ಯಲಹಂಕ,ಡಿ.20- ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಗೆ ಹೊಂದಿಕೊಂಡಿರುವ ಯಲಹಂಕಾದ ವೆಂಕಟಾಲದಲ್ಲಿ ಮತ್ತೊಂದು ಕಡಲೆ ಕಾಯಿ ಪರಿಷೆ ಪ್ರಾರಂಭವಾಗಿದೆ. ದೇಶದ ಅತಿದೊಡ್ಡ ರಾಷ್ಟ್ರ ಧ್ವಜ ಹಾರಿಸುವ ಮೂಲಕ ಇಡೀ ದೇಶ ಯಲಹಂಕಾದತ್ತ ತಿರುಗು ನೋಡುವಂತೆ ಮಾಡಿದ್ದ ರೋಹಿತ್ ಕೆಂಪೇಗೌಡ ಮತ್ತೊಮ್ಮೆ ಬೆಂಗಳೂರನ್ನು ತಮ್ಮತ್ತ ಸೆಳೆದಿದ್ದಾರೆ.
ಸುಮಾರು 100ಕ್ಕೂ ಹೆಚ್ಚು ಮಳಿಗೆಗಳನ್ನು ಆಯೋಜನೆ ಮಾಡಲಾಗಿದ್ದು. ಬೆಂಗಳೂರಿನಂಥ ಮಹಾನಗರದಲ್ಲಿ ಕಾರ್ತಿಕ ಮಾಸದಂದು ನಡೆಯುವ ಲಕ್ಷ ದೀಪೋತ್ಸವ ಮತ್ತು ಕಡಲೆ ಕಾಯಿ ಪರಿಷೆಯನ್ನು ನಾವು ಬೆಂಗಳೂರು ಉತ್ತರದಿಂದ ದಕ್ಷಿಣಕ್ಕೆ ತೆರಳಿ ವೀಕ್ಷಿಸಲು ಈ ಜನಜಂಗುಳಿ ಮತ್ತು ವಾಹನ ದಟ್ಟಣೆ ನಡುವೆ ಸಾಗಿ ಹೋಗಿ ಹಿದಿರುಗಿ ಬರಲು ಸಾಧ್ಯವಿಲ್ಲ.
ಈ ಭಾರಿ ಮಳೆಯಿಂದಾಗಿ ಕಡಲೆ ಕಾಯಿ ಪರಿಷೆಯನ್ನು ಬಸವನಗುಡಿ ಪರಿಷೆ ನಂತರ ಆಯೋಜಿಸಲಾಗಿದ್ದು, ನಶಿಸಿ ಹೋಗುತ್ತಿರುವ ಪರಂಪರೆ, ನಮ್ಮ ಸಂಸ್ಕೃತಿ ಮತ್ತು ಪರಂಪರೆ ಉಳಿಸ ಬೇಕಾಗಿರುವುದು ನಮ್ಮೆಲ್ಲರ ಆದ್ಯಕರ್ತವ್ಯ. ಕಾರ್ತಿಕ ಮಾಸದಲ್ಲಿ ರೈತರು ತಮ್ಮ ಹೊಲಗಳಲ್ಲಿ ಬೆಳೆದಿದ್ದ ಧಾನ್ಯಗಳನ್ನು ಕಣದಲ್ಲಿ ಸ್ವಚ್ಚಗೊಳಿಸಿ ಮಾರುಕಟ್ಟೆಗಳಿಗೆ ಮಾರಲು ತರುತ್ತಿದ್ದುದು ಹಿಂದಿನ ಕಾಲದಲ್ಲಿ ನಡೆಯುತ್ತಿತ್ತು. ಅದಕ್ಕೆ ಸೂಕ್ತ ಎಂಬಂತೆ ಮಾರುಕಟ್ಟೆ ಮತ್ತು ಜಾತ್ರೆಗಳಲ್ಲಿ ವ್ಯವಸ್ತೆ ಕಲ್ಪಿಸಲಾಗುತ್ತಿತ್ತು. ಇದು ನಮ್ಮ ಜಾತ್ರೆ ಮತ್ತು ಪರಿಷೆಗಳ ಮಹತ್ವವಾಗಿರುವುದರಿಂದ ನಾವು ಅಳಿವಿನಂಚಿನಲ್ಲಿರುವ ಪರಂಪರೆ ಮತ್ತು ಜನರ ಕೈಗೆ ಎಟಕುವಂತೆ ಬೆಂಗಳೂರು ಉತ್ತರದಲ್ಲಿ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ರೋಹಿತ್ ವಿವರಿಸಿದರು. ಕಾರ್ಯಕ್ರಮಕ್ಕೆ ವಾರ್ಡ್ 1ರ ಪಾಲಿಕೆ ಸದಸ್ಯರಾದ ಚಂದ್ರಮ್ಮ ಕೆಂಪೇಗೌಡ ಸಹ ಆಗಮಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.