ಕರ್ನಾಟಕ

ಹಂದಿ ಮಾಂಸ ತಿಂತಾರಾ ಸಿಎಂ? ಶೆಟ್ಟರ್ ಪ್ರಶ್ನೆ

Pinterest LinkedIn Tumblr

shetter-new

ಬೆಂಗಳೂರು: ಗೋಮಾಂಸ ತಿನ್ನುತ್ತೇನೆ ಎಂದು ಹೇಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಂದಿ ಮಾಂಸ ತಿನ್ನುತ್ತೇನೆ ಎಂದು ಹೇಳಲಿ. ಆಗ ಯಾರ ಮನಸ್ಸಿಗೆ ನೋವಾಗುತ್ತದೆ ಎಂದು ಗೊತ್ತಾಗುತ್ತದೆ.ನಿಜವಾದ ಬಣ್ಣ ಗೊತ್ತಾಗುತ್ತದೆ ಎಂದು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಕಟುಕಿದ್ದಾರೆ. ಗೋಮಾಂಸ ತಿನ್ನುವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಕ್ಕೆ ತಿರುಗೇಟು ನೀಡಿರುವ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌, ಸಿಎಂ ಹಂದಿ ಮಾಂಸವನ್ನೂ ತಿನ್ನಲಿ ಎಂದು ಸವಾಲು ಹಾಕಿದರು.ಮತಬ್ಯಾಂಕ್‌ ರಾಜಕಾರಣಕ್ಕಾಗಿ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದು ತರಾಟೆ ತೆಗೆದುಕೊಂಡರೆ, ಸಚಿವ ಖಾದರ್‌ ಕೇಂದ್ರಕ್ಕೆ ತಾಕತ್ತಿದ್ದರೆ ಗೋಹತ್ಯೆಯನ್ನು ನಿಷೇಧಿಸಲಿ ಎಂದು ಆಗ್ರಹಿಸಿದ್ದಾರೆ. ಹಂದಿ ಮಾಂಸದ ಪ್ರಸ್ತಾಪ: ಗೋಮಾಂಸ ಕುರಿತಂತೆ ಮುಖ್ಯಮಂತ್ರಿಗಳು ಹಿಂದೆ ನೀಡಿದ್ದ ಹೇಳಿಕೆಗೆ ಬೆಂಗಳೂರಲ್ಲಿ ಪ್ರತಿಕ್ರಿಯೆ ನೀಡಿದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌, ಗೋಮಾಂಸ ತಿನ್ನುವವರಿಗೆ ಹಂದಿ ಮಾಂಸ ತಿನ್ನುವ ಆಸೆ ಇರೋಲ್ವ. ಹಂದಿ ಮಾಂಸವನ್ನು ತಿಂತಾರೆ ಬಿಡಿ ಎಂದು ಚುಚ್ಚಿದರು.

Write A Comment