ಕರ್ನಾಟಕ

ಬೆಂಗಳೂರಿಗರಿಗೆ ಬೆಸ್ಕಾಂ ಶಾಕ್: ಪ್ರತಿದಿನ 3 -4 ತಾಸು ಲೋಡ್ ಶೆಡ್ಡಿಂಗ್

Pinterest LinkedIn Tumblr

load_sheddingಬೆಂಗಳೂರು: ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿ ಬೆಂಗಳೂರಿಗರಿಗೆ ಮತ್ತೆ ಶಾಕ್ ನೀಡಿದ್ದು ಪ್ರತಿ ದಿನ 2 ಗಂಟೆಗೆ ಬದಲಾಗಿ 3 ಗಂಟೆ ವಿದ್ಯುತ್ ಕಡಿತಗೊಳಿಸುವುದಾಗಿ ಹೇಳಿದೆ.

ತಕ್ಷಣವೇ ಜಾರಿಗೆ ಬರುವಂತೆ ಬೆಸ್ಕಾಂ ಆದೇಶ ಹೊರಡಿಸಿದ್ದು, ಬೆಳಿಗ್ಗೆ 6 ರಿಂದ ರಾತ್ರಿ 9 ರ ನಡುವೆ ಮೂರು ತಾಸು ಲೋಡ್ ಶೆಡ್ಡಿಂಗ್ ಮಾಡುವುದಾಗಿ ಬೆಸ್ಕಾಂ ವೆಬ್ ಸೈಟ್ ಮಾಹಿತಿ ನೀಡಿದೆ. ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಮೂರು ಗಂಟೆಗಳ ಕಾಲ ಹಾಗೂ ಗ್ರಾಮೀಣ ಭಾಗದಲ್ಲಿ ನಾಲ್ಕು ಗಂಟೆಗಳ ಕಾಲ ವಿದ್ಯುತ್ ಕಡಿತ ಜಾರಿಯಾಗಿದ್ದು, ಬೆಳಿಗ್ಗೆ 6 – 11, 11 – ಸಂಜೆ 4 , 4 -9 ಗಂಟೆಗಳ ನಡುವೆ ಮೂರು ಗಂಟೆಗಳು ವಿದ್ಯುತ್ ಇರುವುದಿಲ್ಲ.  ಬೆಳಿಗ್ಗೆ ಮಧ್ಯಾಹ್ನ, ಸಂಜೆ ಒಂದು ಗಂಟೆಗಳ ಕಾಲ ವಿದ್ಯುತ್ ಕಡಿತ ಜಾರಿಯಾಗಲಿದ್ದು ಈ ವೇಳಾಪಟ್ಟಿ ಮುಂದಿನ ವಾರದ ವರೆಗೆ ಜಾರಿಯಲ್ಲಿರುತ್ತದೆ.

ಕರ್ನಾಟಕದ 8 ಜಿಲ್ಲೆಗಳಿಗೆ ಬೆಸ್ಕಾಂ ನಿಂದ ವಿದ್ಯುತ್ ಪೂರೈಕೆಯಾಗುತ್ತಿದ್ದು ಉಳಿದ ಭಾಗಗಳಲ್ಲಿ ಪ್ರತಿ ದಿನ 4 ಗಂಟೆ ವಿದ್ಯುತ್ ಇರುವುದಿಲ್ಲ. ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ ತಾಂತ್ರಿಕ ಸಮಸ್ಯೆಗಳು ಮತ್ತು ನಿರ್ವಹಣೆಯಲ್ಲಿ ಸಮಸ್ಯೆ ಕಾಣಿಸಿಕೊಂಡಿರುವುದರಿಂದ ವಿದ್ಯುತ್ ಉತ್ಪಾದನೆ ಕುಂಟಿತವಾಗಿದೆ. ಈ ಹಿನ್ನೆಲೆಯಲ್ಲಿ ಲೋಡ್ ಶೆಡ್ಡಿಂಗ್ ಮಾಡಲಾಗುತ್ತಿದೆ ಎಂದು  ಬೆಸ್ಕಾಂ ನ ಪ್ರಧಾನ ವ್ಯವಸ್ಥಾಪಕಿ ಜಯಂತಿ ತಿಳಿಸಿದ್ದಾರೆ. ಪರಿಸ್ಥಿತಿ ಸುಧಾರಿಸಿದ ನಂತರ ಲೋಡ್ ಶೆಡ್ಡಿಂಗ್ ಅವಧಿ ಕಡಿಮೆಗೊಳಿಸಲಾಗುವುದು ಎಂದು ಹೇಳಿದ್ದಾರೆ.

Write A Comment