ಕರ್ನಾಟಕ

ಸಮಾಜ ವಿರೋಧಿ ತೀರ್ಮಾನಗಳನ್ನು ವಿರೋಧಿಸುತ್ತಿದ್ದ ಅನಂತಮೂರ್ತಿ: ಶೃದ್ಧಾಂಜಲಿ ಸಭೆಯಲ್ಲಿ ಗಿರೀಶ್ ಕಾರ್ನಾಡ್

Pinterest LinkedIn Tumblr

Girish Karnad

ಬೆಂಗಳೂರು, ಸೆ.27: ಸಮಾಜಕ್ಕೆ ಕಂಟಕವಾಗುವಂತಹ ನಿರ್ಧಾರ ಗಳನ್ನು ಕೈಗೊಂಡಾಗ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಯು.ಆರ್.ಅನಂತಮೂರ್ತಿ ಅವರು ವಿರೋಧಿಸುತ್ತಿದ್ದರು ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ್ ಹೇಳಿದ್ದಾರೆ.

ಶನಿವಾರ ಮಿಷನ್ ರಸ್ತೆಯ ಎಸ್‌ಸಿಎಂ ಹೌಸ್‌ನಲ್ಲಿ ರಾಜ್ಯ ಕೋಮು ಸೌಹಾರ್ದ ವೇದಿಕೆ ಆಯೋಜಿಸಿದ್ದ ಯು.ಆರ್.ಅನಂತ ಮೂರ್ತಿಯವರಿಗೆ ಶ್ರದ್ಧಾಂಜಲಿ: ಮಾತು ಸೋಲಬಾರದು ಸಂವಾದ ಗೋಷ್ಠಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸಮಾಜಕ್ಕೆ ಅನುಕೂಲವಾಗುವ ನಿರ್ಧಾರಗಳಿದ್ದರೆ ಅವುಗಳಿಗೆ ತಕ್ಷಣ ಪ್ರತಿಕ್ರಿಯಿಸಿ, ಉತ್ತಮ ನಿರ್ಧಾರಗಳನ್ನು ಕೈಗೊಂಡಿದ್ದಿರಿ ಯೆಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು. ಆದರೆ, ಆ ನಿರ್ಧಾರಗಳು ಸಮಾಜಕ್ಕೆ ಕಂಟಕವಾಗುತ್ತಿವೆಯೆಂದು ಗೊತ್ತಾದಾಗ ತಕ್ಷಣ ಅವುಗಳನ್ನು ವಿರೋಧಿಸುತ್ತಿದ್ದರು ಎಂದು ಹೇಳಿದರು.

ಜೆಡಿಎಸ್ ಹಾಗೂ ಬಿಜೆಪಿ ಜಂಟಿಯಾಗಿ ರಾಜ್ಯದಲ್ಲಿ ಆಡಳಿತ ನಡೆಸುತ್ತೇವೆಯೆಂದಾಗ ಯು.ಆರ್.ಅನಂತಮೂರ್ತಿ ಅವರು ನನಗೆ ಫೋನ್ ಮಾಡಿ, ಇದರ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದೇ ವೆ. ನೀವೂ ನಮ್ಮಿಂದಿಗೆ ಕೈಜೋಡಿಸಬೇಕೆಂದು ಕರೆದಿದ್ದರು, ನಾನೂ ಕೂಡ ಹೋಗಿದ್ದೆ, ಬಾಬಾ ಬುಡನ್‌ಗಿರಿ ಪ್ರಕರಣದ ವಿರುದ್ಧ, ಮೋದಿ ಪ್ರಧಾನಿ ಆಗುವುದರ ವಿರುದ್ಧ, ಕೋಮು ವಾದದ ವಿರುದ್ಧ ಧ್ವನಿ ಎತ್ತಿದ್ದರು ಎಂದು ಅವರು ತಿಳಿಸಿದರು.

