ಬೆಂಗಳೂರು, ಮಾ:22- ಮಕ್ಕಳಾಗಲಿಲ್ಲ ಎಂದು ಖಿನ್ನತೆಗೆ ಒಳಗಾಗಿದ್ದ ಮಹಿಳೆ ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಎಲೆಕ್ಟ್ರಾನಿಕ್ ಸಿಟಿ ಠಾಣೆ ವ್ಯಾಪ್ತಿಯಲ್ಲಿ ಇಂದು ಬೆಳಿ ನಡೆದಿದೆ. ಇನ್ಫೋಸಿಸ್‌ನಲ್ಲಿ ಭದ್ರತಾ ಮೇಲ್ವಿಚಾರಕರಾಗಿರುವ ಚನ್ನಪ್ಪ ಅವರ ಪತ್ನಿ ಪೂವಮ್ಮ (58) ಸಾವನ್ನಪ್ಪಿರುವ ಮಹಿಳೆಯಾಗಿದ್ದು, ಚಿಕ್ಕತೋಗೂರಿನ ವಾಸ್ತು ನಗರದಲ್ಲಿ ದಂಪತಿ ನೆಲೆಸಿದ್ದರು ಎಂದು ಪೋಲೀಸರು ತಿಳಿಸಿದ್ದಾರೆ. ಚನ್ನಪ್ಪ ಇಂದು ಬೆಳಿಗ್ಗೆ ಬೇಗ ಎದ್ದು ಅವರೇ ಅಡುಗೆ ಮಾಡಿದ್ದಾರೆ, ನಂತರ ಪತ್ನಿಯನ್ನು ಎಬ್ಬಿಸಿ 6.20ಕ್ಕೆ ಕೆಲಸಕ್ಕೆ ಹೋಗಿದ್ದರು.
ನಂತರ ಪೂವಮ್ಮ ಪಕ್ಕದ ಕಟ್ಟಡದ 4 ಅಂತಸ್ತಿನಿಂದ ಜಿಗಿದು ಕೆಳಗೆ ಹಾರಿದ್ದಾರೆ, ಜೋರು ಶಬ್ಧ ಕೇಳಿ ಸ್ಥಳೀಯರು ಹೊರಗೆ ಬಂದು ನೋಡಿದಾಗ ದಂಗಾಗಿದ್ದಾರೆ.
ತೀವ್ರ ಗಾಯಗೊಂಡ ಪೂವಮ್ಮ ಸ್ಥಳದಲ್ಲೇ ಸಾವನ್ನಪಿದ್ದರು. ತಕ್ಷಣ ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ ಶವವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಿದ್ದಾರೆ. ಪೂವಮ್ಮ ಕಳೆದ ಫೆ.19 ರಂದು ಆತ್ಮಹತ್ಯೆಗೆ ಪ್ರಯತ್ನಿಸಿದಾಗ ಸ್ಥಳೀಯರು ತಡೆದಿದ್ದರು ಎಂದು ತಿಳಿದುಬಂದಿದೆ.