ಕರ್ನಾಟಕ

ಗುರುತಿನ ಚೀಟಿ ತೋರಿಸದೆ ಮತದಾನ ಮಾಡಿದ ಸಿಎಂ

Pinterest LinkedIn Tumblr

CM-Voting

ಮೈಸೂರು, ಮೇ 30-ಗ್ರಾ.ಪಂ.ಚುನಾವಣೆಯ ಹಿನ್ನೆಲೆಯಲ್ಲಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯರವರು ಮತ ಚಲಾಯಿಸಲು ತಮ್ಮ ಸ್ವಕ್ಷೇತ್ರಕ್ಕೆ ತೆರಳಿದ್ದಾಗ ಗುರುತಿನ ಚೀಟಿ ತೋರಿಸದೆ ನನಗೆ ನಾನೇ ಐಡೆಂಟಿಫಿಕೇಶನ್ ಎಂಬ ಉತ್ತರ ನೀಡಿ ಮತ ಚಲಾಯಿಸಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಇಂದು ಮಧ್ಯಾಹ್ನ ಸಿದ್ದರಾಮಯ್ಯರವರು ಮತ ಚಲಾಯಿಸಲು ಗುರುತಿನ ಚೀಟಿ ಬದಲಾಗಿ ಮತಗಟ್ಟೆ ಕ್ರಮ ಸಂಖ್ಯೆಯ ಚೀಟಿ ತಂದು ಚುನಾವಣಾ ಸಿಬ್ಬಂಧಿಗಳಿಗೆ ನೀಡಿದ್ದಾರೆ. ಈ ವೇಳೆ ಸಿಬ್ಬಂದಿ ಗುರುತಿನ ಚೀಟಿ ಕೇಳಿದಾಗ ನನಗೆ ನಾನೇ ಐಡೆಂಟಿಫಿಕೇಶನ್ ಎಂಬ ಉತ್ತರ ನೀಡಿದ್ದಾರೆ.  ಮತ ಚಲಾಯಿಸಲು 21 ದಾಖಲೆಗಳ ಪೈಕಿ ಯಾವುದಾದರೂ ಒಂದು ದಾಖಲೆ ನೀಡುವುದು ಮತದಾರನ ಆದ್ಯ ಕರ್ತವ್ಯ. ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವುದೇ ದಾಖಲೆ ತೋರಿಸದೆ ಮತ ಚಲಾಯಿಸಿರುವುದರಿಂದ ಸಂವಿಧಾನ ಹಾಗೂ ಕಾನೂನು ಗಾಳಿಗೆ ತೂರಿದಂತಾಗಿದೆ.  ಎಲ್ಲರಿಗೂ ಒಂದೇ ಕಾನೂನು. ಎಲ್ಲರೂ ಸಂವಿಧಾನ ಹಾಗೂ ಕಾನೂನನ್ನು ಗೌರವಿಸುವುದು ಆದ್ಯ ಕರ್ತವ್ಯ. ಆದರೆ ಜವಾಬ್ದಾರಿಯುತ ಸ್ಥಾನದಲ್ಲಿರುವ ಸಿದ್ದರಾಮಯ್ಯರವರು ಈ ರೀತಿ ಮಾಡಿರುವುದು ಸಾರ್ವಜನಿಕ ಚರ್ಚೆಗೆ ಸಿಲುಕಿದಂತಾಗಿದೆ.

Write A Comment