ಕರ್ನಾಟಕ

ಮೊಡವೆಗಳು ಮಾಯವಾಗಲು ಏನು ಮಾಡಬೇಕು…..ಇಲ್ಲಿದೆ ಟಿಪ್ಸ್

Pinterest LinkedIn Tumblr

pimple

ಎಣ್ಣೆ ಚರ್ಮ ಹೊಂದಿರುವವರಿಗೆ ಹೆಚ್ಚಾಗಿ ಮೊಡವೆಗಳು ಕಂಡು ಬರುತ್ತವೆ. ಮೊಡವೆಗಳು, ಕಲೆಗಳಿಂದ ಮುಕ್ತರಾಗಲು ಇಲ್ಲಿವೆ ಕೆಲವು ಟಿಪ್ಸ್.

* ಕೊತ್ತುಂಬರಿ ಸೊಪ್ಪು ಹಾಗೂ ಪುದೀನ ಸೊಪ್ಪಿಗೆ ಚಿಟಿಕೆ ಅರಿಶಿನ ಸೇರಿಸಿ ರಾತ್ರಿ ಹೊತ್ತು ಮುಖಕ್ಕೆ ಹಚ್ಚುತ್ತಾ ಬಂದರೆ ಮೊಡವೆಗಳು ಮಾಯವಾಗುತ್ತವೆ.
* ಮೆಂತ್ಯೆ ಸೊಪ್ಪನ್ನು ಅರೆದು ನಿತ್ಯ ರಾತ್ರಿ ಮಲಗುವಾಗ ಮುಖಕ್ಕೆ ಲೇಪಿಸಿಕೊಂಡು ಬೆಳಗ್ಗೆ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯುವುದನ್ನು ರೂಢಿಸಿಕೊಂಡರೆ ಮೊಡವೆಗಳು ನಿವಾರಣೆಯಾಗುತ್ತವೆ.
* ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಮುಖಕ್ಕೆ ನಯವಾಗಿ ತೀಡುವುದರಿಂದ ಮೊಡವೆಗಳು ಕ್ಷೀಣಿಸುತ್ತವೆ.
* ಹಸಿ ಬೆಳ್ಳುಳ್ಳಿಯನ್ನು ಮುಖಕ್ಕೆ ತೀಡುವುದರಿಂದ ಚರ್ಮ ನಯವಾಗುವುದಲ್ಲದೆ, ಮೊಡವೆಗಳನ್ನು ಕಡಿಮೆ ಮಾಡುತ್ತದೆ.
* ಸೌತೆಕಾಯಿ ರಸವನ್ನು ಮುಖ, ಕತ್ತಿನ ಸುತ್ತ ಹಾಗೂ ಕಣ್ಣಿನ ಸುತ್ತಲೂ ಹಚ್ಚುವುದರಿಂದ ಕಲೆಗಳು, ಮೊಡವೆಗಳು ನಿವಾರಣೆಯಾಗುತ್ತವೆ.
* ಮುಖಕ್ಕೆ ಆಗಾಗ್ಗೆ ನಿಂಬೆ ರಸವನ್ನು ಲೇಪಿಸುವುದರಿಂದ ಮುಖ ಕಾಂತಿಯುತವಾಗಿರುವುದಲ್ಲದೆ, ಮೊಡವೆಗಳು, ಕಲೆಗಳು ಮಾಯವಾಗುತ್ತವೆ.
* ಹಸಿ ಬೆಳ್ಳುಳ್ಳಿಯನ್ನು ದಿನವೂ ಸೇವಿಸುವುದರಿಂದ ಅದು ರಕ್ತವನ್ನು ಶುದ್ಧೀಕರಿಸುವುದಲ್ಲದೆ ಚರ್ಮವನ್ನು ನಯವಾಗಿಸುತ್ತದೆ.
* ನಿಂಬೆರಸ ಹಾಗೂ ರೋಸ್ ವಾಟರ್ ಅನ್ನು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚುವುದರಿಂದ ಮೊಡವೆಗಳು ಕಡಿಮೆಯಾಗುತ್ತವೆ.
* ಕರಿಬೇವಿನ ಎಲೆಯನ್ನು ಅರಿಶಿನದೊಡನೆ ಅರೆದು ದಿನವೂ ಹಚ್ಚಿ 15 ನಿಮಿಷಗಳ ನಂತರ ತೊಳೆದರೆ ಮೊಡವೆ ಸಮಸ್ಯೆಗೆ ಪರಿಹಾರ ದೊರೆಯುತ್ತದೆ.
* ಸ್ವಲ್ಪ ತುರಿದ ಆಪಲ್, ಬೇಯಿಸಿದ ಓಟ್ ಮೀಲ್, ಮೊಟ್ಟೆಯ ಲೋಳೆ ಹಾಗೂ ನಿಂಬೆರಸವನ್ನು ಮಿಶ್ರ ಮಾಡಿ ಮುಖಕ್ಕೆ ಹಚ್ಚುವುದರಿಂದ ಒಳ್ಳೆಯ ಫಲಿತಾಂಶ ದೊರೆಯುತ್ತದೆ.
* ನೆಲಗಡಲೆ ಎಣ್ಣೆಗೆ ಸ್ವಲ್ಪ ನಿಂಬೆರಸ ಸೇರಿಸಿ ಹಚ್ಚುವ ಮೂಲಕ ಮೊಡವೆಯಾಗದಂತೆ ನೋಡಿಕೊಳ್ಳಬಹುದು.
* ಚಕ್ಕೆಯನ್ನು ಕುಟ್ಟಿ ಪುಡಿಮಾಡಿ ಅದಕ್ಕೆ ಜೇನುತುಪ್ಪ ಬೆರೆಸಿ ಮಲಗುವ ಮುನ್ನ ಹಚ್ಚಿ ಬೆಳಗ್ಗೆ ಬಿಸಿನೀರಿನಲ್ಲಿ ತೊಳೆದರೆ ಮೊಡವೆಗಳು ನಿವಾರಣೆಯಾಗುತ್ತವೆ.
* ಬಾದಾಮಿಯನ್ನು ಜೇನಿನೊಂದಿಗೆ ಬೆರೆಸಿ ಮುಖಕ್ಕೆ ಲೇಪಿಸುತ್ತಿದ್ದರೆ ಮೊಡವೆಗಳು ಇಲ್ಲದಂತಾಗುತ್ತವೆ.
* ಮೊಟ್ಟೆಯ ಲೋಳೆಯನ್ನು ಹತ್ತಿಯಲ್ಲಿ ಅದ್ದಿ ಮುಖಕ್ಕೆ ಮೃದುವಾಗಿ ಲೇಪಿಸಿ ಸ್ವಲ್ಪ ಸಮಯದ ನಂತರ ಸ್ವಚ್ಚಗೊಳಿಸುವುದನ್ನು ರೂಢಿಸಿಕೊಂಡರೆ ಮುಖದ ಚರ್ಮದಲ್ಲಿನ ಎಣ್ಣೆಯಂಶ ನಿವಾರಣೆಯಾಗುವುದರ ಜೊತೆಗೆ ಚರ್ಮದ ರಂಧ್ರಗಳವರೆಗೂ ಇಳಿದು ಮೊಡವೆಗಳನ್ನೂ ನಿವಾರಿಸುತ್ತದೆ.
* ಹರೀಶ್ ಕುಮಾರ್

Write A Comment