ಕರ್ನಾಟಕ

ವೌಢ್ಯಾಚರಣೆ ಪ್ರತಿಬಂಧಕ ಕಾಯ್ದೆ ಜಾರಿಗೆ ಒತ್ತಾಯ; ಮಠಾಧೀಶರು, ಪ್ರಗತಿಪರರಿಂದ ಬೃಹತ್ ಬಹಿರಂಗ ಸಭೆ

Pinterest LinkedIn Tumblr

MAWDYA-fiಬೆಂಗಳೂರು, ನ.16: ವೌಢ್ಯಾಚರಣೆ ಪ್ರತಿಬಂಧಕ ಕಾಯ್ದೆ ಜಾರಿಗೆ ಒತ್ತಾಯಿಸಿ ಮಠಾಧೀ ಶರು, ಪ್ರಗತಿಪರ ಸಾಹಿತಿಗಳು ಹಾಗೂ ವಿವಿಧ ಸಂಘಟನೆ ಗಳ ವತಿಯಿಂದ ಇದೇ ಮೊತ್ತ ಮೊದಲ ಬಾರಿಗೆ ಬೃಹತ್ ಜಾಥಾ, ಬಹಿರಂಗ ಸಭೆ ನಡೆಸಲಾಯಿತು.

ಸೋಮವಾರ ಕರ್ನಾಟಕ ವೌಢ್ಯಾ ಚರಣೆ ಪ್ರತಿಬಂಧಕ ಕಾನೂನು ಜಾರಿಗೆ ಒತ್ತಾಯಿಸಿ ಕ್ರಿಯಾ ಸಮಿತಿ ವತಿಯಿಂದ ಏರ್ಪಡಿಸಿದ್ದ ಜಾಥಾಕ್ಕೆ ಇಲ್ಲಿನ ಬನ್ನಪ್ಪಪಾರ್ಕ್‌ನಲ್ಲಿ ಸಾಣೆಹಳ್ಳಿ ಮಠದ ಡಾ.ಪಂಡಿತಾರಾಧ್ಯ ಸ್ವಾಮಿ ಚಾಲನೆ ನೀಡಿದರು. ನಿಡುಮಾಮಿಡಿ ಮಠದ ವೀರಭದ್ರ ಚೆನ್ನಮಲ್ಲ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಜಾಥಾದಲ್ಲಿ ಸಾಣೆಮಠ, ಬೇಲಿ ಮಠ, ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠ, ಧಾರವಾಡದ ರೇವಣ್ಣ ಸಿದ್ದೇಶ್ವರ ಮಠದ ಶ್ರೀ ಬಸವರಾಜ ದೇವರು, ಗುರುಸಿದ್ದೇ ಶ್ವರ ಬೃಹನ್ಮಠದ ಸ್ವಾಮೀಜಿಗಳು ಕಾಲ್ನಡಿಗೆ ಮೂಲಕ ಬನ್ನಪ್ಪಪಾರ್ಕ್‌ನಿಂದ ಸ್ವಾತಂತ್ರ ಉದ್ಯಾನವನ ದವರೆಗೂ ಹೆಜ್ಜೆ ಹಾಕಿದರು. ಇವರೊಂದಿಗೆ ಸಾಹಿತಿ ಗಳು, ಪ್ರಗತಿಪರ ಸಂಘಟನೆಗಳ ಮುಖಂಡರು- ಕಾರ್ಯಕರ್ತರು, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಈ ವೇಳೆ ಸಾಣೆಹಳ್ಳಿ ಮಠದ ಡಾ.