ಕರ್ನಾಟಕ

ಸರಗಳ್ಳನಿಗೆ ಗುಂಡೇಟು : ಬೆಂಗಳೂರು ಪೊಲೀಸರ ಮಿಂಚಿನ ಕಾರ್ಯಾಚರಣೆ

Pinterest LinkedIn Tumblr

Bang firing

ಯಲಹಂಕ, ಸೆ.16: ಪಲ್ಸರ್ ಬೈಕಿನಲ್ಲಿ ಬಂದು ಮಹಿಳೆಯರ ಸರ ಕದಿಯುತ್ತಿದ್ದ ಇಬ್ಬರು ಸರಗಳ್ಳರ ಪೈಕಿ ಒಬ್ಬನನ್ನು ಪೊಲೀಸರು ಸಿನಿಮೀಯ ರೀತಿಯಲ್ಲಿ ಚೇಸ್ ಮಾಡಿ ಕಾಲಿಗೆ ಗುಂಡು ಹಾರಿಸಿ ಬಂಧಿಸಿರುವ ಘಟನೆ ಇಂದು ಬೆಳಗ್ಗೆ ಯಲಹಂಕ ಪೊಲೀಸ್ ಠಾಣೆ ವ್ಯಾಪ್ತಿಯ ಕೊಟ್ಟಿಗೆರೆಯಲ್ಲಿ ನಡೆದಿದೆ.

ಸಿಕ್ಕಿ ಬಿದ್ದಿರುವ ಸರಗಳ್ಳನನ್ನು ಹೆಗಡೆ ನಗರ ನಿವಾಸಿ ಅಪ್ಪಿ ಅಲಿಯಾಸ್ ರಾಜು (27) ಎಂದು ಗುರುತಿಸಲಾಗಿದೆ. ಈ ಭಾಗದಲ್ಲಿ ಸರಗಳ್ಳತನ ಹೆಚ್ಚಾಗುತ್ತಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಇನ್ಸ್‍ಪೆಕ್ಟರ್ ರಾಜೀವ್‍ಗೌಡ ಮತ್ತು ಸಿಬ್ಬಂದಿ ವರ್ಗದವರು ಇಂದು ಮುಂಜಾನೆ ಗಸ್ತು ತಿರುಗುತ್ತಿದ್ದರು.ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದ ವೆಂಕಟಾಲ ಬಳಿ ಅಪ್ಪಿ ಹಾಗೂ ಆತನ ಸ್ನೇಹಿತ ಸರಗಳ್ಳತನ ಮಾಡಲು ಹೊಂಚು ಹಾಕುತ್ತಿದ್ದರು.

ಪೊಲೀಸರ ಆಗಮನದ ಸುಳಿವರಿತ ಸರಗಳ್ಳರು ತಕ್ಷಣ ಪಲ್ಸರ್ ಬೈಕ್‍ನಲ್ಲಿ ಪರಾರಿಯಾಗಲು ಯತ್ನಿಸಿದರು. ಆದರೆ, ಪೊಲೀಸರು ಸಿನಿಮೀಯ ರೀತಿಯಲ್ಲಿ ತನ್ನ ಸಿಬ್ಬಂದಿಯೊಂದಿಗೆ ಸರಗಳ್ಳರನ್ನು ಹಿಂಬಾಲಿಸಿದರು. ಸಮೀಪದ ನೀಲಗಿರಿ ತೋಪಿನಲ್ಲಿ ಅಪ್ಪಿ ಹಾಗೂ ಆತನ ಸಹಚರ ರಾಜೀವ್‍ಗೌಡ ಅವರ ಮೇಲೆ ಮಾರಕಾಸ್ತ್ರದಿಂದ ದಾಳಿ ನಡೆಸಿದರು.

ಆತ್ಮರಕ್ಷಣೆಗಾಗಿ ಇನ್ಸ್‍ಪೆಕ್ಟರ್ ರಾಜೀವ್‍ಗೌಡ ತಮ್ಮ ರಿವಾಲ್ವಾರ್‍ನಿಂದ ಅಪ್ಪಿ ಮೇಲೆ ಗುಂಡು ಹಾರಿಸಿದರು. ಆತನ ಕಾಲಿಗೆ ಗುಂಡು ತಗುಲಿದ್ದು, ತಕ್ಷಣ ಆತನನ್ನು ವಶಕ್ಕೆ ಪಡೆದುಕೊಳ್ಳಲಾಯಿತು. ಅಪ್ಪು ಜತೆಗಿದ್ದ ಮತ್ತೊಬ್ಬ ಸಹಚರ ಪರಾರಿಯಾಗಿದ್ದು, ಆತನ ಬಂಧನಕ್ಕೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಶೂಟೌಟ್‍ನಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಅಪ್ಪಿಗೆ ಯಲಹಂಕ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಇನ್ಸ್‍ಪೆಕ್ಟರ್ ರಾಜೀವ್‍ಗೌಡ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

ಸ್ಥಳಕ್ಕೆ ಹೆಚ್ಚುವರಿ ಪೆÇಲೀಸ್ ಆಯುಕ್ತರಾದ ರವಿ, ಹರಿಶೇಖರ್, ಎಸಿಪಿ ತೀರ್ಥರಾಜು, ಶಾಸಕ ಎಸ್.ಆರ್.ವಿಶ್ವನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Write A Comment