ಕರ್ನಾಟಕ

ನಿರಂತರ ವರ್ಷಧಾರೆ : ತಿರುಪತಿ ತಿಮ್ಮಪ್ಪನ ದರ್ಶನ ಸಿಗದೇ ವಾಪಸ್ಸಾಗುತ್ತಿರುವ ಭಕ್ತರು

Pinterest LinkedIn Tumblr

rain

ತಿರುಪತಿ,ನ.23: ಕಳೆದ ಒಂದು ತಿಂಗಳಿನಿಂದ ಸತತವಾಗಿ ಸುರಿತ್ತಿರುವ ವರ್ಷಧಾರೆಯಿಂದ ಸುಕ್ಷೇತ್ರ ತಿರುಪತಿ ಸಂಪೂರ್ಣ ನಲುಗಿದ್ದು, ಇದರಿಂದ ತಿಮ್ಮಪ್ಪನ ದರ್ಶನ ಭಾಗ್ಯವಿಲ್ಲದೆ ಭಕ್ತರು ವಾಪಸ್ಸಾಗುತ್ತಿದ್ದಾರೆ. ಭಾರೀ ಮಳೆ ಸುರಿಯುತ್ತಿರುವುದರಿಂದ ದೇವಸ್ಥಾನ ಮುಖ್ಯದ್ವಾರ ಮುಂದೆ ಸುಮಾರು 5 ಅಡಿ ಎತ್ತರ ನೀರು ನಿಂತಿದ್ದು, ಭಕ್ತರು ದರ್ಶನ ಪಡೆಯುವುದೇ ದುಸ್ತರವಾಗಿದೆ. ಈ ಹಿನ್ನೆಲೆಯಲ್ಲಿ ದೇವಸ್ಥಾನ ಆಡಳಿತ ಮಂಡಳಿ ಮುಖ್ಯದ್ವಾರವನ್ನು ಮುಚ್ಚಲು ಆದೇಶಿಸಿದ್ದು, ಇದರಿಂದ ತಿಮ್ಮಪ್ಪನ ದರ್ಶನವನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ನಗರದಾದ್ಯಂತ ಸತತವಾಗಿ ಬೀಳುತ್ತಿರುವ ಮಳೆಯಿಂದ ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ದೂರದೂರದ ಪ್ರದೇಶಗಳಿಂದ ಬಂದಿದ್ದ ಪರದಾಡುವಂತಾಗಿದೆ.

ಏತನ್ಮಧ್ಯೆ ದೇವಸ್ಥಾನ ಆಡಳಿತ ಮಂಡಳಿಯವರು ಭಕ್ತರ ರಕ್ಷಣೆಗಾಗಿ ಹಲವು ಕ್ರಮಗಳನ್ನು ಕೈಗೊಂಡಿದ್ದಾರೆ. ನಗರದಲ್ಲಿ ಹಿದೆಂದೂ ಕಾಣದಂತಹ ಮಳೆಯಿಂದ ಇಡೀ ತಿರುಪತಿ ಕ್ಷೇತ್ರ ಅಕ್ಷರಃ ಜಲಪ್ರಳಯವಾಗಿದೆ ಎಂದೇ ಹೇಳಬಹುದು. ದಾಖಲೆಯ ಪ್ರಮಾಣದಲ್ಲಿ ಮಳೆಯಾಗಿದ್ದು, ಇಂಥ ಮಳೆಯನ್ನೂ ಎಂದೂ ಕಂಡಿರಲಿಲ್ಲ ಎಂದು ಸ್ಥಳೀಯರು ಹೇಳುತ್ತಿರುವ ಮಾತು.

Write A Comment