ಕರ್ನಾಟಕ

ಕೇರಳದಲ್ಲಿ ಮ್ಯಾಗಿ ನಿಷೇಧ, ರಾಜ್ಯದಲ್ಲೂ ನಿಷೇಧ ಸಾಧ್ಯತೆ

Pinterest LinkedIn Tumblr

maggi

ತಿರುವನಂತಪುರಂ/ಬೆಂಗಳೂರು: ನೆಸ್ಲೆ ಕಂಪನಿಯ ಮ್ಯಾಗಿಯಲ್ಲಿ ಹೆಚ್ಚಿನ ಪ್ರಮಾಣ ಸೀಸದ ಅಂಶವಿದೆ ಎಂಬ ಸಂಗತಿ ತಿಳಿದ ಮೇಲೆ ರಾಜ್ಯ ಸರ್ಕಾರಗಳು ಎಚ್ಚೆತ್ತುಕೊಂಡಿದ್ದು, ಕೇರಳದಲ್ಲಿ ಮ್ಯಾಗಿ ಉತ್ಪನ್ನಗಳಿಗೆ ನಿಷೇಧ ಹೇರಲಾಗಿದೆ. ಇನ್ನು ಕರ್ನಾಟಕದಲ್ಲೂ ಮ್ಯಾಗಿ ಉತ್ಪನ್ನಗಳನ್ನು ನಿಷೇಧಿಸುವ ಸಾಧ್ಯತೆ ಇದೆ.

ಕೇರಳ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಅನೂಪ್ ಜಾಕೊಬ್ ಅವರು ಮ್ಯಾಗಿ ಉತ್ಪನ್ನಗಳನ್ನು ನಿಷೇಧಿಸಿ ಇಂದು ಆದೇಶ ಹೊರಡಿಸಿದ್ದಾರೆ. ಮತ್ತೊಂದೆಡೆ ಕರ್ನಾಟಕ ಸರ್ಕಾರ ಸಹ ಮ್ಯಾಗಿ ಸ್ಯಾಂಪಲ್ಸ್ ಅನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿದ್ದು, ವರದಿ ಬಂದ ಬಳಿಕ ರಾಜ್ಯದಲ್ಲೂ ನಿಷೇಧ ಹೇರುವ ಸಾಧ್ಯತೆ ಇದೆ.

ಈಗಾಗಲೇ ಪಶ್ಚಿಮ ಬಂಗಾಳ,ಹರಿಯಾಣ,ಉತ್ತರಪ್ರದೇಶದಲ್ಲಿ ಮ್ಯಾಗಿ ಉತ್ಪನ್ನಗಳನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿದೆ. ಆ ನಿಟ್ಟಿನಲ್ಲಿ ದೇಶದ ಹಲವೆಡೆ ಮ್ಯಾಗಿ ನಿಷೇಧಕ್ಕೊಳಗಾಗುವ ಸಾಧ್ಯತೆ ಕಂಡು ಬರುತ್ತಿದೆ.

ಮ್ಯಾಗಿ ನೂಡಲ್ಸ್ ನಲ್ಲಿ ವಿಷಕಾರಿ ಅಂಶ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮ್ಯಾಗಿಯ ಪ್ರಚಾರ ರಾಯಭಾರಿಗಳಾದ ಬಾಲಿವುಡ್ ನಟ ಅಮಿತಾಬ್ ಬಚ್ಚನ್, ನಟಿ ಮಾಧುರಿ ದೀಕ್ಷಿತ್ ಮತ್ತು ನಟಿ ಪ್ರಿಯಾಂಕಾ ಚೋಪ್ರಾ ವಿರುದ್ಧ ಎಫ್ ಐಆರ್ ದಾಖಲಿಸುವಂತೆ ಬಿಹಾರದ ಮುಜಾಫರಪುರ ನ್ಯಾಯಾಲಯ ಪೊಲೀಸರಿಗೆ ಸೂಚನೆ ನೀಡಿದೆ.

Write A Comment