ಬೆಂಗಳೂರು: ಇನ್ನು ಮುಂದೆ ಸಮವಸ್ತ್ರದ ಜೊತೆಗೆ ಮಕ್ಕಳಿಗೆ ‘ಶೂ ಭಾಗ್ಯ’ ಲಭಿಸಲಿದೆ. ಒಂದರಿಂದ 10ನೇ ತರಗತಿವರೆಗೆ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 54.54 ಲಕ್ಷ ಮಕ್ಕಳಿಗೆ ಒಂದು ಜೊತೆ ಶೂ, ಎರಡು ಜೊತೆ ಕಾಲುಚೀಲ ನೀಡಲಾಗುತ್ತದೆ. ಇದಕ್ಕಾಗಿ ₨ 120 ಕೋಟಿ ವೆಚ್ಚ ಮಾಡಲಾಗುತ್ತದೆ.
ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಾಲ್ಗೊಳ್ಳುವಂತೆ ಉತ್ತೇಜನ ನೀಡಲು ಪ್ರಾಯೋಗಿಕವಾಗಿ ‘ಸ್ಪರ್ಧಾಕಲಿ’ ಕಾರ್ಯಕ್ರಮ ಜಾರಿಗೊಳಿಸಲು ತೀರ್ಮಾನಿಸಲಾಗಿದೆ.
ಡಿಎಸ್‌ಇಆರ್‌ಟಿ ಮತ್ತು ಎಚ್‌ಸಿಎಲ್ ಪ್ರತಿಷ್ಠಾನದ ವತಿಯಿಂದ ಈ ಯೋಜನೆಯನ್ನು ಆರಂಭಿಸಲಾಗುತ್ತದೆ.
*ಇನ್ನೂ ಒಂದು ಸಾವಿರ ಶಾಲೆಗಳಿಗೆ ಟೆಲಿ ಶಿಕ್ಷಣ ಕಾರ್ಯಕ್ರಮ ವಿಸ್ತರಣೆ
*ಶಾಲಾ – ಕಾಲೇಜುಗಳಲ್ಲಿ ಗ್ರಂಥಾಲಯ, ಪ್ರಯೋಗಾಲಯ, ಹೊಸ ಕಟ್ಟಡ, ಹೆಚ್ಚುವರಿ ಕಟ್ಟಡ, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆಗೆ ₨ 110 ಕೋಟಿ
* ಖಾಸಗಿ ಸಹಭಾಗಿತ್ವದಲ್ಲಿ ಶಾಲಾ – ಕಾಲೇಜುಗಳಿಗೆ ಮೂಲಸೌಕರ್ಯಗಳನ್ನು ಕಲ್ಪಿಸಲು ‘ಶಾಲೆಗಾಗಿ ನಾವು – ನೀವು ಕಾರ್ಯಕ್ರಮ’ ರಚನಾತ್ಮಕವಾಗಿ ಅನುಷ್ಠಾನ
* ಶಿಕ್ಷಕರ ಶಿಕ್ಷಣ ಕಾರ್ಯಕ್ರಮದಡಿ ಡಿಎಸ್‌ಇಆರ್‌ಟಿ, ಡಯೆಟ್ ಉನ್ನತೀಕರಣ
* ಚಿಕ್ಕಬಳ್ಳಾಪುರದ ಸರ್ಕಾರಿ ಬಿಇಡಿ ಕಾಲೇಜು ಉನ್ನತೀಕರಣ
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಕರ್ನಾಟಕ ರಾಜ್ಯ ಸಂಸ್ಥೆಗೆ ₨ 5 ಕೋಟಿ ವಿಶೇಷ ಅನುದಾನ
ರಾಜ್ಯದ ವಿಶ್ವವಿದ್ಯಾಲಯಗಳಲ್ಲಿನ ಎಲ್ಲ ಕೋರ್ಸ್‌ಗಳಲ್ಲಿ ಹೊರ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳಿಗೆ ಶೇ 15ರಷ್ಟು ಸೀಟುಗಳನ್ನು ಮೀಸಲಿಡಲು ತೀರ್ಮಾನಿಸಲಾಗಿದೆ.
ಈ ನಿಟ್ಟಿನಲ್ಲಿ ಅಗತ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಹೆಚ್ಚುವರಿ ಸೀಟುಗಳನ್ನು ಮಂಜೂರು ಮಾಡಲು ಉದ್ದೇಶಿಸಲಾಗಿದೆ.
