ಅಂತರಾಷ್ಟ್ರೀಯ

ಅಮೆರಿಕದಲ್ಲಿಯೂ ಇದೆ ವೀರಪ್ಪನ್ ಹವಾ !!

Pinterest LinkedIn Tumblr

994New-Microsoft-Office-PowerPoint-Presentation-750x369

ದಂತ ಚೋರ ವೀರಪ್ಪನ್ ಯಾರಿಗೆ ಗೊತ್ತಿಲ್ಲ ಹೇಳಿ. ಕರ್ನಾಟಕದ  ಮೂಲೆ ಮೂಲೆಯಲ್ಲಿಯೂ ಆತ ಪ್ರಸಿದ್ದಿ. ಆದರೆ ವಿಷಯ ಇರುವುದು ಇದರಲ್ಲಲ್ಲ. ಇಂತಹ ವೀರಪ್ಪನ್ ಸತ್ತರೂ ಆತನ ಜನಪ್ರೀಯತೆ ಅಮೇರಿಕದವರೆಗೂ ಹರಡಿದೆ. ಹೀಗೆ ಅಂತೀರಾ ಈ ಸ್ಟೋರಿ ಓದಿ.

ಹೌದು. ತನ್ನ ಚೋರತನದಿಂದ ಕುಖ್ಯಾತಿಯಾಗಿದ್ದ ವೀರಪ್ಪನ್ ಮೀಸೆಯಿಂದಲೂ ಸಾಕಷ್ಟು ಖ್ಯಾತಿ ಗಳಿಸಿದ್ದ. ಈತನ ಮೀಸೆ ಇದೀಗ ಅಮೇರಿಕದಲ್ಲಿಯೂ ಸದ್ದು ಮಾಡುತ್ತಿದ್ದು ಇಲ್ಲಿನ ಮೀಸೆಯ ವ್ಯಾಕ್ಸ್ ಮಾರುವ ಕಂಪನಿಯ ಬಾಟಲುಗಳಲ್ಲಿ ವೀರಪ್ಪನ್ ಫೋಟೋ ಪ್ರಿಂಟ್ ಮಾಡಲಾಗಿದ್ದಲ್ಲದೇ ಅದಕ್ಕೆ ವೀರಪ್ಪನ್ ಹೆಸರನ್ನೇ ಇಡಲಾಗಿದೆ.

ಅಮೆರಿಕದ ಲಶ್ ಕಾಸ್ಮೆಟಿಕ್ಸ್ ಎಂಬ ಕಂಪನಿಗೆ ಈ ಐಡಿಯಾ ಹೀಗೆ ಬಂತೋ ಗೊತ್ತಿಲ್ಲ. ಆದರೆ ಕಂಪನಿ ಮಾತ್ರ  “ವೀರಪ್ಪನ್ ವ್ಯಾಕ್ಸ್’ನ ಮರದ ಪರಿಮಳವು ನಿಮ್ಮ ತಲೆಗೆ ಆರಾಮ ಒದಗಿಸುತ್ತದೆ ಎಂದು ಹೇಳಿಕೊಳ್ಳುತ್ತಿದ್ದು ಮಾರ್ಕೆಟ್ ನಲ್ಲಿ ಭಾರೀ ಪ್ರಮಾಣದಲ್ಲಿ ಮಾರಾಟವಾಗುತ್ತಿದೆ. ಅಷ್ಟೇ ಅಲ್ಲ, ಮೀಸೆಯನ್ನು ಹುರಿಗೊಳಿಸಿ ಹದವಾಗಿ  ಕೂರಿಸಲು ಬಳಸುವ ಈ ವ್ಯಾಕ್ಸ್ ಜತೆಗೆ ಈ ಕಂಪನಿಯ ಹೊಸ ಗೊರಿಲ್ಲಾ ಎಂಬ ಪರ್ಫ್ಯೂಮ್’ನಲ್ಲೂ ವೀರಪ್ಪನ್ ಚಿತ್ರವನ್ನು ಬಳಸುತ್ತಿದ್ದು ಇದು ನೂರು ಪ್ರತಿಶತ ಶಾಖಾಹಾರಿ, ನ್ಯಾಯಯುತ ಬೆಲೆ ಎಂದು ಕಂಪನಿ ಹೇಳಿಕೊಂಡಿದೆ.

ಇನ್ನು ಈ ವ್ಯಾಕ್ಸ್ ಬಾಟಲ್ ನ ಬೆಲೆ 16 ಡಾಲರ್(ಸುಮಾರು 1 ಸಾವಿರ ರೂಪಾಯಿ) ಇದ್ದು ವೀರಪ್ಪನ್ ಚಿತ್ರ ಬಳಸಿಕೊಂಡ ಈ ಕಂಪನಿ ಖ್ಯಾತಿ ಗಳಿಸಿತ್ತೋ ಅಥವಾ ಬಾಗಿಲು ಹಾಕುತ್ತೋ ಎಂಬುದು ಮಾತ್ರ ಸದ್ಯಕ್ಕಿರುವ ಪ್ರಶ್ನೆ .

Write A Comment