ಕರ್ನಾಟಕ

ಪ್ರಾಮಾಣಿಕತೆಯನ್ನು ಮೆರೆದ ಸೆಕ್ಯೂರಿಟಿ; ಲಂಚ್ ಬಾಕ್ಸ್‌ನಲ್ಲಿ ಚಿನ್ನ ಕಂಡರೂ ಆಸೆ ಪಡದ ಹಿಂತಿರುಗಿಸಿದ ಕೆ.ಕೆ ದಾಸನ್

Pinterest LinkedIn Tumblr

sec

ಕಾಕನಾಡ: ಚಿನ್ನ ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ, ಅದೂ ದಾರಿಯಲ್ಲಿ ಸಿಕ್ಕ ಚಿನ್ನ ಅಂದ್ರೆ ಹಿಂದೆ ಮುಂದೆ ನೋಡದೆ, ಅನಾಮತ್ ಜೇಬಿಗೆ ಇಳಿಸಿಕೊಳ್ಳವ ಇಂತಹ ಕಾಲದಲ್ಲೂ ಸೆಕ್ಯೂರಿಟಿಯೊಬ್ಬ ಪ್ರಾಮಾಣಿಕತೆಯನ್ನು ಮೆರೆದಿದ್ದಾರೆ.

ಈ ಕಾಲದಲ್ಲೂ ಚಿನ್ನ ಎಂದು ತಿಳಿದರೂ, ಅದನ್ನು ತೆಗೆದುಕೊಳ್ಳದೇ ಸೇರಬೇಕಾದವರಿಗೆ ತಲುಪಿಸಿದ ಪ್ರಾಮಾಣಿಕ ಸೆಕ್ಯೂರಿಟಿ ಕೆ.ಕೆ ದಾಸನ್. ಸಿವಿಲ್ ಸ್ಟೇಷನ್‌ನಲ್ಲಿ ಸೆಕ್ಯೂರಿಟಿಯಾಗಿ ಕಾರ್ಯನಿರ್ವಹಿಸುತ್ತಿರುವ ದಾಸನ್ ಟೇಬಲ್ ಮೇಲೆ ಯಾರೋ ಊಟದ ಡಬ್ಬಿ ಇರಿಸಿ ಹೋಗಿದ್ದಾರೆ. ಅದು ಯಾರದು ಎಂದು ಗೊತ್ತಿಲ್ಲದೆ, ಯಾರೋ ಊಟದ ಡಬ್ಬಿ ಇಲ್ಲಿ ಬಿಟ್ಟುಹೋಗಿದ್ದಾರೆ ಎಂದು ಅಂದುಕೊಂಡರಂತೆ. ಊಟದ ಡಬ್ಬಿ ತೆಗೆದುಕೊಳ್ಳಲು ಯಾರು ಬರದ ಕಾರಣ, ದಾಸನ್ ಅವರೇ ಊಟದ ಡಬ್ಬಿ ತೆರೆದು ನೋಡಿದ್ದಾರೆ. ಆದರೆ, ಡಬ್ಬಿಯಲ್ಲಿದ್ದದ್ದು, ಊಟದ ಜೊತೆಗೆ ಚಿನ್ನದ ಆಭರಣಗಳು.

ಲಂಚ್ ಬಾಕ್ಸ್‌ನಲ್ಲಿದದ್ದು, 3 ಲಕ್ಷ ಮೌಲ್ಯದ ಚಿನ್ನದ ಆಭರಣಗಳು. ಇದನ್ನು ಕಂಡು ಗಾಬರಿಗೊಂಡ ದಾಸನ್, ಕೂಡಲೇ ಅಧಿಕಾರಿ ಎಡಿಎಂ ಬಿ ರಾಮಚಂದ್ರನ್ ಅವರ ಚೇಂಬರಿಗೆ ಧಾವಿಸಿ, ಚಿನ್ನದ ಆಭರಣಗಳಿದ್ದ ಆ ಊಟದ ಡಬ್ಬಿಯನ್ನು ನೀಡಿದ್ದಾರೆ.

ಈ ಊಟದ ಡಬ್ಬಿ ಯಾರದೆಂದು ವಿಚಾರಿಸಿದ ರಾಮಚಂದ್ರ ಅವರು ಕಾರ್ಮಿಕರ ಅಧಿಕಾರಿಗಳಿಗೆ ಮಾಹಿತಿಯನ್ನು ಮುಟ್ಟಿಸಿದ್ದಾರೆ. ತನಿಖೆ ನಡೆಸಿದಾಗ, ಊಟದ ಡಬ್ಬಿ ಓರ್ವ ಮಹಿಳೆಯದ್ದಾಗಿದ್ದು, ಆಕೆಯ ಸಿವಿಲ್ ಸ್ಟೆಷನ್‌ನಲ್ಲಿ ನೌಕರಿ ಮಾಡುತ್ತಿದ್ದಾರೆ. ಕಳ್ಳರ ಭಯದಿಂದ ಆಕೆ ಪ್ರತಿನಿತ್ಯ ಊಟದ ಡಬ್ಬಿಯಲ್ಲಿ ಚಿನ್ನ ಆಭರಣಗಳನಿಟ್ಟು ಕಚೇರಿಗೆ ಬರುತ್ತಿದ್ದರಂತೆ.

ಆಟೋರಿಕ್ಷಾದಲ್ಲಿ ಸಿವಿಲ್ ಸ್ಟೇಷನ್ ಕಚೇರಿಗೆ ಬಂದ ಆ ಮಹಿಳೆ ಊಟದ ಡಬ್ಬಿಯನ್ನು ಆಟೋದಲ್ಲೇ ಮರೆತುಹೋಗಿದ್ದಾರೆ. ಮತ್ತೊಬ್ಬ ಪ್ಯಾಸೆಂಜರ್ ಅದನ್ನು ನೋಡಿ, ಸೆಕ್ಯೂರಿಟಿ ಟೇಬಲ್ ಮೇಲೆ ಊಟದ ಡಬ್ಬಿ ಇರಿಸಿ ಹೋಗಿದ್ದಾರೆ. ಆ ಮಹಿಳೆಗೆ ಆ ವಡವೆಗಳನ್ನು ಹಿಂತಿರುಗಿಸಲಾಗಿದ್ದು, ಬ್ಯಾಂಕ್ ಲ್ಯಾಕರ್‌ನಲ್ಲಿ ಒಡವೆಗಳನ್ನು ಇರಿಸುವಂತೆ ತಿಳಿಸಲಾಗಿದೆ ಎಂದು ಬಿ ರಾಮಚಂದ್ರನ್ ತಿಳಿಸಿದ್ದಾರೆ. ಅಂತೂ 3 ಲಕ್ಷ ಮೌಲ್ಯದ ಒಡವೆಗಳನ್ನು ಕಂಡು ಆಸೆ ಪಡದೆ, ಅದನ್ನು ಸೇರಿಸಬೇಕಾದ ಜಾಗಕ್ಕೆ ತಲುಪಿಸಿ ಸೆಕ್ಯೂರಿಟಿ ದಾಸನ್ ತನ್ನ ಪ್ರಾಮಾಣಿಕತೆಯನ್ನು ಮೆರೆದಿದ್ದಾರೆ.

Write A Comment