ಕರ್ನಾಟಕ

ಚನ್ನಗಿರಿ ಬಳಿಯ ಸೂಳೆಕೆರೆಗೆ ಬಿದ್ದ ಖಾಸಗಿ ಬಸ್‌; ಮೂವರ ಸಾವು, 35 ಜನರಿಗೆ ಗಾಯ

Pinterest LinkedIn Tumblr

bus

ಚನ್ನಗಿರಿ: ದಾವಣಗೆರೆಯಿಂದ ಭದ್ರಾ ವತಿಗೆ ಕಡೆಗೆ ಹೋಗುತ್ತಿದ್ದ ಖಾಸಗಿ ಬಸ್‌­ವೊಂದು ತಾಲ್ಲೂಕಿನ ಕೆರೆಬಿಳಚಿ ಬಳಿ ಸೂಳೆಕೆರೆಗೆ ಉರುಳಿದ ಪರಿಣಾಮ ಇಬ್ಬರು ಮೃತಪಟ್ಟು, 35 ಕ್ಕಿಂತ ಹೆಚ್ಚು ಪ್ರಯಾಣಿಕರು ಗಾಯಗೊಂಡ ಘಟನೆ ಭಾನುವಾರ ಸಂಜೆ 4.30ರ ಸುಮಾರಿಗೆ ನಡೆದಿದೆ.

ರಾಣೆಬೆನ್ನೂರಿನ ಮಹಾದೇವ (65) ,ಚನ್ನಗಿರಿ ತಾಲ್ಲೂಕು ದಿಗ್ಗೇ ನಹಳ್ಳಿ ಗ್ರಾಮದ ವಿಜಯಮ್ಮ (30) ಮೃತಪಟ್ಟವರು. ಸುಮಾರು 40 ವರ್ಷ ವಯಸ್ಸಿನ ಪುರುಷನ ಶವ ತಡವಾಗಿ ಪತ್ತೆಯಾಗಿದ್ದು ಗುರುತು ಸಿಕಿಲ್ಲ. ವೇಗವಾಗಿ ಬಂದ ಬಸ್ ಚಾಲಕನ ಅಜಾಗೂರಕತೆಯಿಂದ ನೇರವಾಗಿ ಕೆರೆಗೆ ಉರುಳಿದೆ.

bus (1)

‘ಬಸ್‌ನಲ್ಲಿ ಸುಮಾರು 50 ರಿಂದ 60 ಪ್ರಯಾ ಣಿಕರು ಇದ್ದರು. ಕೆರೆಗೆ ಬಸ್‌ ಬಿದ್ದ ನಂತರ ಕೈ ಮುರಿದು ಹೋಗಿದ್ದರೂ ಪ್ರಾಣವನ್ನು ಉಳಿಸಿಕೊಳ್ಳಬೇಕೆಂಬ ಉದ್ದೇಶದಿಂದ ನೋವಿನಲ್ಲಿಯೇ ಈಜಿ ಕೊಂಡು ಬಂದು ದಡ ಸೇರಿದೆ’ ಎಂದು ಬಸ್‌ನಲ್ಲಿ ಪ್ರಯಾಣಿ ಸುತ್ತಿದ್ದ ಚನ್ನಗಿರಿ ತಾಲ್ಲೂಕು ಆಗರ ಬನ್ನಿಹಟ್ಟಿ ಗ್ರಾಮದ ಶಿವಕುಮಾರ್‌ ತಿಳಿಸಿದರು.

ಗಾಯಗೊಂಡವರಿಗೆ ಸಮೀಪದ ಕೆರೆಬಿಳಚಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಜಿಲ್ಲಾ ಪೊಲೀಸರು, ಅಗ್ನಿಶಾಮಕ ತಂಡ ಕೆರೆಯಿಂದ ಬಸ್ ಎತ್ತುವ ಕಾರ್ಯಾಚರಣೆಯಲ್ಲಿ ತೊಡಗಿದೆ. ರಾತ್ರಿಯಾಗಿರುವುದರಿಂದ ಕಾರ್ಯಾ ಚರಣೆಗೆ ಅಡ್ಡಿ ಉಂಟಾಗಿದೆ ಎಂದು ಸ್ಥಳಕ್ಕೆ ಭೇಟಿ ನೀಡಿದ ಡಿವೈಎಸ್‌ಪಿ ನೇಮೇಗೌಡ ತಿಳಿಸಿದರು.

ಏಷ್ಯದಲ್ಲೇ ಎರಡನೇ ಅತಿ ದೊಡ್ಡ ದಾದ ಸೂಳೆಕೆರೆಗೆ ತಡೆ ಗೋಡೆ ನಿರ್ಮಿ ಸಬೇಕೆಂಬ ಒತ್ತಾಯ ಹಲವಾರು ವರ್ಷಗಳಿಂದ ಕೇಳಿಬಂ ದಿದ್ದರೂ ಈವ ರೆಗೆ ಸರ್ಕಾರ ಸ್ಪಂದಿಸಿಲ್ಲ ಎಂಬ ಆಕ್ರೋ ಶದ ಮಾತು ಸ್ಥಳೀಯರಿಂದ ಕೇಳಿಬಂತು.

Write A Comment