ಕರ್ನಾಟಕ

ಕಹಿ ಬೇವಿನಿಂದ ಸಿಹಿ ಆರೋಗ್ಯ

Pinterest LinkedIn Tumblr

neem-health

‘ಹಸು ಕಪ್ಪಾದರೆ ಹಾಲು ಕಪ್ಪೇ’ ಎಂಬ ಮಾತಿದೆ. ಹಾಗೆ, ಕಹಿಯಾದ ಬೇವು ತನ್ನೊಡಲಲ್ಲಿ ಅದೆಷ್ಟೋ ಸಿಹಿಯಾದ ಗುಣಗಳನ್ನು ಬಚ್ಚಿಟ್ಟುಕೊಂಡಿದೆ.  ನೈಸರ್ಗಿಕವಾಗಿ ಆರೋಗ್ಯ ಹೆಚ್ಚಿಸುವ ಎಲ್ಲಾ ಗುಣಗಳನ್ನು ತನ್ನೊಳಗಿಟ್ಟುಕೊಂಡಿರುವ ಆ ಕಹಿ ಬೇವಿನ ಸಿಹಿ ಗುಣಗಳು ಇಲ್ಲಿವೆ ಓದಿ..

ಚರ್ಮ ರಕ್ಷಣೆ :

ನೀರಿಗೆ ಕೆಲವು ಬೇವಿನ ಎಲೆಗಳನ್ನು ಹಾಕಿ ಕೆಲ ಕಾಲ ಕುದಿಸಿ. ಆಗ ಬೇವಿನ ಎಲೆಗಳ ಬಣ್ಣ ನೀರಿಗೆ ಸೇರಿ ತಿಳಿಹಸಿರು ಬಣ್ಣ ಪಡೆಯುತ್ತದೆ. ಅದನ್ನು ಸೋಸಿ, ಆ ನೀರನ್ನು ನಿಮ್ಮ ಸ್ನಾನದ ನೀರಿನ ಬಕೆಟ್‍ಗೆ ಸೇರಿಸಿಕೊಂಡು ಸ್ನಾನ ಮಾಡಿ. ಇದರಲ್ಲಿರುವ ಆ್ಯಂಟಿಬ್ಯಾಕ್ಟರೀಯಲï, ಅ್ಯಂಟಿಫಂಗಲï ಅಂಶಗಳು ಚರ್ಮದ ಅಲರ್ಜಿಗಳನ್ನು ತಡೆಯುತ್ತದೆ. ಮೊಡವೆ ಸಮಸ್ಯೆ: ಹರೆಯದವರ ಮೊಡವೆ ಸಮಸ್ಯೆಗೆ ಅನಾದಿಕಾಲದಿಂದಲೂ ಬೇವನ್ನು ಔಷಧವಾಗಿ ಬಳಸಲಾಗುತ್ತಿದೆ. ನೀರಿನಲ್ಲಿ ಬೇವಿನ ಎಲೆಗಳನ್ನು ಹಾಕಿ ಕುದಿಸಿ, ಸೋಸಿಕೊಳ್ಳಿ.  ಕೇಶ ಸಂರಕ್ಷಕ: ತಲೆಹೊಟ್ಟಿನ ಸಮಸ್ಯೆಗೆ  ಬೇವಿನಪುಡಿಯನ್ನು ನೀರಿನೊಂದಿಗೆ ಕಲಸಿ ತಲೆಯ ಬುಡಕ್ಕೆ ಹಚ್ಚಿ ಕೆಲ ಸಮಯದ ನಂತರ ತಲೆ ತೊಳೆಯುವುದರಿಂದ ತಲೆಹೊಟ್ಟಿನಿಂದ ಮುಕ್ತಿ ಪಡೆಯಬಹುದು. ಇನ್ನು ಬ್ಲ್ಯಾಕ್‍ಹೆಡï ಸಮಸ್ಯೆಗೆ ಬೇವಿನ ಎಣ್ಣೆ ಬಳಕೆ ಉಪಯುಕ್ತ. ಚರ್ಮದ ಯೌವನಕ್ಕೆ :   ಬೇವಿನ ನಿರಂತರ ಬಳಕೆ ನಿಮ್ಮ ಚರ್ಮ ಸುಕ್ಕುಗಟ್ಟುವುದನ್ನು ತಡೆಯುತ್ತದೆ. ಬೇವಿನ ನೀರನ್ನು ಮುಖ ತೊಳೆಯಲು ಬಳಸುವುದರಿಂದ ಮುಖದ ಸುಕ್ಕುಗಳನ್ನು  ಮರೆಮಾಚಬಹುದು. ಇದು ಮುಖದಲ್ಲಿ ಮೂಡುವ ಮೊಡವೆಯ ಕಲೆಗಳನ್ನು ಹಾಗೂ ಗುರುತುಗಳನ್ನು ತೊಡೆದುಹಾಕುತ್ತದೆ. ಮುಖದಲ್ಲಿನ ಜಿಡ್ಡು ತೊಲಗಿಸಲು ಬೇವಿನ ಫೇಸ್‍ಪ್ಯಾಕ್ ಹಾಕಿಕೊಳ್ಳಬಹುದು. ಅದು ಒಣಗಿದ ನಂತರ ರೋಸ್‍ವಾಟರ್‍ನಲ್ಲಿ ಮುಖವನ್ನು ತೊಳೆಯಿರಿ. ಇದು ಮುಖದ ಚರ್ಮವನ್ನು ಮೃದುವಾಗಿಸುವುದಲ್ಲದೇ ಮುಖದ ಕಾಂತಿಯನ್ನು ಇಮ್ಮಡಿಗೊಳಿಸುತ್ತದೆ. ಬೇವಿನ ಬಳಕೆ ಒಣಚರ್ಮದವರಿಗೆ ಹೆಚ್ಚು ಸೂಕ್ತ.