ಪಂಡಿತಾರಾಧ್ಯ ಸ್ವಾಮೀಜಿ ಮಾತನಾಡಿ, ರಾಜ್ಯದಲ್ಲಿ ನೂರಾರು ಮಠಗಳಿದ್ದು, ಬಹುತೇಕ ಮಠಗಳು ವೌಢ್ಯಾಚರಣೆ ಯ ಕೇಂದ್ರಗಳಾಗಿವೆ. ಮೊದಲು ಈ ಮಠಗಳ ಶುದ್ಧೀಕರಣ ಆಗಬೇಕಾಗಿದೆ. ಮನು ಸಂಸ್ಕೃತಿಯನ್ನು ಬಿತ್ತುತ್ತಿರುವ ಮಠಗಳನ್ನು ಪ್ರಜ್ಞಾವಂತರೆಂದು ಕರೆಸಿಕೊಳ್ಳುವವರು ಬೆಳೆಸುತ್ತಿದ್ದಾರೆ. ಇದರಿಂದ ಸಮಾಜ ಅಸಮಾನತೆಯ ಕೂಪದಿಂದ ಹೊರಬರಲು ಈವರೆಗೂ ಸಾಧ್ಯವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಮಾಜಕ್ಕೆ ಉತ್ತಮ ಸಂದೇಶ ನೀಡಬೇಕಾದ ಮಾಧ್ಯಮಗಳು ದಾರಿ ತಪ್ಪಿಸುತ್ತಿವೆ. ಬೆಳಗ್ಗೆಯಿಂ ದಲೇ ವೌಢ್ಯಾಚರಣೆಯನ್ನು ಬಿತ್ತುವಂತಹ ಕಾರ್ಯಕ್ರಮಗಳು ಪ್ರಸಾರ ವಾಗುತ್ತಿರುತ್ತವೆ. ಹಾಗಾಗಿ ಮಾಧ್ಯಮಗಳೂ ವೌಢ್ಯಾಚರಣೆಯ ‘ಸನ್ನಿ’ಯಿಂದ ಹೊರ ಬರಬೇಕಾದ ಅಗತ್ಯವಿದೆ. ಈ ಬಗ್ಗೆ ಪತ್ರಕರ್ತರು ಆತ್ಮಾವಲೋಕನ ಮಾಡಿ ಕೊಳ್ಳಬೇಕೆಂದು ಡಾ.ಪಂಡಿತಾರಾಧ್ಯಾ ಸ್ವಾಮೀಜಿ ಸಲಹೆ ನೀಡಿದರು.
ಎರಡು ವರ್ಷಗಳ ಹಿಂದೆಯೇ ವೌಢ್ಯಾಚರಣೆ ಪ್ರತಿಬಂಧಕ ಕಾಯ್ದೆ ಜಾರಿಯಾಗಬೇಕಾಗಿತ್ತು. ಆದರೆ, ಪುರೋಹಿತಶಾಹಿಗಳ ಷಡ್ಯಂತ್ರದಿಂದಾಗಿ ತಡೆಯಾಗಿದೆ. ಹಾಗಾಗಿ ಇವತ್ತು ಬೃಹತ್ ಸಭೆಯನ್ನು ಏರ್ಪಡಿಸಲಾಗಿದೆ ಎಂದರು.
ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಮಾತನಾಡಿ, ವೌಢ್ಯಾಚಾರಣೆ ಪ್ರತಿಬಂಧಕ ಕಾಯ್ದೆಯನ್ನು ಜಾರಿ ಮಾಡಲು ರಾಜ್ಯ ಸರಕಾರ ಸಿದ್ಧವಿದೆ. ಆದರೆ, ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಇದಕ್ಕೆ ತಡೆ ಒಡ್ಡುತ್ತಲೇ ಬರುತ್ತಿವೆ. ಹಾಗಾಗಿ ಸರಕಾರಕ್ಕೆ ಧೈರ್ಯ ತುಂಬುವ ಉದ್ದೇಶದಿಂದ ಈ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಅಭಿಪ್ರಾಯಪಟ್ಟರು.
