ಕರ್ನಾಟಕ

ನ.16ರಿಂದ ವಿಧಾನಮಂಡಲ ಅಧಿವೇಶನ : ಸದನ ಕಲಾಪದಲ್ಲಿ ಹೊಸ ದಾಖಲೆ

Pinterest LinkedIn Tumblr

Vidhana_Soudha_photo

ಬೆಂಗಳೂರು, ನ.13-ವಿಧಾನಸಭೆ ಇತಿಹಾಸದಲ್ಲಿ ಸತತ 13 ವರ್ಷದಿಂದೀಚೆಗೆ ಅತಿ ಹೆಚ್ಚು ಅಧಿವೇಶನ ಕಾರ್ಯಕಕಲಾಪ ನಡೆದ ಘಟನೆಯಾಗಿದೆ. ವಿಧಾನಸಭೆಯಲ್ಲಿ 48 ದಿನ ಅಧಿವೇಶನ ನಡೆದಿದ್ದು, ಮುಂಬರುವ ಹತ್ತು ದಿನ ಅಧಿವೇಶನ ಒಳಗೊಂಡರೆ 58 ದಿನ ಆಗಲಿದೆ ಎಂದು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನ ಪರಿಷತ್ ಈಗಾಗಲೇ 50 ದಿನ ಅಧಿವೇಶನ ನಡೆದಿದ್ದು, ಮುಂಬರುವ ಹತ್ತು ದಿನ ಅಧಿವೇಶನ ಒಳಗೊಂಡರೆ 60 ದಿನ ಆಗಲಿದೆ ಎಂದರು.  ವರ್ಷಕ್ಕೆ 60 ದಿನ ಅಧಿವೇಶನ ನಡೆಸಬೇಕೆಂದು ಕಾನೂನು ಮಾಡಿ ಹಲವಾರು ವರ್ಷ ಕಳೆದರೂ ಈವರೆಗೂ 53 ದಿನ ಮೇಲ್ಪಟ್ಟು ಕಲಾಪ ನಡೆದಿರಲಿಲ್ಲ. ವಿಧಾನಸಭೆಯಲ್ಲಿ 2012ರಲ್ಲಿ 35 ದಿನ, 2014ರಲ್ಲಿ 53 ದಿನ ಮಾತ್ರ ಕಲಾಪ ನಡೆದಿತ್ತು.  ಇದೇ ಮೊದಲ ಬಾರಿಗೆ 58 ದಿನಗಳತ್ತ ಕಲಾಪ ದಾಪುಗಾಲಿಟ್ಟಿದೆ ಎಂದರು.

ನ.16 ರಂದು ಬೆಳಗ್ಗೆ 11ಕ್ಕೆ ವಿಧಾನಸಭೆ ಕಲಾಪ ಸಮಾವೇಶಗೊಳ್ಳಲಿದೆ. ಮೊದಲ ದಿನ ಮೃತಪಟ್ಟ ಹಾಲಿ ಶಾಸಕ ವೆಂಕಟೇಶ್‌ನಾಯಕ್, ಮಾಜಿ ಜವಳಿ ಸಚಿವ ಎಂ.ಮಹದೇವ್, ಮಾಜಿ ಶಾಸಕರಾದ ಮಹದೇವಪ್ಪ, ಜಯಪ್ರಕಾಶ್ ಶೆಟ್ಟಿ, ಕೃಷ್ಣಮೂರ್ತಿ, ಹಿರಿಯ ಸಾಹಿತಿಗಳಾದ ಕಯ್ಯಾರ ಕಿಂಜ್ಞಣ್ಣ ರೈ, ಡಾ.ಎಂ.ಎಂ.ಕಲಬುರ್ಗಿ, ಚಿತ್ರ ನಿರ್ದೇಶಕ ಕೆ.ಎಸ್.ಎಲ್ ಸ್ವಾಮಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ, ಕಲಾಪ ಮುಂದೂಡಲಾಗುವುದು. ಮರುದಿನ ಯಥಾವತ್ ಕಲಾಪ ನಡೆಯಲಿದೆ ಎಂದು ಕಾಗೋಡು ತಿಮ್ಮಪ್ಪ ತಿಳಿಸಿದರು.