ಅಂಕಣಕಾರ ಹಾಗೂ ಕನ್ನಡ ಹಂಪಿ ವಿವಿ ಪ್ರಾಧ್ಯಾಪಕ ರಹ ಮತ್ ತರೀಕೆರೆ ಮಾತನಾಡಿ, ಯು.ಆರ್.ಅನಂತಮೂರ್ತಿ ಅವ ರು ತಮ್ಮ ಕೃತಿಗಳಲ್ಲಿ ಜಾತಿ, ಧರ್ಮ, ಸಂಸ್ಕೃತಿ ನಮ್ಮ ಚಿಂತನಾ ಲಹರಿಯನ್ನು ಸಿಮೀತಗೊಳಿಸುವ ಸಾಧ್ಯತೆಗಳಿವೆ ಎಂದು ಉಲ್ಲೇ ಖಿಸಿದ್ದಾರೆ. ಇವರ ಆಲೋಚನಾ ಕ್ರಮಗಳನ್ನು ನಾವು ಅರಿಯಲುಹೊರಟಾಗ ವಿಭಿನ್ನ ಚಿಂತನಾ ಶಕ್ತಿ ಅವರಲ್ಲಿ ಅಡಗಿತ್ತು ಎಂಬು ದು ನಮ್ಮ ಗಮನಕ್ಕೆ ಬರುತ್ತದೆ ಎಂದು ಅವರು ಅಭಿಪ್ರಾಯಿಸಿದರು. ಆಂಗ್ಲರ ಬಗ್ಗೆ ಹಾಗೂ ಮುಸ್ಲಿಮರ ಬಗ್ಗೆ ಅಭಿಮಾನವಿಟ್ಟು ಕೊಡಿದ್ದರು ಎಂದ ಅವರು, ಕೋಮುವಾದ, ಫ್ಯಾಶಿಸ್ಟ್, ಮೂಢ ನಂಬಿಕೆಗಳನ್ನು ವಿರೋಧಿಸುತ್ತಿದ್ದರು ಎಂದು ಹೇಳಿದರು.

ವಿಮರ್ಶಕ ಪ್ರೊ.ಸಿ.ಎನ್.ರಾಮಚಂದ್ರ ಮಾತನಾಡಿ, ಯು.ಆರ್.ಅನಂತಮೂರ್ತಿ ಅವರು ಗೊಡ್ಡು ಸಂಪ್ರದಾಯಗಳ ಬಗ್ಗೆ ವಿರೋಧಿಸಿರುವುದು ನಮಗೆ ಅವರ ಕೃತಿಗಳಿಂದ ತಿಳಿದುಕೊಳ್ಳಬಹುದು. ಅಲ್ಲದೆ, ಹೆಣ್ಣು ಮತ್ತು ಗಂಡಿನಲ್ಲಿ ಮೇಲು ಕೀಳು ಮಾಡಿ ಬೇಡಿ ಎಂದು ಪದೇ ಪದೇ ತಮ್ಮ ಕೃತಿಗಳಲ್ಲಿ ಹಾಗೂ ಪತ್ರಿಕಾ ಅಂಕಣಗಳಲ್ಲಿ ಬರೆದಿರುವುದನ್ನು ನಾವು ಓದಿದ್ದೇವೆ ಎಂದು ಅವರು ತಿಳಿಸಿದರು. 1992ರ ನಂತರ ಬರೆದ ಅವರ ಕೃತಿಗಳಲ್ಲಿ ನಾವು ಭಿನ್ನತೆಯನ್ನು ಕಾಣುತ್ತೇವೆ. ಹಾಗೇ ಆ ಭಿನ್ನತೆಗೆ ಸಮಾಜದಲ್ಲಿ ನಡೆದ ಪಲ್ಲಟಗಳೆ ಕಾರಣವೆಂದು ಹೇಳಬಹುದು. ಅಲ್ಲದೆ, 1993ರಲ್ಲಿ ಅವರು ಕೇಂದ್ರ ಸಾಹಿತ್ಯ ಅಕಾಡಮಿ ಅಧ್ಯಕ್ಷರಾದರು, ಹಾಗೇ ಅವರು ತೃತೀಯ ರಾಷ್ಟ್ರಗಳ ಪ್ರತಿನಿಧಿ ನಾನೆಂದು ಹೇಳಿಕೊಳ್ಳುತ್ತಿದ್ದರು ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಪತ್ರಕರ್ತೆ ಗೌರಿ ಲಂಕೇಶ್, ಕಕೋಸೌವೇ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಲ್.ಅಶೋಕ್, ಚಿಂತಕ ಕೆ.ಫಣಿರಾಜ್, ಫೆಲೋ ರಾಷ್ಟ್ರೀಯ ಕಾನೂನು ವಿವಿಯ ಪ್ರೊ.ವಿ.ಎಸ್.ಶ್ರೀಧರ್ ಮತ್ತಿತರರು ಉಪಸ್ಥಿತರಿದ್ದರು.

Write A Comment