ಕರ್ನಾಟಕ

ಸಂವಿಧಾನ ಬದಲಿಸಿದ್ರೆ ದೇಶದಲ್ಲಿ ರಕ್ತದ ಹೊಳೆ ಹರಿಯುತ್ತದೆ: ಮಲ್ಲಿಕಾರ್ಜುನ್ ಖರ್ಗೆ

Pinterest LinkedIn Tumblr

kargheನವದೆಹಲಿ: ಚಳಿಗಾಲದ ಅಧಿವೇಶನದ ಆರಂಭದ ದಿನವೇ ಅಡಳಿತರೂಢ ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ರಾಜಕೀಯ ವಾಕ್ಸಮರ್ ನಿರೀಕ್ಷೆಯಂತೆ ಆರಂಭವಾಗಿದೆ. ಒಂದು ವೇಳೆ, ಸರಕಾರ ಸಂವಿಧಾನವನ್ನು ಬದಲಿಸಲು ಪ್ರಯತ್ನಿಸಿದಲ್ಲಿ ದೇಶದಲ್ಲಿ ರಕ್ತದ ಹೊಳೆ ಹರಿಯುತ್ತದೆ ಎಂದು ಲೋಕಸಭೆಯ ಕಾಂಗ್ರೆಸ್ ಪಕ್ಷದ ನಾಯಕ ಮಲ್ಲಿಕಾರ್ಜುನ್ ಖರ್ಗೆ ಸರಕಾರವನ್ನು ಎಚ್ಚರಿಸಿದ್ದಾರೆ.

ಲೋಕಸಭೆಯಲ್ಲಿ ಮಾತನಾಡಿದ ಖರ್ಗೆ, ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಸಂವಿಧಾನ ಬದಲಿಸುವ ಪ್ರಯತ್ನ ಮಾಡಿದಲ್ಲಿ ರಕ್ತಪಾತವಾಗುತ್ತದೆ ಎಂದು ಗುಡುಗಿದರು.

ಏತನ್ಮಧ್ಯೆ, ಲೋಕಸಭೆಯ ಸಭಾಪತಿ ಸುಮಿತ್ರಾ ಮಹಾಜನ್, ಸಂಸತ್ತಿನ ಕಲಾಪದ ದಾಖಲೆಯಿಂದ ರಕ್ತಪಾತ ಶಬ್ದವನ್ನು ತೆಗೆದುಹಾಕಿದರು.

ಚಳಿಗಾಲದ ಅಧಿವೇಶನ ಆರಂಭವಾಗುತ್ತಿದ್ದಂತೆ ಸರಕಾರ ವಿಪಕ್ಷಗಳು ಜಾತ್ಯಾತೀತ ಪದವನ್ನು ವಿಪಕ್ಷಗಳು ದುರ್ಬಳಕೆ ಮಾಡಿಕೊಳ್ಳುತ್ತಿವೆ ಎಂದು ಬಿಜೆಪಿ ನಾಯಕರು ಆರೋಪಿಸಿದರು, ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಅಸಹಿಷ್ಣುತೆ ವಿವಾದವನ್ನು ಎತ್ತಿಕೊಂಡರು.

ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಮತ್ತು ಪ್ರಧಾನಿ ಮೋದಿ ಉಪಸ್ಥಿತರಿದ್ದ ಸಭೆಯಲ್ಲಿ ಮಾತನಾಡಿದ ಗೃಹ ಸಚಿವ ರಾಜನಾಥ್ ಸಿಂಗ್, ಜಾತ್ಯಾತೀತವಾದವನ್ನು ದೇಶದಲ್ಲಿ ದುರ್ಬಳಕೆಯಾಗುತ್ತಿದೆ. ಪದದ ದುರ್ಬಳಕೆಯಲ್ಲಿ ಹೆಚ್ಚಳವಾಗುವುದು ಅಂತ್ಯವಾಗಬೇಕು ಎಂದು ಹೇಳಿದರು.

ಸೋನಿಯಾ ಗಾಂಧಿ, ಸರಕಾರದ ವಿರುದ್ಧ ಅಸಹಿಷ್ಣುತೆ ವಿವಾದ ಕುರಿತಂತೆ ವಾಗ್ದಾಳಿ ನಡೆಸಿ ಸಂವಿಧಾನದ ಸಿದ್ಧಾಂತಗಳಿಗೆ ಮೌಲ್ಯಗಳಿಗೆ ಉದ್ದೇಶಪೂರ್ವಕವಾಗಿ ಬೆದರಿಕೆಯೊಡ್ಡಲಾಗುತ್ತಿದೆ ಎಂದು ಆರೋಪಿಸಿದರು.

Write A Comment