ಕರ್ನಾಟಕ

ನಾನು ರಾಜ್ಯಕ್ಕೆ ಸಿಎಂ, ಮೈಸೂರಿಗಲ್ಲ, ನೋಟು ಮುದ್ರಿಸುವ ಅಧಿಕಾರ ಇಲ್ಲ: ಸಿದ್ದರಾಮಯ್ಯ

Pinterest LinkedIn Tumblr

siddu-21

ಮೈಸೂರು: ನಾನು ಇಡೀ ರಾಜ್ಯಕ್ಕೆ ಮುಖ್ಯಮಂತ್ರಿ, ಮೈಸೂರಿಗಲ್ಲ. ರಾಜ್ಯದ ಸಮಗ್ರ ಅಭಿವೃದ್ಧಿ ಮಾಡುವುದು ನಮ್ಮ ಪ್ರಯತ್ನ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಹೇಳಿದ್ದಾರೆ.

ಇಂದು ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ, ಮೈಸೂರಿಗಿಂತ ಚಾಮರಾಜನಗರ ಅತ್ಯಂತ ಹಿಂದುಳಿದಿದೆ. ಅದನ್ನು ಅಭಿವೃದ್ಧಿ ಮಾಡಬೇಕಿದೆ ಮತ್ತು ಮೈಸೂರು ಜಿಲ್ಲೆಯೂ ಸಹ ಅಭಿವೃದ್ಧಿಯಾಗಬೇಕಿದೆ ಎಂದರು.

ಕುಡಿಯುವ ನೀರು, ವಿದ್ಯುತ್ ಎಲ್ಲರಿಗೂ ಸಿಗಬೇಕು. ಜನರ ಪ್ರಮುಖ ಆದ್ಯತೆಗಳಿಗೆ ಸರ್ಕಾರದ ಹಣ ಖರ್ಚು ಮಾಡಬೇಕು. ಸರ್ಕಾರದ ಹಣ ಜನರ ತೆರಿಗೆ ಹಣ, ನೋಟು ಮುದ್ರಿಸುವ ಅಧಿಕಾರ ನನಗೆ ಕೊಟ್ಟಿಲ್ಲ ಎಂದು ಶಾಸಕ ಕೆ.ವೆಂಕಟೇಶ್ ಅವರಿಗೆ ಸಿಎಂ ತಿರುಗೇಟು ನೀಡಿದರು.

ಸಿಎಂ ಮಾತನಾಡುವ ಮುನ್ನ ಮಾತನಾಡಿದ್ದ ಪಿರಿಯಾಪಟ್ಟಣ ಕಾಂಗ್ರೆಸ್ ಶಾಸಕ ವೆಂಕಟೇಶ್ ಅವರು, ಎಲ್ಲಾ ಮುಖ್ಯಮಂತ್ರಿಗಳು ನಿಮ್ಮ ರೀತಿ ಜಿಪುಣತನ ಮಾಡಿಲ್ಲ. ಒಮ್ಮೆ ಶಿವಮೊಗ್ಗಕ್ಕೆ ಹೋಗಿ ಬನ್ನಿ, ಮೊದಲು ಶಿವಮೊಗ್ಗ ನೋಡಲು ಆಗುತ್ತಿರಲಿಲ್ಲ. ಈಗ ಶಿವಮೊಗ್ಗ ನೋಡುವುದಕ್ಕೆ ಆನಂದವಾಗುತ್ತದೆ ಎಂದರು.

ಮುಂದೆ ಅವಕಾಶ ಸಿಗುತ್ತದೋ ಇಲ್ಲವೋ ಗೊತ್ತಿಲ್ಲ ಆದರೆ ಅವಕಾಶ ಸಿಕ್ಕಿರುವಾಗಲೇ ಜಿಲ್ಲೆಯ ಅಭಿವೃದ್ಧಿ ಕೆಲಸ ಮಾಡಬೇಕು ಎಂದು ಶಾಸಕರು ಆಗ್ರಹಿಸಿದರು.

Write A Comment