ್ನು ಒದಗಿಸುತ್ತಿದೆ ಎಂದು ಹೇಳಿದ ಅವರು, ಇದರಲ್ಲಿ ಯಾವುದೇ ಅಳಕು ಬೇಡ ಎಂದು ಭರವಸೆ ನೀಡಿದರು.

ಈಗಾಗಲೇ ಕಟ್ಟಡ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಸಾವಿರಾರು ಕೋಟಿ  ರೂ. ಇದ್ದು ಅದನ್ನು ಬಳಸಿಕೊಳ್ಳುವಲ್ಲಿ  ವ್ಯಾಪಕವಾಗಿ ಹಿಂದೆ ಬಿದ್ದಿದೆ. ಇದನ್ನು ಮನಗಂಡು  ಕೆಲವೊಂದು ನಿಯಮಗಳನ್ನು ಜಾರಿಗೆ ತರಲು ಚಿಂತಿಸಲಾಗಿದೆ ಎಂದರು.

ಕಂಟ್ರಾಕ್ಟರ್‌ಗಳು  ಕಾರ್ಮಿಕರನ್ನು ನೇಮಿಸಿಕೊಳ್ಳುವಾಗಲೇ ವಿಮೆ, ನ್ಯಾಯಯುತ ಸಂಬಳ ಸೇರಿದಂತೆ ಇತರೆ ಸೌಲಭ್ಯಗಳ ಬಗ್ಗೆ ಖಾತರಿ ಇರಬೇಕು. ಇದಲ್ಲದೆ, ಮನೆ ನಿರ್ಮಿಸುವವರೂ ಕೂಡ ಇದರ ಬಗ್ಗೆ ಗಮನಹರಿಸಬೇಕಾಗುತ್ತದೆ ಎಂದು ತಿಳಿಸಿದರು. ಸದ್ಯದಲ್ಲಿಯೇ ಕಾರ್ಮಿಕರ ಸಚಿವರ ಜೊತೆ ಮಾತುಕತೆ ನಡೆಸಲಾಗುವುದು ಎಂದು ಪ್ರಕಾಶಂ ಹೇಳಿದ್ದಾರೆ.

ಸಂಕಲ್ಪ: ರಾಜ್ಯದಲ್ಲಿ ನಡೆಯಲಿರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುವಂತೆ  ಜಿಲ್ಲಾ ಘಟಕಗಳಿಗೆ ಸೂಚನೆ ನೀಡಲಾಗಿದೆ.  ಮತದಾರರ ಮನೆಗೆ ತೆರಳಿ ರಾಜ್ಯ ಸರ್ಕಾರದ ಯೋಜನೆಗಳು, ಅಭಿವೃದ್ಧಿ ಕಾರ್ಯಗಳ ಬಗ್ಗೆ ಮನವರಿಕೆ ಮಾಡಿ ಪಕ್ಷದ ಅಭ್ಯರ್ಥಿಗೆ ಮತ ನೀಡುವಂತೆ ಮನವೊಲಿಸಬೇಕು.  ಈಗಾಗಲೇ ಇದರ ಬಗ್ಗೆ ಎಲ್ಲರೂ ಒಗ್ಗೂಡಿ ಶ್ರಮಿಸುತ್ತಿದ್ದಾರೆ. ಅತಿ ಹೆಚ್ಚು ಸ್ಥಾನವನ್ನು ಕಾಂಗ್ರೆಸ್ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Write A Comment