ವೌಢ್ಯಾಚರಣೆ ಪ್ರತಿಬಂಧಕ ಕಾಯ್ದೆಯು ಯಾವುದೇ ಧರ್ಮ ಹಾಗೂ ಧಾರ್ಮಿಕ ಆಚರ ಣೆಯ ವಿರುದ್ಧವಲ್ಲ. ಮಾನವೀಯತೆಯ ವಿರುದ್ಧ ವಾದ, ತಾರತಮ್ಯಕ್ಕೆ ಹಾಗೂ ಹಿಂಸೆಗೆ ಕಾರಣವಾ ಗುವ ಆಚರಣೆಗಳನ್ನು ನಿಷೇಧಿಸಬೇಕೆಂಬುದಷ್ಟೇ ಈ ಕಾಯ್ದೆಯ ಉದ್ದೇಶವಾಗಿದೆ. ಈ ಬಗ್ಗೆ ಜನಾಭಿಪ್ರಾ ಯವನ್ನು ಮೂಡಿಸುವಂತಹ ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳಲಾಗುವುದೆಂದು ತಿಳಿಸಿದರು.
ಹಿರಿಯ ಸಾಹಿತಿ ಪ್ರೊ.ಎಸ್.ಜಿ. ಸಿದ್ದರಾಮಯ್ಯ ಮಾತನಾಡಿ, ಚಾರ್ವಾಕರ ಕಾಲದಿಂದಲೂ ದಲಿತ ರಿಗೆ ಹಾಗೂ ಮಹಿಳೆಯರಿಗೆ ವೌಢ್ಯಾಚರಣೆಯ ಮೂಲಕ ಚಿತ್ರಹಿಂಸೆ ನೀಡಿದ್ದರು. ಅದು 21ನೆ ಶತಮಾನದಲ್ಲೂ ಮುಂದುವರಿಯುತ್ತಿರುವುದು ನಾಗರಿಕ ಸಮಾಜ ನಾಚಿಕೆಪಟ್ಟುಕೊಳ್ಳುವಂತಹ ಸಂಗತಿಯಾಗಿದೆ ಎಂದರು.
ಬೇಲಿ ಮಠದ ಶಿವರುದ್ರ ಸ್ವಾಮೀಜಿ ಮಾತ ನಾಡಿ, ಸರ್ವಜನಾಂಗದ ಶಾಂತಿಯ ತೋಟವಾಗಿದ್ದ ಕರ್ನಾಟಕದಲ್ಲಿ ಉದ್ವಿಗ್ನತೆಯ ವಾತಾವರಣ ನಿರ್ಮಾಣವಾಗಿದೆ. ಕೋಮು ವಾದಿಗಳ ಉಪಟಳ ಹೆಚ್ಚಾಗಿದ್ದು, ವೌಢ್ಯಾಚರಣೆಯನ್ನು ಧರ್ಮದ ಹೆಸರಲ್ಲಿ ಜನತೆಯ ತಲೆಗೆ ತುಂಬುವಂತಹ ಕೆಲಸ ನಡೆಯುತ್ತಿದೆ. ಇದನ್ನು ತಡೆಯದೆ ಹೋದರೆ ಸಮಾಜಕ್ಕೆ ಅಪಾಯ ತಪ್ಪಿದ್ದಲ್ಲವೆಂದು ತಿಳಿಸಿದರು.
ಬಹಿರಂಗ ಸಮಾವೇಶದಲ್ಲಿ ನಿವೃತ್ತ ನ್ಯಾ.ಶಿವರಾಜ ಪಾಟೀಲ್, ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ, ಲೇಖಕ ದೇವನೂರ ಮಹಾದೇವ, ಡಾ.ಕೆ.ಮರುಳ ಸಿದ್ದಪ್ಪ, ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪ, ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್, ಸಿಪಿಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಜಿ.ಎನ್. ನಾಗರಾಜು, ಡಾ.ಸಿ.ಎಸ್.ದ್ವಾರಕನಾಥ್, ಶಾಸಕ ಕೆ.ಎಸ್.ಪುಟ್ಟಣ್ಣಯ್ಯ, ದಸಂಸ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್, ಕರ್ನಾಟಕ ಲೇಖಕಿಯರ ಸಂಘ ಅಧ್ಯಕ್ಷ ಡಾ.ವಸುಂಧರಾ ಭೂಪತಿ, ದಸಂಸ ಮುಖಂಡ ಅಣ್ಣಯ್ಯ, ಕರ್ನಾಟಕ ಜನಶಕ್ತಿ ಡಾ.ವಾಸು, ಲೇಖಕಿ ಕೆ.ನೀಲಾ, ಸಿಪಿಐ ಮುಖಂಡ ಡಾ.ಸಿದ್ದನಗೌಡ ಪಾಟೀಲ್ ಪಾಲ್ಗೊಂಡಿದ್ದರು.

