ಕರ್ನಾಟಕ

ಅದ್ದೂರಿ ಮದುವೆ ವಿರುದ್ಧ ಖಾಸಗಿ ಮಸೂದೆ

Pinterest LinkedIn Tumblr

Marriage-Indian-Tradition-650ಬೆಂಗಳೂರು: ಅದ್ದೂರಿ ವಿವಾಹಗಳ ನಿಯಂತ್ರಣಕ್ಕಾಗಿ ಕಾಂಗ್ರೆಸ್‌ ಹಿರಿಯ ಶಾಸಕ ರಮೇಶ್‌ಕುಮಾರ್‌ ಖಾಸಗಿ ಮಸೂದೆ ಮಂಡಿಸಿದರು. ಗುರುವಾರ ಕರ್ನಾಟಕ ರಾಜ್ಯ ವಿವಾಹ ವಿಧಿ-ವಿಧಾನಗಳ ನಿಯಂತ್ರಣ ಮಸೂದೆ-2015 ಅನ್ನು ಅವರು ಮಂಡನೆ ಮಾಡಿದರು.

ಈ ಹಿಂದೆ ರಾಜ್ಯ ಸರಕಾರ ಅದ್ದೂರಿ ವಿವಾಹ ನಿಯಂತ್ರಣಕ್ಕೆ ಕಾಯ್ದೆ ರೂಪಿಸಲು ಚಿಂತನೆ ನಡೆಸಿತ್ತು. ಆಗ ಕಾಂಗ್ರೆಸ್‌ ಶಾಸಕರಿಂದಲೇ ಆಕ್ಷೇಪ ವ್ಯಕ್ತವಾಗಿತ್ತು. ಸಾರ್ವಜನಿಕ ವಲಯದಿಂದಲೂ ವಿರೋಧ ವ್ಯಕ್ತವಾಗಿತ್ತು. ಆಗ ಸರಕಾರ ತನ್ನ ನಿರ್ಧಾರದಿಂದ ಹಿಂದೆ ಸರಿದಿತ್ತು.

ಇದೀಗ ಆಡಳಿತಾರೂಢ ಪಕ್ಷದ ಶಾಸಕರೇ ಮತ್ತೆ ಖಾಸಗಿ ಮಸೂದೆ ಮಂಡಿಸಿದ್ದು, ಸ್ಪೀಕರ್‌ ಅದಕ್ಕೆ ಅನುಮತಿ ಸಹ ನೀಡಿದರು. ಇದೇ ಸಂದರ್ಭದಲ್ಲಿ ಕಾಂಗ್ರೆಸ್‌ನ ಶಿವಮೂರ್ತಿ ನಾಯಕ್‌ ಅವರು ಕರ್ನಾಟಕ ಭೂ ಕಂದಾಯ ತಿದ್ದುಪಡಿ ಕುರಿತ ಖಾಸಗಿ ಮಸೂದೆ ಮಂಡಿಸಿದರು.
-ಉದಯವಾಣಿ

Write A Comment