ಕರ್ನಾಟಕ

ಶಾಲಾ ಮಕ್ಕಳಿಗೆ ಶೂ ಬದಲು ಚಪ್ಪಲಿ ಭಾಗ್ಯ?

Pinterest LinkedIn Tumblr

KIMMANEfff

ಬೆಂಗಳೂರು: ಶಾಲಾ ಮಕ್ಕಳಿಗೆ ಶೂ ಬದಲು ಚಪ್ಪಲಿ ನೀಡುವ ಬಗ್ಗೆ ಚಿಂತನೆ ನಡೆದಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಹೇಳಿದ್ದಾರೆ.

ಎಂ.ಟಿ. ಎಜುಕೇರ್‌ ಚಾರಿಟಬಲ್‌ ಟ್ರಸ್ಟ್‌ ವತಿಯಿಂದ ಅಭಿವೃದಿಟಛಿಪಡಿಸಲಾಗಿರುವ
ವಿವಿಧ ಕೋರ್ಸುಗಳ ವ್ಯಾಸಂಗಕ್ಕೆ ಸಂಬಂಧಿಸಿದ ಮಾಹಿತಿ ಹಾಗೂ ಪರಿಣತ
ಉಪನ್ಯಾಸಕರ ಉಪನ್ಯಾಸದ ವಿಡಿಯೋಗಳನ್ನೊಳಗೊಂಡ ಉಚಿತ “ರೋಬೋಮೇಟ್‌
ಪ್ಲಸ್‌’ ಆಂಡ್ರಾಯ್ಡ ಆ್ಯಪ್‌ ಅನ್ನು ಶನಿವಾರ ಸರ್ವ ಶಿಕ್ಷಣ ಅಭಿಯಾನ ಸಭಾಂಗಣದಲ್ಲಿ ಬಿಡುಗಡೆ ಮಾಡಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಇದುವರೆಗೆ ಯಾವ ರಾಜ್ಯದಲ್ಲೂ ಶಾಲಾ ಮಕ್ಕಳಿಗೆ ಸರ್ಕಾರದಿಂದ ಉಚಿತ ಶೂ ನೀಡುವ ಯೋಜನೆ ಜಾರಿಯಾಗಿಲ್ಲ. ಮೊದಲ ಬಾರಿಗೆ ನಮ್ಮ ರಾಜ್ಯದಲ್ಲಿ ಶೂ ಮತ್ತು ಸಾಕ್ಸ್‌ ನೀಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಯಿತು. ಆದರೆ, ರಾಜ್ಯದಲ್ಲಿ 60 ಲಕ್ಷ ಮಕ್ಕಳಿದ್ದಾರೆ.
ಅವರೆಲ್ಲರ ಪಾದದ ಅಳತೆಗೆ ತಕ್ಕಂತೆ ಶೂ ಹೊಂದಿಸುವುದು ದೊಡ್ಡ ಸಮಸ್ಯೆಯಾಗಿ
ಪರಿಣಮಿಸಿದೆ. ಹಾಗಾಗಿ ಶೂ ಬದಲು ಚಪ್ಪಲಿ ನೀಡುವ ಬಗ್ಗೆ ಚಿಂತನೆ ನಡೆದಿದೆ ಎಂದು ಹೇಳಿದರು.

ಶಿಕ್ಷಕರು ಅರೆ ಬರೆ ತಿಳಿದರೆ ಸಾಲದು:
ಇದಕ್ಕೂ ಮುನ್ನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿಕ್ಷಕರು ಅರೆಬರೆ
ತಿಳಿದುಕೊಂಡು ಪಾಠ ಮಾಡುವುದು ಸರಿಯಲ್ಲ, ಕನಿಷ್ಠ ಜ್ಞಾನವಾದರೂ ಇರಬೇಕು. ಅದಕ್ಕಾಗಿ ಪ್ರತಿಯೊಬ್ಬ ಶಿಕ್ಷಕರೂ ನಿರಂತರ ಅಧ್ಯಯನದಲ್ಲಿ ತೊಡಗಬೇಕು ಎಂದು
ಸಲಹೆ ನೀಡಿದರು. ಇತ್ತೀಚೆಗೆ ಗದಗ ಜಿಲ್ಲೆ ಲಕ್ಷ್ಮೇಶ್ವರದ ಸರ್ಕಾರಿ ಶಾಲೆ ಪರಿಶೀಲನೆಗೆ ಭೇಟಿ ನೀಡಿದ್ದೆ. ಅಲ್ಲಿನ ಶಿಕ್ಷಕರಿಗೆ ಕೆಲ ಸಾಮಾನ್ಯ ವಿಚಾರಗಳ ಪ್ರಶ್ನೆಗಳನ್ನು ಕೇಳಿದರೂ ಉತ್ತರಿಸಲಾಗಲಿಲ್ಲ. ಕೊನೆಗೆ ವಿದ್ಯಾರ್ಥಿಯೊಬ್ಬ ನನ್ನ ಪ್ರಶ್ನೆಗೆ ಉತ್ತರ ನೀಡಿದ. ಕೆಲ ಶಿಕ್ಷಕರ ಬುದಿಟಛಿಮತ್ತೆ ಮಕ್ಕಳಿಗಿಂತಲೂ ಕಡಿಮೆಯಿರುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿ.
ಸ್ನಾತಕೋತ್ತರ ಪದವಿ ಮಾಡಿಕೊಂಡು ಶಿಕ್ಷರಾಗಿರುವವರು ಕನಿಷ್ಠ ಮಕ್ಕಳಿಗೆ
ತಿಳಿದಿರುವಷ್ಟೂ ಜ್ಞಾನವಿಲ್ಲದವರಾದರೆ ಹೇಗೆ? ಅವರಿಂದ ಮಕ್ಕಳು ಕಲಿಯುವುದಾದರೂ ಏನನ್ನು ಎಂದು ಪ್ರಶ್ನಿಸಿದರು.

ಸಮಯದ ಅಭಾವ ಹೆಚ್ಚಾಗುತ್ತಿರುವ ಇಂದಿನ ಕಾಲದಲ್ಲಿ ತಂತ್ರಜ್ಞಾನ ಆಧಾರಿತ ಶಿಕ್ಷಣ ಅಗತ್ಯ ಎಂದರು.
-ಉದಯವಾಣಿ

Write A Comment