ಕರ್ನಾಟಕ ಕಾಕಂಬಿ ವಿಧೇಯಕ, ಬೆಂಗಳೂರು ನೀರು ಸರಬರಾಜು ಮತ್ತು ಗ್ರಾಮಸಾರ ಚರಂಡಿ ವ್ಯವಸ್ಥೆ, ಕರ್ನಾಟಕ ಸಿವಿಲ್ ಸಂಘಗಳ ಕೃಷಿ ಇಲಾಖೆ ಸಿಬ್ಬಂದಿ ಅಧಿಕಾರಿಗಳ ವರ್ಗಾವಣೆ ವಿಧೇಯಕ ಅಂಗೀಕರಿಸಲಾಗುವುದು ಎಂದರು. ಕಲಾಪದ 10 ದಿನಗಳ ವರೆಗೂ ಪ್ರಶ್ನೋತ್ತರ ನಡೆಯಲಿದೆ. ಈವರೆಗೆ 2681 ಪ್ರಶ್ನೆಗಳನ್ನು ಸ್ವೀಕರಿಸಲಾಗಿದ್ದು, ಅದರಲ್ಲಿ 75 ಚುಕ್ಕೆ ಗುರುತಿನ ಪ್ರಶ್ನೆಗಳು 995 ಚುಕ್ಕೆರಹಿತ ಪ್ರಶ್ನೆಗಳಿವೆ ಹಾಗೂ 15 ಗಮನ ಸೆಳೆಯುವ ಸೂಚನೆಗಳಿವೆ, ನಿಯಮ 351ರಡಿ 12 ಸೂಚನೆಗಳನ್ನು ಸ್ವೀಕರಿಸಲಾಗಿದೆ ಎಂದು ಅವರು ಹೇಳಿದರು. ಶಾಸಕ ಕೆ.ಗೋಪಾಲಯ್ಯನವರು ನಾಡಪ್ರಭು ಕೆಂಪೇಗೌಡರ ಸಮಾಧಿ ಸ್ಥಳ ಅಭಿವೃದ್ಧಿಪಡಿ ಸುವ ಬಗ್ಗೆ ಮತ್ತು ಬಿ.ಬಿ.ನಿಂಗಯ್ಯ ಅವರು ಪೊಲೀಸ್ ಠಾಣೆಗಳ ಮುಂದಿರುವ ವಾರಸುದಾg ರಿಲ್ಲದ ವಾಹನಗಳ ವಿಲೇವಾರಿಗಳ ಬಗ್ಗೆ ಖಾಸಗಿ ವಿಧೇ ಯಕ ಮಂಡಿಸಲಿದ್ದಾರೆ ಎಂದು ಹೇಳಿದರು.

