ಕರ್ನಾಟಕ

ತಾಯಿ ಮೇಲೆ ಕೈ ಮಾಡಿದ್ದಕ್ಕೆಅಣ್ಣನನ್ನೇ ಸುಟ್ಟು ಕೊಂದರು

Pinterest LinkedIn Tumblr

mu

ರಾಮದುರ್ಗ: ಆಸ್ತಿಪಾಸ್ತಿಗಾಗಿ ಅಣ್ಣತಮ್ಮಂದಿರು ಜಗಳವಾಡಿ ಕೊಲೆಯಾಗುವುದರ ಕುರಿತು ಕೇಳೇ ಇರುತ್ತೀರಾ. ಆದರೆ ಕುಡಿದ ಮತ್ತಿನಲ್ಲಿ ತಾಯಿಯ ಮೇಲೆ ಹಲ್ಲೆ ಮಾಡಿದನೆಂಬ ಕಾರಣಕ್ಕೆ ಅಣ್ಣನನ್ನು ಸ್ವಂತ ತಮ್ಮಂದಿರೇ ಕೊಂದು ಬೆಂಕಿ ಹಚ್ಚಿ ಸುಟ್ಟು ಹಾಕಿದ ಘಟನೆ ರಾಮದುರ್ಗ ತಾಲ್ಲೂಕಿನಲ್ಲಿ ನೆದಿದೆ.
ತಾಲ್ಲೂಕಿನ ಆರಿಬೆಂಚಿ ಗ್ರಾಮದ ನಿವಾಸಿ ಹನುಮಂತ ಪಿರಗನ್ನವರ್(36) ಕೊಲೆಗೀಡಾದ ದುರ್ದೈವಿ. ಭಾನುವಾರ ರಾತ್ರಿ ಕಂಠಪೂರ್ತಿ ಕುಡಿದು ಮನೆಗೆ ಬಂದ ಆತ ಎಂದಿನಂತೆ ತನ್ನ ಪತ್ನಿಯೊಂದಿಗೆ ಜಗಳಕ್ಕಿಳಿದಿದ್ದಾನೆ.  ಮಧ್ಯೆ ಪ್ರವೇಶಿಸಿದ ತಾಯಿ ಆತನಿಗೆ ಬುದ್ಧಿ ಹೇಳಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಹನುಮಂತ ಪಿರಗನ್ನವರ್ ತಾಯಿ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿ ಮಾರಣಾಂತಿಕವಾಗಿ ಗಾಯಗೊಳಸಿದ್ದ.

ಇದರಿಂದ ರೊಚ್ಚಿಗೆದ್ದ ಆತನ ತಮ್ಮಂದಿರಾದ ಮಾರುತಿ (30) ಮತ್ತು ನಿಂಗಪ್ಪ (27) ಆತನ ಮೇಲೆ ಹರಿತವಾದ ಆಯುಧಗಳಿಂದ ದಾಳಿ ಮಾಡಿ ಕೊಲೆಗೈದಿದ್ದಾರೆ ಮತ್ತು ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ.

ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.

Write A Comment