ಕರ್ನಾಟಕ

ಡ್ಯಾನ್ಸ್‌ಕ್ಲಬ್ ಮೇಲೆ ದಾಳಿ : 29 ಮಂದಿ ಅರೆಸ್ಟ್

Pinterest LinkedIn Tumblr

Dance-club

ಬೆಂಗಳೂರು, ಡಿ.7: ಡ್ಯಾನ್ಸ್‌ಕ್ಲಬ್ ಮೇಲೆ ನಿನ್ನೆ ರಾತ್ರಿ ಕೋರಮಂಗಲ ಪೊಲೀಸರು ದಾಳಿ ನಡೆಸಿ 25 ಮಂದಿ ಯುವತಿಯರನ್ನು ರಕ್ಷಣೆ ಮಾಡಿ 29 ಮಂದಿಯನ್ನು ಬಂಧಿಸಿದ್ದಾರೆ. ಕೋರಮಂಗಲದ 80 ಅಡಿ ರಸ್ತೆಯ ಕ್ಲಬ್-99 ಮೇಲೆ ನಿನ್ನೆ ದಾಳಿ ನಡೆಸಲಾಗಿದೆ.

ಉತ್ತರ ಭಾರತದಿಂದ ಕರೆತರಲಾಗಿದ್ದ ಯುವತಿಯರು ಈ ಕ್ಲಬ್‌ನಲ್ಲಿ ಪರಿಚಾರಕಿಯರಾಗಿ ಕೆಲಸ ಮಾಡುತ್ತಿದ್ದರು. ಆದರೆ ಅನಧಿಕೃತವಾಗಿ ಯುವತಿಯರಿಂದ ಗ್ರಾಹಕರ ಮುಂದೆ ನೃತ್ಯ ಮಾಡಿಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ನಿನ್ನೆ ರಾತ್ರಿ ಪೊಲೀಸರು ದಾಳಿ ಮಾಡಿ 21 ಮಂದಿ ಗ್ರಾಹಕರು, 8 ಮಂದಿ ಕ್ಲಬ್ ಸಿಬ್ಬಂದಿಗಳನ್ನು ಬಂಧಿಸಿದ್ದಾರೆ. ಸೆಕ್ಷನ್ 188, 370(ಎ), 294 ಮತ್ತು ಅಬಕಾರಿ ಕಾಯ್ದೆ 109(35)ರಡಿ ಪ್ರಕರಣ ದಾಖಲಿಸಲಾಗಿದೆ ಎಂದು ಆಗ್ನೇಯ ವಲಯದ ಡಿಸಿಪಿ ರೋಹಿಣಿ ಕಟೋಚ್ ತಿಳಿಸಿದ್ದಾರೆ.

Write A Comment