ಕರ್ನಾಟಕ

ಶಿರಸಿ (ಉತ್ತರ ಕನ್ನಡ ಜಿಲ್ಲೆ): ಪ್ರಾಚೀನ ದೇವಾಲಯ ಪತ್ತೆ

Pinterest LinkedIn Tumblr

te

ಶಿರಸಿ (ಉತ್ತರ ಕನ್ನಡ ಜಿಲ್ಲೆ): ತಾಲ್ಲೂಕಿನ ಹತ್ತರಗಿ ಹಾವಳಿ­ಮನೆ­ಯಲ್ಲಿ ಪುರಾತನ ಶಿಲಾಮಯ ದೇವಾಲಯ ಪತ್ತೆ­ಯಾಗಿದೆ. ‘12ನೇ ಶತಮಾನದ ದೇವಾಲಯ ಇದಾಗಿರ­ಬಹುದೆಂದು ಅಂದಾಜಿ­ಸಲಾ­ಗಿದೆ. ಹಾನಗಲ್ ಕದಂಬರು ನಿರ್ಮಿಸಿ­ದ್ದಾರೆ ಎನ್ನಲಾದ ಈ ದೇವಾಲಯ, ಸುಂದರ ಕೆತ್ತನೆಯ 16 ಕಂಬಗಳನ್ನು ಒಳಗೊಂಡಿದೆ. ದೇವಾ­ಲಯದಲ್ಲಿ ಸಭಾ ಮಂಟಪ, ನವರಂಗ, ಗರ್ಭಗುಡಿ ಇದೆ.

ಗರ್ಭಗುಡಿಗೆ ಪ್ರದಕ್ಷಿಣಾ ಪಥವಿದೆ. ದೇವಾಲಯದ ಒಳಗೆ ಸಪ್ತ ಮಾತೃಕೆ­ಯರ ಮೂರ್ತಿ, ಮಹಿಷಾಸುರ ಮರ್ದಿನಿ, ಗಣಪತಿ ಹಾಗೂ ನಾರಾಯಣ ವಿಗ್ರಹಗಳಿವೆ. ಪ್ರಾಚೀನ ಶಿವಲಿಂಗ ಸಹ ಇದೆ’ ಎಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಇತಿಹಾಸ ಸಂಶೋಧಕ ಲಕ್ಷ್ಮೀಶ ಹೆಗಡೆ ಸೋಂದಾ ತಿಳಿಸಿದ್ದಾರೆ.

‘ದೇವಾಲಯ ಎದುರು ಸುಮಾರು 17ನೇ ಶತಮಾನದ ಶಾಸನವೊಂದಿದೆ. ಸುಮಾರು 300 ವರ್ಷಗಳ ಹಿಂದೆ ಈ ದೇವಾಲಯ ಜೀರ್ಣೋದ್ಧಾರಗೊಂಡ ಕುರುಹುಗಳು ಮೇಲ್ನೋಟಕ್ಕೆ ಕಾಣ­ಸಿಗುತ್ತವೆ’ ಎಂದು ಅವರು ಹೇಳಿದ್ದಾರೆ. ಕ್ಷೇತ್ರಾನ್ವೇಷಣೆಯ ಸಂದರ್ಭದಲ್ಲಿ ಸ್ಥಳೀಯರಾದ ಜಿ.ಎನ್‌. ಹೆಗಡೆ ಹಾವಳಿಮನೆ, ಆನಂದ ಹೆಗಡೆ ಇದ್ದರು. ಬಹುಭಾಗ ಭಗ್ನಗೊಂಡ ದೇವಾಲಯದ ಜೀರ್ಣೋದ್ಧಾರಕ್ಕೆ ಸ್ಥಳೀಯರು ಮುಂದಾಗಿದ್ದಾರೆ.

Write A Comment