ಕರ್ನಾಟಕ

ಈಜಲು ಹೋದ ಮೂವರು ಕೆರೆಯಲ್ಲಿ ಮುಳುಗಿ ಸಾವು

Pinterest LinkedIn Tumblr

3-Killed-in--Wimming

ಕುಣಿಗಲ್, ಮಾ.29- ಈಜಲು ಹೋಗಿದ್ದ ಮೂವರು ಸಹೋದರರು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪಟ್ಟಣದ ಮಹಮ್ಮದ್ ಏಜಾಸ್ ಅವರ ಮಕ್ಕಳಾದ ಸಲ್ಮಾನ್(12), ತೋಮಿದ್(10) ಹಾಗೂ ಇವರ ದೊಡ್ಡಮ್ಮನ ಮಗ ತುಮಕೂರಿನ ಗೂಡ್‌ಶೆಡ್ ಕಾಲೋನಿಯ ರಾಯಲ್(17) ಮೃತಪಟ್ಟ ದುರ್ದೈವಿಗಳು. ರಾಯಲ್ ಪಿಯುಸಿ ಪರೀಕ್ಷೆ ಮುಗಿಸಿ ನಿನ್ನೆ ಪಟ್ಟಣದ ಕೋಟೆ ಪ್ರದೇಶದಲ್ಲಿರುವ ತನ್ನ ಚಿಕ್ಕಮ್ಮನ ಮನೆಗೆ ಬಂದಿದ್ದ ನಿನ್ನೆ 4.30ರಲ್ಲಿ ತನ್ನ ಚಿಕ್ಕಮ್ಮನ ಮಕ್ಕಳಾದ ಸಲ್ಮಾನ್ ಹಾಗೂ ತೊಮಿದ್‌ನನ್ನು ಕರೆದುಕೊಂಡು

ಸಮೀಪದ ಕೆರೆಗೆ ಈಜಲು ಹೋಗಿದ್ದಾನೆ. ಕೆರೆಯ ಆಳದ ಅರಿವಿಲ್ಲದ ಮೂವರು ನೀರಿನಲ್ಲಿ ಸಿಲುಕಿ ಮೃತಪಟ್ಟಿದ್ದಾರೆ. ರಾತ್ರಿ ಬಹಳ ಹೊತ್ತಾದರೂ ಮಕ್ಕಳು ಮನೆಗೆ ಬಾರದೆ ಇದ್ದಾಗ ಗಾಬರಿಗೊಂಡ ಪೋಷಕರು ಪಟ್ಟಣದೆಲ್ಲೆಡೆ ಹುಡುಕಿದ್ದಾರೆ.
ನಂತರ ಅನುಮಾನಗೊಂಡು ಸಾರ್ವಜನಿಕರ ಸಹಾಯದೊಂದಿಗೆ ಕೋಟೆ ಪ್ರದೇಶಕ್ಕೆ ಹೊಂದಿಕೊಂಡಿರುವ ಕೆರೆಯಲ್ಲಿ ಹುಡುಕಿದ್ದಾರೆ.

ರಾತ್ರಿ 10.30ರ ವೇಳೆಗೆ ಬಾಲಕರ ದೇಹಗಳು ದೊರೆತಿವೆ. ಸ್ಥಳಕ್ಕೆ ಸಿಪಿಐ ಧರ್ಮೇಂದ್ರ, ಪಿಎಸ್‌ಐ ಹರೀಶ್ ಮತ್ತು ಸಿಬ್ಬಂದಿ ಭೇಟಿ ನೀಡಿ ಶವಗಳನ್ನು ಹೊರ ತೆಗೆಸಿದರು. ಇಂದು ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ನೀಡಲಾಯಿತು.
ವಿಷಯ ತಿಳಿದು ಪಟ್ಟಣದ ಜನತೆ  ಮೃತ ಮಕ್ಕಳ ಮನೆಗೆ ಧಾವಿಸಿ ಪೋಷಕರಿಗೆ ಸಾಂತ್ವನ ಹೇಳಿದರು. ತಂದೆ-ತಾಯಿ ರೋಧನ ಎಲ್ಲರ ಮನಕಲಕಿತು.

Write A Comment