ಕರ್ನಾಟಕ

ಗಗನಕ್ಕೆ ಚಿಮ್ಮಲಿದೆ ಬೆಂಗಳೂರು ವಿದ್ಯಾರ್ಥಿ ಉಪಗ್ರಹ!

Pinterest LinkedIn Tumblr

c4_0

ಬೆಂಗಳೂರು: ನಗರದ ಪಿಇಎಸ್‌ ವಿಶ್ವವಿ ದ್ಯಾಲಯದ ವಿದ್ಯಾರ್ಥಿಗಳು ಪುಟಾಣಿ ಉಪಗ್ರಹವೊಂದನ್ನು ಉಡಾವಣೆ ಮಾಡಲು ಸಜ್ಜಾಗಿದ್ದಾರೆ. ಅವರಿಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಹಾಗೂ ಭಾರತೀಯ ಎಂಜಿನಿಯರ್‌ಗಳ ಸಂಸ್ಥೆಗಳು ಅಗತ್ಯ ಸಹಕಾರ ನೀಡಲು ಮುಂದೆ ಬಂದಿವೆ.

ಪಿಇಎಸ್‌ ವಿಶ್ವವಿದ್ಯಾಲಯದ ವಿದ್ಯಾ ರ್ಥಿಗಳು ತಮ್ಮ ಯೋಜನೆಗೆ ‘ಪಿಸ್ಯಾಟ್‌’ ಎಂದು ನಾಮಕರಣ ಮಾಡಿದ್ದು, ಬಾಹ್ಯಾಕಾಶ ತಂತ್ರಜ್ಞಾನವನ್ನು ಪರಿಚಯ ಮಾಡಿಕೊಳ್ಳಲು ಉತ್ಸುಕರಾ ಗಿದ್ದಾರೆ. ಸುಮಾರು 5 ಕೆ.ಜಿ ಭಾರದ ಈ ಕಡಿಮೆ ವೆಚ್ಚದ ಉಪಗ್ರಹ ಕ್ಯಾಮೆರಾ, ಕಂಪ್ಯೂಟರ್‌, ಸಂವಹನ ಹಾಗೂ ನಿಯಂತ್ರಣ ವ್ಯವಸ್ಥೆಯನ್ನು ಹೊಂದಿದೆ.

ಉಪಗ್ರಹದ ಕಾರ್ಯಾಚರಣೆಗೆ ಅಗತ್ಯವಾದ ಸಾಫ್ಟ್‌ವೇರ್‌ ವ್ಯವಸ್ಥೆ ಮಾಡಿಕೊಳ್ಳಲಾಗಿದ್ದು, ನಿಯಂತ್ರಣ ಕೇಂದ್ರ ತೆರೆಯಲು ಸಿದ್ಧತೆ ಮಾಡಿಕೊ ಳ್ಳಲಾಗುತ್ತಿದೆ. ಭೂಮಿಯ ಮೇಲ್ಮೈ ನಿಂದ 630 ಕಿ.ಮೀ. ದೂರದಲ್ಲಿ ಈ ಉಪಗ್ರಹ ಸುತ್ತಲಿದೆ. ಉಪಗ್ರಹದ ಪರೀಕ್ಷೆಗೆ ಇಸ್ರೊ ಸೌಲಭ್ಯವನ್ನು ಬಳಕೆ ಮಾಡಿಕೊಳ್ಳಲು 2014ರ ಜುಲೈನಲ್ಲೇ ಒಪ್ಪಂದ ಮಾಡಿಕೊಳ್ಳಲಾಗಿದೆ.

ಉಪಗ್ರಹದ ಉಡಾವಣೆಗೆ ಮಾಡಿ ಕೊಳ್ಳಲಾದ ಸಿದ್ಧತೆಗಳನ್ನು ಡಾ.ಪಿ.ಆರ್‌. ವಾಸಗಮ್‌ ನೇತೃತ್ವದ ತಜ್ಞರ ತಂಡ ಎರಡು ದಿನಗಳ ಹಿಂದೆಯಷ್ಟೇ ಪರಿಶೀ ಲಿಸಿದೆ. ತಮಿಳುನಾಡಿನ ಸೋನಾ ತಾಂತ್ರಿಕ ಕಾಲೇಜು, ವೆಲ್‌ಟೆಕ್‌ ವಿಶ್ವವಿ ದ್ಯಾಲಯ, ಎಸ್‌ಕೆಆರ್‌ ಎಂಜಿನಿ ಯರಿಂಗ್‌ ಕಾಲೇಜು ಹಾಗೂ ಕೇರಳದ ನೆಹರೂ ತಾಂತ್ರಿಕ ಕಾಲೇಜು ಯೋಜನೆ ಯಲ್ಲಿ ಸಹಭಾಗಿತ್ವ ವಹಿಸಿಕೊಂಡಿವೆ.

ಪಿಸ್ಯಾಟ್‌ ಉಪಗ್ರಹವನ್ನು ವಿವಿಧ ಪರೀಕ್ಷೆಗಳಿಗೆ ಒಳಪಡಿಸಲಾಗುತ್ತಿದ್ದು, ಅದರಲ್ಲಿ ಅರ್ಹತೆ ಗಿಟ್ಟಿಸಿದ ಬಳಿಕ ಉಡಾವಣೆ ವಾಹನದ ಕುರಿತು ಯೋಚಿ ಸಲಾ ಗುತ್ತದೆ ಎಂದು ಯೋಜನೆಯಲ್ಲಿ ತೊಡಗಿಸಿಕೊಂಡ ಪ್ರಾಧ್ಯಾಪಕರು ಹೇಳುತ್ತಾರೆ.

Write A Comment