ಅಂಬೇಡ್ಕರ್-ಬಸವಣ್ಣ ಭಾವಚಿತ್ರ ಅನಾವರಣ :ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಇದೇ ಸಂದರ್ಭದಲ್ಲಿ ಮಾತನಾಡಿ, ನ.16 ರಂದು ಆರಂಭಗೊಳ್ಳಲಿರುವ ವಿಧಾನ ಪರಿಷತ್ ಕಲಾಪದಲ್ಲಿ ಮೊದಲ ದಿನ ವಿಧಾನಪರಿಷತ್ ಸಭಾಂಗಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಜಗಜ್ಯೋತಿ ಬಸವಣ್ಣನವರ ಭಾವಚಿತ್ರ ಅನಾವರಣ ಕಾರ್ಯಕ್ರಮ ನಡೆಯಲಿದೆ. ಸಿಎಂ ಸಿದ್ದರಾಮಯ್ಯ ಭಾವಚಿತ್ರ ಅನಾವರಣಗೊಳಿಸುವರು ಎಂದರು.
ವಿಧಾನ ಪರಿಷತ್‌ನಲ್ಲಿ ಈಗಾಗಲೇ ಲಾಲ್ ಬಹದ್ದೂರ್ ಶಾಸ್ತ್ರಿ, ಸರ್ ಎಂ.ವಿಶ್ವೇಶ್ವರಯ್ಯ, ಸುಭಾಷ್‌ಚಂದ್ರಭೋಸ್, ವಿವೇಕಾನಂದ ಮತ್ತು ರಾಷ್ಟ್ರಪಿತ ಮಹಾತ್ಮಾಗಾಂಧೀಜಿ ಅವರ ದೊಡ್ಡದಾದ ಭಾವಚಿತ್ರಗಳಿವೆ. ಇದರ ಜೊತೆ ಅಂಬೇಡ್ಕರ್ ಮತ್ತು ಬಸವಣ್ಣರ ಭಾವಚಿತ್ರ ಅಳವಡಿಸಲು ಎಲ್ಲರೊಂದಿಗೆ ಚರ್ಚೆ ಮಾಡಿ ನಿರ್ಣಯ ಕೈಗೊಳ್ಳಲಾಗಿದೆ ಎಂದರು.

ಅಂದು ಬೆಳಗ್ಗೆ 10.30ಕ್ಕೆ ಕಾರ್ಯಕ್ರಮ ಆರಂಭವಾಗಲಿದ್ದು, 30 ನಿಮಿಷಗಳ ಕಾಲ ಕಾರ್ಯಕ್ರಮ ನಡೆಯಲಿದೆ ಎಂದ ಶಂಕರಮೂರ್ತಿ, ಅಂಬೇಡ್ಕರ್ ಅವರ ನೈಜ ಧ್ವನಿಮುದ್ರಿಕೆಯನ್ನು ಸದಸ್ಯರಿಗೆ ತಿಳಿಸಲಾಗುವುದು. 125ನೇ ಅಂಬೇಡ್ಕರ್ ಜಯಂತಿ ಸಂದರ್ಭದಲ್ಲಿ ಭಾವಚಿತ್ರ ಅನಾವರಣ ನಡೆಯಲಿದೆ ಎಂದರು. ಪ್ರಧಾನಿ ನರೇಂದ್ರ ಮೋದಿಯವರು ನಾಳೆ ಲಂಡನ್‌ನ ಸಂಸತ್ ಮುಂದಿರುವ ಥೇಮ್ಸ್ ನದಿಯ ದಡದಲ್ಲಿ ಬಸವಣ್ಣನವರ ಪುತ್ಥಳಿ ಅನಾವರಣಗೊಳಿಸಲಿದ್ದಾರೆ. ಇದಕ್ಕೆ ಕಾಕತಾಳಿಯ ಎಂಬಂತೆ ವಿಧಾನಪರಿಷತ್‌ನಲ್ಲೂ ಬಸವಣ್ಣನವರ ಭಾವಚಿತ್ರ ಅನಾವರಣಗೊಳಿಸಲಾಗುವುದು ಎಂದು ಹೇಳಿದರು. ಅಧ್ಯಕ್ಷರ  ಮೆಚ್ಚುಗೆ : ವಿಧಾನ ಪರಿಷತ್ ಕಲಾಪದಲ್ಲಿ ಸದಸ್ಯರ ಭಾಗವಹಿಸುವಿಕೆ ಉತ್ತಮವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಸಭಾಪತಿಗಳು, ವಿಧಾನ ಪರಿಷತ್ ಸಭಾಪತಿಯಾಗಿ ನಾನು ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಯಾರ ಪರವಾಗಿಯೂ ಅಥವಾ ವಿರುದ್ಧವಾಗಿಯೂ ನಡೆದುಕೊಂಡಿಲ್ಲ ಎಂದು ಹೇಳಿದರು.

Write A Comment