ಕರ್ನಾಟಕ

ನಿಧಿ ಆಸೆಗೆ ವಾಮಾಚಾರ ಮಾಡಿ ವೀರಗಲ್ಲು ಕಿತ್ತ ದುಷ್ಕರ್ಮಿಗಳು

Pinterest LinkedIn Tumblr

2222

ಕೊರಟಗೆರೆ,ನ.23-ನಿಧಿ ಆಸೆಗೆ ದುಷ್ಕರ್ಮಿಗಳು ಪುರಾತನ ಕಾಲದ ವೀರಗಲ್ಲುಗಳಿದ್ದ ಸ್ಥಳದಲ್ಲಿ ವಾಮಾಚಾರ ನಡೆಸಿ ಗುಂಡಿ ತೆಗೆದು ಶೋಧಿಸಿರುವ ಘಟನೆ ತಾಲೂಕಿನ ದಮಗಲಯ್ಯನಪಾಳ್ಯದಲ್ಲಿ ನಡೆದಿದೆ.

ದಮಗಲಯ್ಯನಪಾಳ್ಯದ ನಿವಾಸಿ ಹಾಗೂ ವಕೀಲರಾದ ಟಿ.ಕೃಷ್ಣಮೂತಿ ಅವರ ಜಮೀನಿನಲ್ಲಿದ್ದ ವೀರಗಲ್ಲುಗಳನ್ನು ರಾತ್ರಿ ಕಿತ್ತಿರುವ ದುಷ್ಕರ್ಮಿಗಳು ನಾಲ್ಕು ಅಡಿ ಆಳದಷ್ಟು ಗುಂಡಿ ಬಗೆದಿದ್ದಾರೆ. ಪುರಾತನಕಾಲದ ವೀರಗಲ್ಲುಗಳ ಕೆಳಗೆ ನಿಧಿ ಇದೆ ಎಂದು ಈ ಸ್ಥಳದಲ್ಲಿ ನಿಂಬೆಹಣ್ಣು, ತೆಂಗಿನಕಾಯಿ, ಹೂ ಸೇರಿದಂತೆ ವಿವಿಧ ಪೂಜಾ ಸಾಮಗ್ರಿಗಳಿಂದ ವಾಮಾಚಾರ ನಡೆಸಿ ನಂತರ ಈ ಕಲ್ಲುಗಳನ್ನು ಕಿಳಲಾಗಿದೆ.

ವಕೀಲ ಕೃಷ್ಣಮೂರ್ತಿ ಅವರ ತಂದೆ ತಿಮ್ಮಯ್ಯ ಅವರು ಕಳೆದ 50 ವರ್ಷಗಳ ಹಿಂದೆ ಅಗ್ರಹಾರದ ಶಾನುಭೋಗರಿಂದ ಈ ಜಮೀನನ್ನು ಖರೀದಿಸಿದ್ದರು. 200ವರ್ಷಗಳಷ್ಟು ಹಳೆಯದಾದ ಎರಡು ವೀರಗಲ್ಲುಗಳು ಈ ಸ್ಥಳದಲ್ಲಿದ್ದವು. ಇವುಗಳ ಕೆಳಗೆ ನಿಧಿ ಇದೆ ಎಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದರು. ದುಷ್ಕರ್ಮಿಗಳು ರಾತ್ರಿ ಈ ಸ್ಥಳದಲ್ಲಿ ವಾಮಾಚಾರ ನಡೆಸಿ ಕಲ್ಲುಗಳನ್ನು ಕಿತ್ತು ನಿಧಿ ಶೋಧಿಸಿದ್ದಾರೆ. ಬೆಳಗ್ಗೆ ಕೃಷ್ಣಮೂರ್ತಿ ಜಮೀನಿಗೆ ತೆರಳಿದ್ದ ವೇಳೆ ಕೃತ್ಯ ಬೆಳಕಿಗೆ ಬಂದಿದೆ. ಈ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Write A Comment