ಕರ್ನಾಟಕ

ರಾಘವೇಶ್ವರ ಶ್ರೀಗಳಿಗೆ ಮತ್ತೊಂದು ಕಂಟಕ: ಮಠ ಕೈ ತಪ್ಪುವ ಭೀತಿ

Pinterest LinkedIn Tumblr

1410513986-1084

ಪದೇ ಪದೇ ಒಂದಲ್ಲಾ ಒಂದು ಸುದ್ದಿಗಳಿಂದಲೇ ಜಗಜ್ಜಾಹೀರಾಗುತ್ತಿರುವ ಜಿಲ್ಲೆಯ ಹೊಸನಗರದಲ್ಲಿನ ರಾಮಚಂದ್ರಾಪುರ ಮಠದ ಪೀಠಾಧಿಪತಿ ರಾಘವೇಶ್ವರ ಭಾರತಿ ಶ್ರೀಗಳು ಮತ್ತೊಮ್ಮೆ ಸುದ್ದಿಯಲ್ಲಿದ್ದು, ತಮ್ಮದೇ ಮಠದ ಅಧಿನದಲ್ಲಿರುವ ಶೃಂಗೇರಿಯ ಅಂಬಾಗಿರಿ ಮಠ ಕೈತಪ್ಪಿ ಹೋಗುವ ಆತಂಕದಲ್ಲಿದ್ದಾರೆ.

ಹೌದು, ಇದಕ್ಕೆ ಕಾರಣ ಅಂಬಾಗಿರಿ ಮಠದ ಅಂಬಿಕಾನಂದ ಸ್ವಾಮಿಜಿಗಳೇ ಆಗಿದ್ದಾರೆ. ಉತ್ತರ ಭಾರತದಲ್ಲಿದ್ದ ಶ್ರೀಗಳು ಇದ್ದಕ್ಕಿದ್ದಂತೆ ರಾಜ್ಯಕ್ಕೆ ಆಗಮಿಸಿದ್ದಾರೆ. ಅಲ್ಲದೆ ನಿನ್ನೆ ದಿಢೀರ್ ಎಂದು ಶೃಂಗೇರಿ ತಹಶೀಲ್ದಾರ್ ಅವರನ್ನು ಸಂಪರ್ಕಿಸಿರುವ ಶ್ರೀಗಳು, ರಾಘವೇಶ್ವರ ಶ್ರೀಗಳ ಆಡಳಿತದಲ್ಲಿರುವ ಮಠವನ್ನು ಸರ್ಕಾರದ ವಶಕ್ಕೆ ಪಡೆಯಬೇಕೆಂದು ಮನವಿ ಮಾಡಿದ್ದಾರೆ. ಅಲ್ಲದೆ ಶ್ರೀಗಳು ಈ ಸಂಬಂಧ ಕಾರಣವನ್ನೂ ಕೊಟ್ಟಿದ್ದು, ಇತ್ತೀಚೆಗೆ ಶ್ರೀಗಳಿಂದ ಮಠ ಅಭಿವೃದ್ಧಿಯಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಅಂಬಾಗಿರಿ ಮಠವನ್ನು ಸರ್ಕಾರ ತನ್ನ ವಶಕ್ಕೆ ಪಡೆದು ಸರ್ಕಾರಿ ಆಡಳಿತಾಧಿಕಾರಿಗಳನ್ನು ನೇಮಿಸುವ ಮೂಲಕ ಮಠದ ಅಭಿವೃದ್ಧಿಗೆ ಅನುವು ಮಾಡಿಕೊಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

ಇನ್ನು ಅಂಬಾಗಿರಿ ಮಠದಲ್ಲಿ ಕೆಲ ಭಕ್ತಾಧಿಗಳು ಶ್ರೀಗಳ ಈ ವರ್ತನೆ ಸಂಬಂಧ ಬೇಸರ ವ್ಯಕ್ತಪಡಿಸಿದ್ದು, ಮಠದಲ್ಲಿ ರಾಘವೇಶ್ವರ ಶ್ರೀಗಳ ಅಧಿಪತ್ಯದಲ್ಲಿ ಹಲವು ಕಾರ್ಯಗಳು ನೆರವೇರಿದ್ದು, ಉದ್ಯಾನ, ಕಲ್ಯಾಣ ಮಂಟಪ, ದೇವಸ್ಥಾನ ಜೀರ್ಣೋದ್ಧಾರ ಸೇರಿದಂತೆ ಇನ್ನಿತರೆ ಅಭಿವೃದ್ಧಿ ಕಾರ್ಯಗಳಾಗಿವೆ. ಆ ಬಗ್ಗೆ ಶ್ರೀಗಳೂ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದರೆ ಪ್ರಸ್ತುತ ಈ ರೀತಿಯಾಗಿ ವರ್ತಿಸುತ್ತಿರುವುದು ಬೇಸರ ತಂದಿದೆ ಎಂದಿದ್ದು, ಶ್ರೀಗಳ ಈ ವರ್ತನೆಗೆ ಕಾಣದ ಕೈಗಳ ಬೆಂಬಲವಿದ್ದು, ರಾಘವೇಶ್ವರ ಶ್ರೀಗಳ ಘನತೆಗೆ ಧಕ್ಕೆ ತರುವಂತಹ ಉದ್ದೇಶದಿಂದ ಈ ಷಡ್ಯಂತ್ರ ರೂಪಿಸಲಾಗಿದೆ ಎಂದು ಆರೋಪಿಸಿದ್ದಾರೆ.

ಅಂಬಿಕಾನಂದ ಶ್ರೀಗಳು ಪ್ರಸ್ತುತ ಶೃಂಗೇರಿಯ ಖಾಸಗಿ ನರ್ಸಿಗ್ ಹೋಂ ಒಂದರಲ್ಲಿ ತಂಗಿದ್ದು, ಮೌನ ವ್ರತದಲ್ಲಿದ್ದಾರೆ ಎಂದು ತಿಳಿದು ಬಂದಿದೆ.

Write A Comment