ಕರ್ನಾಟಕ

ದೊಡ್ಡಕೊಪ್ಪಲಿನಲ್ಲಿ ರವಿ ಪುಣ್ಯತಿಥಿ; ಮುಗಿಲು ಮುಟ್ಟಿದ ತಾಯಿ ಆಕ್ರಂದನ

Pinterest LinkedIn Tumblr

Ravi-NN

ತುಮಕೂರು: ಐಎಎಸ್ ಅಧಿಕಾರಿ ಡಿ.ಕೆ.ರವಿ ಅವರ 11ನೇ ದಿನದ ಪುಣ್ಯತಿಥಿ ಅಂಗವಾಗಿ ಶುಕ್ರವಾರ ಸ್ವಗ್ರಾಮವಾದ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ದೊಡ್ಡಕೊಪ್ಪಲಿನಲ್ಲಿನ ರವಿ ಸಮಾಧಿಗೆ ಕುಟುಂಬಿಕರು ಪೂಜೆ ಸಲ್ಲಿಸಿದರು.

ರವಿ ಸಮಾಧಿಗೆ ತಾಯಿ ಗೌರಮ್ಮ, ಪತ್ನಿ ಕುಸುಮಾ, ಮಾವ ಹನುಮಂತರಾಯಪ್ಪ, ರವಿ ಅಣ್ಣ ರಮೇಶ್ ಹಾಗೂ ಸಂಬಂಧಿಕರು ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ರವಿ ತಾಯಿ ಆಕ್ರಂದನ ಮುಗಿಲು ಮುಟ್ಟಿತ್ತು. ಪತ್ನಿ ಕುಸುಮಾ ಬಿಕ್ಕಿ, ಬಿಕ್ಕಿ ಅಳುತ್ತಲೇ ಪೂಜಾ ವಿಧಿ ನೆರವೇರಿಸಿದರು. ರವಿಯನ್ನು ನೆನೆದು ಗ್ರಾಮಸ್ಥರು ಕೂಡಾ ಕಣ್ಣೀರಿಟ್ಟರು.

ರವಿ ಅವರ ಪುಣ್ಯತಿಥಿ ಹಿನ್ನೆಲೆಯಲ್ಲಿ ದೊಡ್ಡಕೊಪ್ಪಲಿನಲ್ಲಿನ ನಿವಾಸಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಓರ್ವ ಡಿವೈಎಸ್ಪಿ, ಮೂವರು ಇನ್ಸ್ ಪೆಕ್ಟರ್, 7ಎಸ್ ಐಗಳು, 13ಎಎಸ್ಐಗಳು, 75 ಪೇದೆಗಳು ಹಾಗೂ 4 ಕೆಎಸ್ ಆರ್ ಪಿ ತುಕಡಿಗಳನ್ನು ಜಿಲ್ಲಾಡಳಿತ ಭದ್ರತೆಗಾಗಿ ನಿಯೋಜಿಸಿದೆ. ಮಾರ್ಚ್ 16ರಂದು ಡಿ.ಕೆ.ರವಿ ನಿಗೂಢವಾಗಿ ಸಾವನ್ನಪ್ಪಿದ್ದರು. ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಬಿಐಗೆ ವಹಿಸಿದ್ದು, ತನಿಖೆ ಆರಂಭಗೊಳ್ಳಬೇಕಿದೆ.

Write A Comment