ಕಹಿ ಬೇವಿನ ಸಿಹಿ ಗುಣಗಳು ಇಲ್ಲಿವೆ ನೋಡಿ…
ನಿತ್ಯ ಬೇವಿನ ಎಲೆಯ ರಸ ಸೇವಿಸಿದರೆ ವಿಷಪೂರಿತ ಕೀಟಗಳು ಕಚ್ಚಿದರೂ ವಿಷದ ಅಪಾಯ ವಾಗಲಾರದು. ನಿತ್ಯ ಬೇವಿನ ರಸ ಹಳೇ ಬೆಲ್ಲದೊಂದಿಗೆ ಸೇವಿಸಿದರೆ ಕುಷ್ಠ, ಕ್ಷಯ, ಕ್ಯಾನ್ಸರ್‍ಗಳು ವಾಸಿಯಾಗುತ್ತವೆ. ಚರ್ಮ ಕಾಯಿಲೆ, ತಲೆ ಹೊಟ್ಟುಗಳನ್ನು ನೋವು ದೂರ ಮಾಡುತ್ತದೆ. ಬೇವಿನ ರಸದಲ್ಲಿ ಅರಿಶಿನ ಪುಡಿ ಕಲಸಿ, ಮುಖಕ್ಕೆ ಲೇಪಿಸಿಕೊಂಡರೆ ಮೊಡವೆಗಳು ಮಾಯವಾಗುತ್ತವೆ. ತುರಿಕೆ- ಅಲರ್ಜಿ ಆಗಿದ್ದರೆ ಬೇವಿನ ರಸದಲ್ಲಿ ಉಪ್ಪು- ಲಿಂಬೆ ರಸ ಬೆರೆಸಿ ಲೇಪಿಸಿಕೊಂಡು ನಂತರ ಸ್ನಾನ ಮಾಡಬೇಕು.  ತಲೆಹೊಟ್ಟು, ಹೇನು ಆಗಿದ್ದರೆ ಬೇವಿನೆಣ್ಣೆಯಲ್ಲಿ ಸೀಗೆಕಾಯಿ ಪುಡಿ ಬೆರೆಸಿ ರಾತ್ರಿ ತಲೆಗೆ ಹಚ್ಚಿಕೊಂಡು ಬೆಳಗ್ಗೆ ಸ್ನಾನ ಮಾಡಬೇಕು. ಬೇವಿನ ರಸದಲ್ಲಿ ಶ್ರೀಗಂಧದ ಪುಡಿ ಬೆರೆಸಿ ಮುಲಾಮಿನಂತೆ ಹಚ್ಚಿಕೊಂಡರೆ ಹುಣ್ಣುಗಳು ಕಣ್ಮರೆಯಾಗುತ್ತವೆ. ಕೀಟಗಳು ವಿಪರೀತವಾಗಿದ್ದರೆ ಹಸಿ ಬೇವಿನ ಎಲೆಗಳ ಹೊಗೆ ಹಾಕಬೇಕು. ನೆಗಡಿ ಆಗಿದ್ದರೆ ಹಸಿ ಬೇವಿನೆಲೆಗಳ ಬಿಸಿ ನೀರಿನ ಸ್ಟೀಮï ತೆಗೆದುಕೊಂಡರೆ ಶಮನವಾಗುವುದು. ಚಳಿಗಾಲದಲ್ಲಿ ತುಟಿ- ಹಿಮ್ಮಡಿಗಳು ಬಿರುಕು ಬಿಟ್ಟಿದ್ದರೆ ಬೇವಿನ ರಸದಲ್ಲಿ ಗ್ಲಿಸರೀನï ಸೇರಿಸಿ ಲೇಪಿಸಿಕೊಳ್ಳಬೇಕು.

Write A Comment