ವಿಜ್ಞಾನ ಶಿಕ್ಷಣಕ್ಕೆ ಉತ್ತೇಜನ ನೀಡಲು ವಿಜ್ಞಾನ – ಸುಜ್ಞಾನ ಯೋಜನೆಯನ್ನು ಪ್ರಕಟಿಸಲಾಗಿದೆ. ಪದವಿ ಮತ್ತು ಸ್ನಾತಕೋತ್ತರ
* ಉನ್ನತ ಶಿಕ್ಷಣಕ್ಕೆ ₨ 3896 ಕೋಟಿ ಅನುದಾನ
* ಪ್ರಾಥಮಿಕ ಮತ್ತು ಪ್ರೌಢಶಿಕ್ಷಣಕ್ಕೆ ₨ 16204 ಕೋಟಿ
* ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸುವಂತೆ ಉತ್ತೇಜಿಸಲು ಸ್ಪರ್ಧಾಕಲಿ ಕಾರ್ಯಕ್ರಮ
ಮಟ್ಟದಲ್ಲಿ ವಿಜ್ಞಾನ ಕೋರ್ಸ್‌ಗಳನ್ನು ಪ್ರಾರಂಭಿಸಿ, ಸಂಶೋಧನೆಗೆ ಉತ್ತೇಜನ ನೀಡಲು ₨ 10 ಕೋಟಿ ನೀಡಲಾಗಿದೆ.
*ಆಯ್ದ ಹಾಗೂ ಆಸಕ್ತಿಯುಳ್ಳ ವಿದ್ಯಾರ್ಥಿಗಳಿಗೆ ಉದ್ಯಮ ಸ್ಥಾಪಿಸಲು ಬ್ಯಾಂಕಿನಿಂದ ಪಡೆಯುವ ವಾರ್ಷಿಕ ₨ 10 ಲಕ್ಷದವರೆಗಿನ ಸಾಲದ ಮೇಲಿನ ಬಡ್ಡಿಯನ್ನು ಮೂರು ವರ್ಷ ಸರ್ಕಾರವೇ ಭರಿಸಲಿದೆ.
* 100 ವರ್ಷ, 75 ವರ್ಷ ಮತ್ತು
50 ವರ್ಷ ಪೂರ್ಣಗೊಳಿಸಿರುವ ಶಿಕ್ಷಣ ಸಂಸ್ಥೆಗಳಿಗೆ ಮೂಲಸೌಕರ್ಯಗಳನ್ನು ಕಲ್ಪಿಸಲು ಹಿರಿಮೆ – ಗರಿಮೆ ಯೋಜನೆಯಡಿ ₨ 10 ಕೋಟಿ ಅನುದಾನ
*ಜವಾಹರಲಾಲ್ ನೆಹರೂ ಅವರ 125ನೇ ಜನ್ಮದಿನ ಹಾಗೂ 50ನೇ ಪೂಣ್ಯತಿಥಿ ಸ್ಮರಣಾರ್ಥ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ನೆಹರೂ ಚಿಂತನ ಕೇಂದ್ರ ಸ್ಥಾಪನೆಗೆ ₨ 3 ಕೋಟಿ
*ಧಾರವಾಡ ಮತ್ತು ಕಲಬುರ್ಗಿಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವಲಯ ಕಚೇರಿ ಸ್ಥಾಪನೆ
*ಸಮುದಾಯದ ಸಹಭಾಗಿತ್ವದಲ್ಲಿ ಸರ್ಕಾರಿ ಪಾಲಿಟೆಕ್ನಿಕ್, ಕಾಲೇಜು ಮತ್ತು ವಿಶ್ವವಿದ್ಯಾಲಯದಲ್ಲಿ ‘ಸಹಭಾಗಿತ್ವ’ ಯೋಜನೆ ಪ್ರಾರಂಭ. ಸಂಗ್ರಹವಾದ ದೇಣಿಗೆಗೆ ಅನುಗುಣವಾಗಿ ಅನುದಾನ ನೀಡಲು ₨ 10 ಕೋಟಿ ಮೀಸಲು
ಪರಿಸರ ಸ್ನೇಹಿ ಶಾಲೆ
ವಿದ್ಯುತ್ ಉಳಿತಾಯಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ರಾಜ್ಯದ 300 ಶಾಲಾ – ಕಾಲೇಜುಗಳಲ್ಲಿ ಸೋಲಾರ್ ವಿದ್ಯುತ್ ಉಪಕರಣಗಳನ್ನು ಅಳವಡಿಸ
ಲಾಗುತ್ತದೆ. 100 ಹಿರಿಯ ಪ್ರಾಥಮಿಕ, 100 ಪ್ರೌಢಶಾಲೆ ಹಾಗೂ 100 ಪದವಿ ಪೂರ್ವ ಕಾಲೇಜುಗಳಿಗೆ ಸೌರಶಿಕ್ಷಣ ಕಿಟ್‌ಗಳನ್ನು ನೀಡಿ ಅವುಗಳನ್ನು ಪರಿಸರ ಸ್ನೇಹಿ (ಗ್ರೀನ್ ಪವರ್) ಶಾಲೆಗಳೆಂದು ಘೋಷಿಸಲಾಗುತ್ತದೆ.