
ಯೋಗರಾಜ್ ಮೂವೀಸ್ ಹಾಗೂ ವೇದಂ ಸ್ಟುಡಿಯೋಸ್ ಲಾಂಛನದಲ್ಲಿ ನಿರ್ಮಾಣವಾಗಿರುವ `ಪರಪಂಚ’ಚಿತ್ರಕ್ಕಾಗಿ ಯೋಗರಾಜ್‍ಭಟ್ ಅವರು ಬರೆದಿರುವ ಹಾಡನ್ನು ಹುಚ್ಚ ವೆಂಕಟ್ ಹಾಡಿದ್ದಾರೆ.
ಈ ಹಾಡಿನಲ್ಲಿ ಅವರೇ ಅಭಿನಯಿಸುತ್ತಿರುವುದು ವಿಶೇಷ. ಸದ್ಯದಲ್ಲೇ `ಪರಪಂಚ’ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಹಲವು ವರ್ಷಗಳಿಂದ ಸಾಕಷ್ಟು ಕಿರುಚಿತ್ರಗಳನ್ನು ನಿರ್ದೇಶಿಸಿರುವ ಹಾಗೂ `ಗಾಂಧಿಸ್ಮೈಲ್’ ಚಿತ್ರದ ನಿರ್ದೇಶಕರೂ ಆಗಿರುವ ಕ್ರಿಶ್‍ಜೋಶಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ `ಪರಪಂಚ’ಕ್ಕೆ ವೆಜ್ ಆಂಡ್ ನಾನ್‍ವೆಜ್ ಎಂಬ ಅಡಿಬರಹವಿದೆ.
ನಿರ್ದೇಶಕರೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ವೀರಸಮರ್ಥ್ ಸಂಗೀತ ನಿರ್ದೇಶನ, ಸಂತೋಷ್ ರೈ ಪಾತಾಜೆ ಛಾಯಾಗ್ರಹಣ, ಸುರೇಶ್ ಸಂಕಲನ ಹಾಗೂ ಶಶಿಧರ್ ಅಡಪರ ಕಲಾ ನಿರ್ದೇಶನ `ಪರಪಂಚ’ಕ್ಕಿದೆ. ದಿಗಂತ್, ರಾಗಿಣಿ. ದತ್ತಣ್ಣ, ಅನಂತನಾಗ್, ವಿ.ಮನೋಹರ್, ಅಶೋಕ್, ಯೋಗರಾಜ್‍ಭಟ್, ಪಂಚರಂಗಿ ಸುಧಾಕರ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
https://youtu.be/nAIJi-RLDPQ