ಕರ್ನಾಟಕ

ರವಿಶಂಕರ್ ಗುರೂಜಿ ಅವರಿಂದ ಕೆರೆ ಒತ್ತುವರಿ: ಹಿರೇಮಠ್ ಆರೋಪ

Pinterest LinkedIn Tumblr

ravishankar

ಬೆಂಗಳೂರು: ನಗರದ ಬಾಗಮನೆ ಟೆಕ್ ಪಾರ್ಕ್ ಬಳಿಯಿರುವಂತಹ ಭೈರಸಂದ್ರ ಕೆರೆಯ ಆರು ಎಕರೆ ಜಾಗವನ್ನಾ ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಮುಖ್ಯಸ್ಥ ಶ್ರೀ ರವಿಶಂಕರ್ ಒತ್ತುವರಿ ಮಾಡಿದ್ದಾರೆ ಎಂದು ಸಮಾಜ ಪರಿವರ್ತನ ಸಮುದಾಯ ಮುಖ್ಯಸ್ಥ ಹಾಗೂ ಟ್ರಾನ್ಸ್ಪ ಪರೆನ್ಸಿ ಇಂಟರ್ ನ್ಯಾಷನಲ್ ಇಂಡಿ(ಕರ್ನಾಟಕ ಸ್ಟೇಟ್ ಚಾಪ್ಟರ್) ಸಂಸ್ಥೆ ಉಪಾಧ್ಯಕ್ಷ ಎಸ್ ಆರ್ ಹಿರೇಮಠ್ ಆರೋಪಿಸಿದ್ದಾರೆ.

ಈ ಕೆರೆ ಒಟ್ಟು 12 ಎಕರೆ ವಿಸ್ತೀರ್ಣ ಹೊಂದಿದ್ದು, 6 ಎಕರೆಯನ್ನು ರವಿಶಂಕರ್ ಅವರು ಒತ್ತುವರಿ ಮಾಡಿದ್ದಾರೆ. ಆದರೆ ಸರ್ಕಾರ ಈ ಸಂಬಂಧ ಯಾವುದೇ ಕ್ರಮಗೊಳ್ಳುತ್ತಿಲ್ಲ. ಇದರಲ್ಲಿ ಅಧಿಕಾರಿಗಳು ಕೂಡ ಶಾಮಿಲಾಗಿದ್ದಾರೆ ಎಂದು ದೂರಿದ್ದಾರೆ.

ಕೆರೆ ಒತ್ತುವರಿ ಮಾಡುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಹಿರೇಮಠ್, ಮನೆಯೊಡೆಯುವ ಮೂಲಕ ರಾಜ್ಯ ಸರ್ಕಾರದಿಂದ ಮಾನವ ಹಕ್ಕು ಉಲ್ಲಂಘನೆಯಾಗುತ್ತಿದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Write A Comment