ಕರ್ನಾಟಕ

ಶಿವರಾಜ್ ಕುಮಾರ್ ನಟನೆಯ ಕಿಲ್ಲಿಂಗ್ ವೀರಪ್ಪನ್ ಸಿನೆಮಾಕ್ಕೆ ನ್ಯಾಯಾಲಯ ತಡೆಯಾಜ್ಞೆ

Pinterest LinkedIn Tumblr

killing

ಬೆಂಗಳೂರು: ಕರಾರು ಪತ್ರದ ನಿಯಮವನ್ನು ಉಲ್ಲಂಘಿಸಿದ್ದಕ್ಕಾಗಿ ರಾಮ್ ಗೋಪಾಲ್‍ವರ್ಮಾ ನಿರ್ದೇಶಿಸಿದ ಕನ್ನಡದ ಕಿಲ್ಲಿಂಗ್ ವೀರಪ್ಪನ್ ಸಿನಿಮಾಕ್ಕೆ ಸಿಟಿ ಸಿವಿಲ್ ನ್ಯಾಯಾಲಯ ತಡೆಯಾಜ್ಞೆ ನೀಡಿದೆ ಎಂದು ವೀರಪ್ಪನ್ ಪತ್ನಿ ಮುತ್ತುಲಕ್ಷ್ಮಿ ಪರ ವಕೀಲ ಜೈಪ್ರಕಾಶ್ ತಿಳಿಸಿದ್ದಾರೆ.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2006ರಲ್ಲಿ ಮುತ್ತುಲಕ್ಷ್ಮಿ ಅವರು ಬರೆದಿರುವ ಕರಾರು ಪತ್ರಕ್ಕೆ ನಿರ್ದೇಶಕ ರಾಮಗೋಪಾಲ ವರ್ಮಾ ಸಹಿ ಹಾಕಿದ್ದಾರೆ. ಕರಾರು ಪತ್ರದ ಪ್ರಕಾರ ರಾಮಗೋಪಾಲ ವರ್ಮಾ ಅವರು ಹಿಂದಿ ತಮಿಳು ಡಬ್ಬಿಂಗ್ ಚಿತ್ರಗಳನ್ನು ಮಾತ್ರ ನಿರ್ದೇಶಿಸಲು ಅವರಿಗೆ ಹಕ್ಕಿದೆ. ಆದರೆ ನಿಯಮವನ್ನು ಉಲ್ಲಂಘಿಸಿ ಕನ್ನಡ ಚಿತ್ರವನ್ನು ನಿರ್ದೇಶಿದ್ದಾರೆ ಎಂದರು.

ಜಾಹಿರಾತುಗಳನ್ನು ವೀಕ್ಷಿಸಿದ ಬಳಿಕ ಕೋರ್ಟ್‍ಗೆ ಹೋಗಿದ್ದೆವು. ಕಿಲ್ಲಿಂಗ್ ವೀರಪ್ಪನ್ ಚಿತ್ರದಲ್ಲಿಯೂ ಪ್ರದರ್ಶನವಾಗದಂತೆ ತಡೆಯಾಜ್ಞೆ ನೀಡಿ, ವರ್ಮಾ ಅವರನ್ನು ನ್ಯಾಯಾಲಯಕ್ಕೆ ಡಿ.17 ರಂದು ಹಾಜರಾಗಲು ಆದೇಶಿಸಿದೆ ಎಂದರು.

Write A Comment