‘ವಿಧಾನಸೌಧದಲ್ಲಿ ವೌಢ್ಯಾಚರಣೆ ನಿಲ್ಲಲಿ’
ಬೆಂಗಳೂರು, ನ.16: ವಿಧಾನಸೌಧ, ವಿಕಾಸಸೌಧ ಹಾಗೂ ಸರಕಾರಿ ಕಚೇರಿಗಳಲ್ಲಿ ಹೋಮ-ಹವನಗಳು ಸೇರಿದಂತೆ ಎಲ್ಲ ರೀತಿಯ ಕಂದಾಚಾರಗಳನ್ನು ನಿಲ್ಲಿಸಲಿ. ನಂತರ ವೌಢ್ಯಾಚರಣೆ ಪ್ರತಿಬಂಧಕ ಕಾಯ್ದೆಯನ್ನು ಜಾರಿ ಮಾಡಲಿ ಎಂದು ಪ್ರೊ.ಬರಗೂರು ರಾಮಚಂದ್ರಪ್ಪ ಅಭಿಪ್ರಾಯಿಸಿದ್ದಾರೆ.
ಸೋಮವಾರ ವೌಢ್ಯಾಚರಣೆ ಪ್ರತಿಬಂಧಕ ಕಾಯ್ದೆ ಜಾರಿಗೆ ಒತ್ತಾಯಿಸಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರಕಾರಿ ಕಚೇರಿಗಳು ಧರ್ಮಾತೀತ, ಜಾತ್ಯತೀತವಾಗಿ ಹಾಗೂ ಸಂವಿಧಾನದ ಆಶಯದಂತೆ ಕಾರ್ಯನಿರ್ವಹಿಸಬೇಕಾದ ಸ್ಥಳಗಳು. ಆದರೆ, ಅಲ್ಲಿ ವೈದಿಕ ವಾತಾವರಣ ಬಿಟ್ಟರೆ ಮತ್ತೇನು ಸಿಗುವುದಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.
ಸರಕಾರಕ್ಕೆ ನೈತಿಕತೆ ಇದ್ದರೆ ಮೊದಲ ಸರಕಾರಿ ಕಚೇರಿಗಳಲ್ಲಿ ದೇವರ ಫೋಟೊ ಹಾಗೂ ಹೋಮ ಹವನ ಮಾಡುವುದನ್ನು ನಿಷೇಧಿಸಲಿ. ಧಾರ್ಮಿ ಕತೆ ಎನ್ನುವುದು ಪ್ರತಿಯೊಬ್ಬನ ಆಂತರಿಕ ವಿಚಾರ. ಅದನ್ನು ಸಾರ್ವಜನಿಕವಾಗಿ ಪ್ರದರ್ಶಿಸುವ ಅಗತ್ಯವಿಲ್ಲ. ಹಾಗಾಗಿ ವೌಢ್ಯಾಚರಣೆ ಪ್ರತಿಬಂಧಕ ಕಾಯ್ದೆಯನ್ನು ಜಾರಿ ಮಾಡಲಿ ಎಂದು ಅವರು ತಿಳಿಸಿದರು.
