ಕರ್ನಾಟಕ

ರಾಜ್ಯದಲ್ಲಿ ಒಂದೇ ತಿಂಗಳಲ್ಲಿ 75 ರೈತರ ಆತ್ಮಹತ್ಯೆ

Pinterest LinkedIn Tumblr

farmer2ಬೆಂಗಳೂರು: ರಾಜ್ಯದಲ್ಲಿ ಈ ಬಾರಿ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿದ್ದು, ಕಳೆದ ಒಂದು ತಿಂಗಳಲ್ಲಿ ಬರೋಬ್ಬರಿ 75 ರೈತರು ಆತ್ಮಹತ್ಯೆಗೆ ಶರಣಾಗಿರುವ ಆಘಾತಕಾರಿ ಮಾಹಿತಿ ಶನಿವಾರ ಹೊರ ಬಿದ್ದಿದೆ.

ಆತ್ಮಹತ್ಯೆಗೆ ಶರಣಾದ ರೈತರ ಪೈಕಿ ಕಬ್ಬು ಬೆಳೆಗಾರರೇ ಹೆಚ್ಚಾಗಿದ್ದು, ಡಾ.ಜಿ.ಕೆ ಸಮತಿ ವರದಿ ಜಾರಿಗೆ ತರುವುಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ರಾಷ್ಟ್ರೀಯ ಅಪರಾಧ ದಾಖಲೀಕರಣ ಮಂಡಳಿ(ಎನ್‌ಸಿಆರ್‌ಬಿ)ಯ ಅಂಕಿ ಅಂಶಗಳ ಪ್ರಕಾರ, ಭಾರತದಲ್ಲಿ 2004ರಿಂದ ಪ್ರತಿ ದಿನ ಸರಾಸರಿ 47 ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇನ್ನು ನಮ್ಮ ರಾಜ್ಯದಲ್ಲಿ ಇತ್ತೀಚಿಗೆ ಪ್ರತಿ ದಿನ ನಾಲ್ಕುರಿಂದ ಆರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪ್ರವಾಹ, ಕಬ್ಬು ಬೆಳೆಗೆ ಸರಿಯಾದ ಬೆಲೆ ಸಿಗದಿರುವುದು ಮತ್ತು ಹತ್ತಿ ಬೆಳೆಯ ವೈಫಲ್ಯದಿಂದಾಗಿ ಕರ್ನಾಟಕ ಹಾಗೂ ಆಂಧ್ರಪ್ರದೇಶದಲ್ಲಿ ಡಿಸೆಂಬರ್ 1997 ಮತ್ತು ಜೂನ್ 1998ರಲ್ಲಿ 400 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ರೈತರ ಆತ್ಮಹತ್ಯೆ ಕುರಿತು ಬೆಂಗಳೂರು ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಡಾ.ಜೆ.ಕೆ.ವೀರೇಶ್ ನೇತೃತ್ವದ ತಜ್ಞರ ಸಮಿತಿ 2002ರಲ್ಲೇ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ವರದಿಯಲ್ಲಿ ಕಬ್ಬು ಬೆಳೆಗಾರರಲ್ಲಿ ‘ಆತ್ಮಹತ್ಯೆ ಮನೋಭಾವ’ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ರೈತರನ್ನು ಆತ್ಮಹತ್ಯೆ ಮನೋಭಾವದಿಂದ ಹೊರ ತರಲು, ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿರುವ ಪ್ರತಿ ಆಸ್ಪತ್ರೆಗಳಲ್ಲೂ ಒಬ್ಬ ಮನೋವೈದ್ಯರ ಅಗತ್ಯ ಇದೆ. ಆತ್ಮಹತ್ಯೆ ಬಗ್ಗೆ ಒಲವು ತೋರುವ ರೈತರನ್ನು ಗುರುತಿಸಿ, ಅವರಿಗೆ ಸೂಕ್ತ ಚಿಕಿತ್ಸೆ ನೀಬೇಕು ಎಂದು ಶಿಫಾರಸು ಮಾಡಲಾಗಿತ್ತು. ಆದರೆ ಅದು ಇಲ್ಲಿಯವರೆಗೂ ಜಾರಿಗೆ ಬಂದಿಲ್ಲ.

ರೈತರ ಆತ್ಮಹತ್ಯೆಗೆ ನಿಖರವಾಗಿ ಒಂದೇ ಕಾರಣ ಇಲ್ಲ. ಕಬ್ಬಿನ ಬಾಕಿ ವಿಳಂಬ, ಕಡಿಮೆ ಬೆಲೆ ಸೇರಿದಂತೆ ಹಲವು ಕಾರಣಗಳಿವೆ. ರೈತರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ನಾವು 24 ಶಿಫಾರಸುಗಳನ್ನು ಮಾಡಿದ್ದೇವೆ. ಆದರೆ ಅದರಲ್ಲಿ ಕೆಲವೇ ಕೆಲವು ಮಾತ್ರ ಜಾರಿಗೆ ಬಂದಿವೆ. ಸದ್ಯದ ಸಮಸ್ಯೆ ಇರುವುದು ಕಬ್ಬು ಬೆಳೆಗಾರರಿಗೆ ಸಂಬಂಧಿಸಿದ್ದು. ಆದರೆ ಸರ್ಕಾರ ತಮ್ಮ ವರದಿಯನ್ನು ಜಾರಿಗೆ ತರುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಡಾ.ಜಿ.ಕೆ.ವೀರೇಶ್ ಅವರು ಹೇಳಿದ್ದಾರೆ.

Write A Comment