ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಮಗ ನಿಖಿಲ್ ಗೌಡ ಹೀರೋ ಆಗುತ್ತಿರುವ ಸುದ್ದಿ ಬಂದ ಹಿಂದೆಯೇ, ನಿಖಿಲ್‍ಗೆ ಕಂಕಣ ಬಲ ಕೂಡಿ ಬರುತ್ತಿರುವ ಸುದ್ದಿಯೂ ಬಂದಿದೆ.
ನಿಖಿಲ್ ಮುಂದಿನ ವರ್ಷ ಮದುವೆಯಾಗುವ ಸಾಧ್ಯತೆ ಇದೆಯಂತೆ. ಅವರನ್ನು ಕೈಹಿಡಿಯುತ್ತಿರುವುದು ಯಾರು ಗೊತ್ತಾ, ನಿರ್ಮಾಪಕ ಕೆ.ಸಿ.ಎನ್. ಮೋಹನ್ ಅವರ ಮಗಳು ಸ್ವಾತಿ.
ಹೌದು, ನಿಖಿಲ್ ಮತ್ತು ಸ್ವಾತಿ ಮುಂದಿನ ವರ್ಷ ಮದುವೆಯಾಗುವ ಸಾಧ್ಯತೆ ಇದೆ. ಈಗಾಗಲೇ ಎರಡೂ ಕುಟುಂಬದವರು ಈ ಕುರಿತು ಒಂದು ಸುತ್ತಿನ ಮಾತುಕತೆಯಾಡಿದ್ದಾರೆ. ಈಗಾಗಲೇ ನಿಖಿಲ್ ತಾತ ಎಚ್.ಡಿ. ದೇವೇಗೌಡರು ಸಹ ಒಪ್ಪಿದ್ದಾರಂತೆ. ಇನ್ನು ಈ ಮಾತುಕತೆ ಮುಂದಿನ ಹಂತಕ್ಕೆ ಹೋಗಬೇಕು. ಈ ವಾರದಲ್ಲಿ ಎರಡೂ ಕುಟುಂಬದವರು ಕೂತು ಮಾತನಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಒಂದು ಕಡೆ ನಿಖಿಲ್ ಹೀರೋ ಆಗುವುದಕ್ಕೆ ಸಿದ್ಧತೆ ನಡೆಸಿದ್ದರೆ, ಇನ್ನೊಂದು ಕಡೆ ಮೋಹನ್ ಮತ್ತು ಪೂರ್ಣಿಮಾ ಮೋಹನ್ ಅವರ ಮಗಳು ಸ್ವಾತಿ ಎಂ.ಐ.ಟಿ ಬಿರ್ಲಾದಲ್ಲಿ ಎಂ.ಬಿ.ಎ ಮುಗಿಸಿದ್ದಾರೆ. ಇಬ್ಬರಿಗೂ ಸ್ನೇಹವಿದ್ದು, ಅದು ಮದುವೆಯ ಹಂತಕ್ಕೆ ಬಂದು ನಿಂತಿದೆ ಎನ್ನುತ್ತವೆ ಮೂಲಗಳು.