ಕರ್ನಾಟಕ

ಗೋಮಾಂಸ ಸೇವನೆ ಹೇಳಿಕೆಗೆ ಈಗಲೂ ಬದ್ಧ: ಮುಖ್ಯಮಂತ್ರಿ ಸಿದ್ದರಾಮಯ್ಯ

Pinterest LinkedIn Tumblr

sidda

ಬೆಂಗಳೂರು, ನ. 1 : ಗೋಮಾಂಸ ಸೇವನೆ ಬಗ್ಗೆ ತಾವು ಇತ್ತೀಚೆಗೆ ನೀಡಿರುವ ಹೇಳಿಕೆಗೆ ಈಗಲೂ ಬದ್ಧನಾಗಿದ್ದೇನೆ. ಬಿಜೆಪಿಯವರು ಎಷ್ಟು ಬೇಕಾದರೂ ಪ್ರತಿಭಟನೆ ಮಾಡಿಕೊಳ್ಳಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.

ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಇದುವರೆಗೆ ಗೋಮಾಂಸ ತಿಂದಿಲ್ಲ, ಮುಂದೆ ತಿನ್ನುತ್ತೇನೆ ಎಂದು ಹೇಳಿದ್ದೇನೆ.

ಗೋಮಾಂಸ ತಿನ್ನುವುದು ನನ್ನ ಇಷ್ಟ, ಅದರಿಂದ ಬಿಜೆಪಿ ಅವರಿಗೆ ಏನು ನಷ್ಟ ಎಂದು ಪ್ರಶ್ನಿಸಿದ ಅವರು, ಗೋಹತ್ಯೆ ನಿಷೇಧದ ಪ್ರಸ್ತಾಪ ಸಂವಿಧಾನದಲ್ಲಿ ಇದೆ ಎಂದು ಬಿಜೆಪಿ ಅವರು ಹೇಳುತ್ತಾರೆ. ಅವರು ಸಂವಿಧಾನವನ್ನು ಸರಿಯಾಗಿ ಓದಿಕೊಂಡಿಲ್ಲ. ನಾನು ಸಂವಿಧಾನವನ್ನು ಸರಿಯಾಗಿ ಓದಿಕೊಂಡಿದ್ದೇನೆ. ಬಿಜೆಪಿಯವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ. ಈ ವಿಷಯದಲ್ಲಿ ಮಾತ್ರ ಸಂವಿಧಾನ ಪ್ರಸ್ತಾಪ ಮಾಡುತ್ತಿದ್ದಾರೆ. ಅವರು ಪ್ರತಿಭಟನೆ ಮಾಡಿಕೊಳ್ಳಲಿ ಎಂದು ತಿರುಗೇಟು ನೀಡಿದರು.

Write A Comment