ವಿಚಾರವಾದಿ ಜಿ.ರಾಮಕೃಷ್ಣ, ಹಿರಿಯ ಸಾಹಿತಿ ಡಾ.ಮರುಳ ಸಿದ್ದಪ್ಪ ಮಾತನಾಡಿ, ದೇಶದಲ್ಲಿ ಜಾತಿಯ ಹೆಸರಿನಲ್ಲಿ ದಲಿತ ಸಮುದಾಯವನ್ನು ಕ್ರೂರವಾಗಿ ನಡೆಸಿಕೊಂಡಿದೆ. ದಲಿತ ಮಹಿಳೆಯರನ್ನು ದೇವದಾಸಿ ಹೆಸರಿನಲ್ಲಿ ಲೈಂಗಿಕವಾಗಿ ಇಂದಿಗೂ ಶೋಷಿಸುತ್ತಾ ಬರಲಾಗುತ್ತಿದೆ. ಇಂತಹ ಅನಿಷ್ಟ ಆಚರಣೆಗಳನ್ನು ನಿಷೇಧಿಸಲು ಸರಕಾರ ಯಾವ ಕಾರಣಕ್ಕ್ಕೂ ಮೀನಾಮೇಷ ಎಣಿಸಬಾರದೆಂದು ತಿಳಿಸಿದರು.

ಕಾಯ್ದೆ ಜಾರಿಗೆ ಸಂಪುಟದಲ್ಲಿ ಚರ್ಚೆ: ಸಚಿವ ಜಯಚಂದ್ರ
ಬೆಂಗಳೂರು, ನ.16: ವೌಢ್ಯಾಚರಣೆ ಪ್ರತಿಬಂಧಕ ಕಾಯ್ದೆಯನ್ನು ಸಂಪುಟ ಸಭೆಯಲ್ಲಿ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ಹೇಳಿದ್ದಾರೆ.
ಸೋಮವಾರ ಇಲ್ಲಿನ ಫ್ರೀಡಂ ಪಾರ್ಕ್‌ನಲ್ಲಿ ವೌಢ್ಯಾ ಚರಣೆ ಪ್ರತಿಬಂಧಕ ಕಾಯ್ದೆ ಜಾರಿಗೆ ಆಗ್ರಹಿಸಿ ಆಯೋಜಿಸಿದ್ದ ಬಹಿರಂಗ ಸಮಾವೇಶದಲ್ಲಿ ಮನವಿ ಪತ್ರವನ್ನು ಸ್ವೀಕರಿಸಿ ಮಾತನಾಡಿದ ಅವರು, ವೌಢ್ಯಾಚರಣೆ ಪ್ರತಿಬಂಧಕ ಕಾಯ್ದೆ ಜಾರಿಗೆ ಆಗ್ರಹಿಸಿ ಸ್ವಾಮೀಜಿಗಳು ಹಾಗೂ ಸಾರ್ವಜನಿಕರು ಹೋರಾಟ ನಡೆಸುತ್ತಿದ್ದಾರೆ. ಈ ಬಗ್ಗೆ ಶೀಘ್ರದಲ್ಲೇ ಸಕಾರಾತ್ಮಕ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಸಮಾಜ ಕಲ್ಯಾಣ ಸಚಿವ ಆಂಜನೇಯ ಮಾತ ನಾಡಿ, ನಮ್ಮ ಸಮುದಾಯದ ಹೆಣ್ಣು ಮಕ್ಕಳು ದೇವದಾಸಿಯಾಗುವುದನ್ನು ಕಣ್ಣಾರೆ ನೋಡಿದ್ದೇನೆ. ಆ ಬಗ್ಗೆ ಅಪಾರವಾಗಿ ನೊಂದಿದ್ದೇನೆ. ಈಗ ಅಂತಹ ಅನಿಷ್ಟ ಆಚರಣೆಗಳನ್ನು ನಿಷೇಧಿಸುವಂತಹ ಕಾನೂನನ್ನು ಜಾರಿ ಮಾಡುವಂತಹ ಅವಕಾಶ ಸಿಕ್ಕಿದೆ. ಅದನ್ನು ಶೀಘ್ರದಲ್ಲಿಯೇ ಜಾರಿ ಮಾಡುತ್ತೇವೆಂದು ಭರವಸೆ ನೀಡಿದರು.

Write A Comment