ಕರ್ನಾಟಕ

ಕ್ರಿಕೆಟ್ ಬೆಟ್ಟಿಂಗ್ : ಸಿಸಿಬಿ ಪೊಲೀಸರಿಂದ ದಾಳಿ; 8.27 ಲಕ್ಷ ರೂ. ವಶ

Pinterest LinkedIn Tumblr

Cricket-betting

ಬೆಂಗಳೂರು, ಸೆ.18: ಕ್ರಿಕೆಟ್ ಬೆಟ್ಟಿಂಗ್ ಜೂಜಾಟದ ಅಡ್ಡೆ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿ ಮೂವರನ್ನು ಬಂಧಿಸಿ ಪಣಕ್ಕಿಟ್ಟಿದ್ದ 8.27 ಲಕ್ಷ ರೂ. ಹಣ, 10 ಮೊಬೈಲ್ ಹಾಗು ಲ್ಯಾಪ್‍ಟಾಪ್ ವಶಪಡಿಸಿಕೊಂಡಿದ್ದಾರೆ.

ಮಲ್ಲೇಶ್ವರಂನ ಶಿವಣ್ಣ, ವೈಯಾಲಿಕಾವಲ್ ನಿವಾಸಿ ಪ್ರಕಾಶ್ ಹಾಗೂ ಗಾರೆಬಾವಿಪಾಳ್ಯದ ಸುನೀಲ್ ಬಂಧಿತರು. ವೈಯಾಲಿಕಾವಲ್ ಪೊಲೀಸ್ ಠಾಣಾ ವ್ಯಾಪ್ತಿಯ 10ನೇ ಕ್ರಾಸ್, ಮಾರುತಿ ಬಡಾವಣೆ ಮನೆಯೊಂದರಲ್ಲಿ ಇವರೆಲ್ಲ ಸೇರಿ ಮುಂಬೈ ಇಂಡಿಯನ್ಸ್ ಮತ್ತು ಕೋಲ್ಕತ್ತಾ ನೈಟ್‍ರೈಡರ್ಸ್ ತಂಡಗಳ ನಡುವೆ ನಡೆಯುತ್ತಿದ್ದ ಚಾಂಪಿಯನ್‍ಲೀಗ್ ಕ್ರಿಕೆಟ್ ಆಟಕ್ಕೆ ಸಂಬಂಧಿಸಿದಂತೆ ಸೋಲು-ಗೆಲುವಿನ ಬಗ್ಗೆ ಹಣವನ್ನು ಪಣವಾಗಿ ಕಟ್ಟಿಕೊಂಡು ಜೂಜಾಡುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದ ಸಿಸಿಬಿ ಪೊಲೀಸರು ದಾಳಿ ಮಾಡಿ ಮೂವರನ್ನು ಬಂಧಿಸಿ ಹಣ, ಮೊಬೈಲ್, ಲ್ಯಾಪ್‍ಟಾಪ್ ವಶಪಡಿಸಿಕೊಂಡಿದ್ದಾರೆ.

ಶಿವಣ್ಣ ಎಂಬಾತ ತನ್ನೊಂದಿಗಿದ್ದ ಪ್ರಕಾಶ ಮತ್ತು ಸುನೀಲ್ ಸಹಾಯದಿಂದ ಆನ್‍ಲೈನ್ ಮುಖಾಂತರ ಬೆಟ್‍ಫೇರ್ ಎಂಬ ವೆಬ್‍ಸೈಟ್‍ನಲ್ಲಿ ಬರುವ ಬೆಲೆಗೆ ಅನುಗುಣವಾಗಿ ಮಹೇಶ, ಯೋಗಿ, ಕುಮಾರ್, ಶ್ರೀನಿವಾಸ್ ಮತ್ತಿತರರಿಂದ ಮೊಬೈಲ್ ಮೂಲಕ ಹಣವನ್ನು ಬೆಟ್ಟಿಂಗ್ ಕಟ್ಟಿಸಿಕೊಂಡು ಹಣದ ವಿವರವನ್ನು ಚೀಟಿಗಳಲ್ಲಿ ಬರೆಯುತ್ತಾ ಚೆನ್ನೈ ಸೂಪರ್‍ಕಿಂಗ್ಸ್ ಗೆದ್ದರೆ 100ರೂ.ಗೆ 50ರೂ.ನಂತೆ ಕೋಲ್ಕತ್ತಾ ನೈಟ್‍ರೈಡರ್ಸ್ ಗೆದ್ದರೆ 100ರೂ.ಗೆ 200 ರೂ. ಸೇರಿಸಿ ಕೊಡಬೇಕೆಂದು ಬೆಟ್ಟಿಂಗ್ ನಡೆಸುತ್ತಿದ್ದರು. ಈ ಆರೋಪಿಗಳು ರಾಜಸ್ಥಾನ, ಮುಂಬೈ ಮತ್ತು ಕೋಲ್ಕತ್ತಾದಲ್ಲಿರುವ ಕ್ರಿಕೆಟ್ ಬುಕ್ಕಿಗಳ ಜೊತೆ ಸಂಪರ್ಕವಿಟ್ಟುಕೊಂಡು ಜೂಜಾಟದಲ್ಲಿ ತೊಡಗಿರುವ ಬಗ್ಗೆ ತನಿಖೆಯಿಂದ ಗೊತ್ತಾಗಿದೆ. ಹೊರರಾಜ್ಯದ ಬುಕ್ಕಿಗಳ ಪಾತ್ರದ ಬಗ್ಗೆ ಹೆಚ್ಚಿನ ತನಿಖೆಯಿಂದ ಪೆÇಲೀಸರು ಮಾಹಿತಿಕಲೆ ಹಾಕುತ್ತಿದ್ದಾರೆ. ಆರೋಪಿಗಳ ಪೈಕಿ ಶಿವಣ್ಣ ಈ ಹಿಂದೆ 2007, 2009 ಹಾಗೂ 2012ನೇ ಸಾಲಿನಲ್ಲಿ ಕ್ರಿಕೆಟ್ ಜೂಜಾಟದಲ್ಲಿ ತೊಡಗಿ ಬಂಧಿತನಾಗಿದ್ದನು.

Write A Comment