ಕರ್ನಾಟಕ

ಸೋಮವಾರದವರೆಗೆ ಅನಿಲ್ ಲಾಡ್ ಸಿಬಿಐ ಕಸ್ಟಡಿಗೆ

Pinterest LinkedIn Tumblr

BBMP-poterst346455567457484ಬೆಂಗಳೂರು, ಜು.16-ಬೇಲೇಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಶಾಸಕ ಅನಿಲ್ ಲಾಡ್ ಅವರನ್ನು ಜುಲೈ 20ರವರೆಗೆ ಸಿಬಿಐ ಕಸ್ಟಡಿಗೆ ಒಪ್ಪಿಸಿ ನ್ಯಾಯಾಲಯ ಆದೇಶ ನೀಡಿದೆ. ಇಂದು ಬೆಳಗ್ಗೆ ಬಳ್ಳಾರಿ ರಸ್ತೆಯಲ್ಲಿ ಸಿಬಿಐ ಕಚೇರಿಯಿಂದ ಅನಿಲ್ ಲಾಡ್

ಅವರನ್ನು ಬಿಗಿ ಭದ್ರತೆಯಲ್ಲಿ ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿರುವ ಸಿಬಿಐ ನ್ಯಾಯಾಲಯಕ್ಕೆ ಕರೆತರಲಾಯಿತು.  ಲಾಡ್ ಪರವಾಗಿ ಇಂದು ಹಿರಿಯ ವಕೀಲ  ಸಿ.ವಿ.ನಾಗೇಶ್ ವಾದ ಮಂಡಿಸಿ ಜಾಮೀನು ನೀಡುವಂತೆ ಮನವಿ ಮಾಡಿದ್ದರು. ಆದರೆ ಇನ್ನಷ್ಟು ವಿಚಾರಣೆ ನಡೆಸುವ ಅವಶ್ಯಕತೆ ಇದೆ ಎಂದು ಸಿಬಿಐ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದರು.  ಇದನ್ನು ಪುರಸ್ಕರಿಸಿದ ನ್ಯಾಯಾಧೀಶರಾದ ಕೆ.ಎಚ್.ಮಲ್ಲಪ್ಪ ಅವರು  ಜುಲೈ 20ರವರೆಗೆ ಅನಿಲ್ ಲಾಡ್ ಅವರನ್ನು ಸಿಬಿಐ ಕಸ್ಟಡಿಗೆ ವಹಿಸಿ ಜಾಮೀನು ಅರ್ಜಿಯನ್ನು ಅಂದೇ ಸಲ್ಲಿಸುವಂತೆ ತಿಳಿಸಿದರು. ಇದೇ ವೇಳೆ ಸಿಬಿಐಗೂ ಆಕ್ಷೇಪಣೆ ಸಲ್ಲಿಸಲು ಅವಕಾಶವನ್ನೂ ನೀಡಿದ್ದಾರೆ. ಸಿಬಿಐ ಕಚೇರಿ ಬಳಿ ಆನಂದ್ಸಿಂಗ್: ಬೇಲೇಕೇರಿ ಅದಿರು ನಾಪತ್ತೆ ಪ್ರಕರಣದಲ್ಲೇ ಈ ಹಿಂದೆ ಬಂಧಿಯಾಗಿದ್ದ ಆನಂದ್ಸಿಂಗ್ ಇಂದು ಸಿಬಿಐ ಕಚೇರಿ ಬಳಿ ಕಾಣಿಸಿಕೊಂಡಿದ್ದು ಕುತೂಹಲ ಕೆರಳಿಸಿತ್ತು. ಸಿಂಗ್ ಅವರನ್ನೂ ಕೂಡ ಇಂದು ಸಿಬಿಐ ಅಧಿಕಾರಿಗಳು ವಿಚಾರಣೆ ಕರೆಸಿದ್ದರು ಎಂದು ನಂತರ ತಿಳಿದುಬಂತು.

ಅನಿಲ್ ಲಾಡ್ ಬಂಧನ
ಬೆಂಗಳೂರು, ಜು.16-ಬಳ್ಳಾರಿ ಕಾಂಗ್ರೆಸ್ ಶಾಸಕ ಅನಿಲ್ ಲಾಡ್ ಅವರನ್ನು ಸಿಬಿಐ ಬಂಧಿಸಿರುವ ಮಾಹಿತಿಯನ್ನು ಕಾಗೋಡು ತಿಮ್ಮಪ್ಪ ವಿಧಾನ ಸಭೆಯಲ್ಲಿ ಪ್ರಕಟಿಸಿದರು. ಬೇಲೆಕೇರಿ ಅಕ್ರಮ ಅದಿರು ರಫ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಬಂಧಿತರಾದ ಅನಿಲ್ ಲಾಡ್ ಅವರನ್ನು ಇಂದು ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸುವುದಾಗಿ ಸಿಬಿಐ ಪೊಲೀಸ್ ಸೂಪರಿಂಟೆಂಡೆಂಟ್ ಅವರು ತಮಗೆ ಮಾಹಿತಿ ನೀಡಿದ್ದಾರೆಂದು ಸಭಾಧ್ಯಕ್ಷ ತಿಮ್ಮಪ್ಪ ಸದನದಲ್ಲಿ ಪ್ರಕಟಿಸಿದರು.

Write A Comment