ಕರ್ನಾಟಕ

ಶಾಸಕ ಜಮೀರ್ ಆಹಮದ್ ಖಾನ್ ಸುಪುತ್ರ ಝಾಯಿದ್ ಖಾನ್ ಬಾಲಿವುಡ್ ಸಿನಿಮಾದಲ್ಲಿ ಎಂಟ್ರಿ

Pinterest LinkedIn Tumblr

Zahid khan

ರಾಜಕಾರಣಿಗಳ ಮಕ್ಕಳು ಸಿನಿಮಾ ಹೀರೋ ಆಗುವ ಪಟ್ಟಿಗೆ ಈಗ ಚಾಮರಾಜಪೇಟೆ ಶಾಸಕ ಜಮೀರ್ ಆಹಮದ್ ಖಾನ್ ಸುಪುತ್ರ ಝಾಯಿದ್ ಖಾನ್ ಹೊಸ ಸೇರ್ಪಡೆ. ಬಾಲಿವುಡ್ ಸಿನಿಮಾ ಮೂಲಕವೇ ಝಾಹಿದ್ ಎಂಟ್ರಿ ಕೊಡುತ್ತಿರುವುದು ವಿಶೇಷ.

ಮೊನ್ನೆ ಮೊನ್ನೆಯಷ್ಟೇ, ಝಾಯಿದ್ ಅವರ ಫೊಟೋಶೂಟ್ ಆಗಿದೆ. ಅದೂ ದೂರದ ಮುಂಬೈನಲ್ಲಿ. ಆ ಫಸ್ಟ್​ಲುಕ್​ನ್ನಷ್ಟೇ ಈಗ ಹೊರಬಿಟ್ಟಿರುವ ಜಮೀರ್, ಪುತ್ರ ಹೀರೋ ಆಗುತ್ತಿರುವ ಅಧಿಕೃತ ಸೂಚನೆ ಕೊಟ್ಟಿದ್ದಾರೆ. ಅವರು ನಟಿಸುತ್ತಿರುವ ಹಿಂದಿ ಸಿನಿಮಾದ ಹೆಸರೇನು? ನಿರ್ದೇಶಕರು ಯಾರು? ಇವರೊಟ್ಟಿಗೆ ಬೇರೆ ಯಾವ ಕಲಾವಿದರು ಪರದೆ ಹಂಚಿಕೊಳ್ಳಲಿದ್ದಾರೆ? ಇತ್ಯಾದಿ ಯಾವ ವಿಷಯಗಳು ಲಭ್ಯವಿಲ್ಲ.

ಮೂಲಗಳ ಪ್ರಕಾರ, ಝಾಯಿದ್ ಹೀರೋ ಆಗುತ್ತಿರುವುದು ಪಕ್ಕಾ. ಅದೂ ಬಾಲಿವುಡ್​ನಿಂದಲೇ. ಆದರೆ, ಸದ್ಯಕ್ಕಿಲ್ಲವಂತೆ. ಕಾರಣ, ಝಾಯಿದ್ ಪ್ರಸ್ತುತ ಪದವಿ ಓದುತ್ತಿದ್ದು, ಅದು ಪೂರ್ಣಗೊಳ್ಳಲಿಕ್ಕೆ ಇನ್ನೂ ಒಂದು ವರ್ಷವಾದರೂ ಬೇಕಂತೆ. ಆಮೇಲಷ್ಟೇ, ನಟನೆ ಮಾತು ಎಂಬುದು ಜಮೀರ್ ಆಪ್ತ ವಲಯದ ಹೇಳಿಕೆ!

Write A Comment